ಬೆಳಗಾವಿ ರೈತರ ಸಮಸ್ಯೆಗೆ ಸ್ಪಂದನೆ: ಹೆಚ್.ಡಿ. ದೇವೇಗೌಡ ಭರವಸೆ


ಧಾರವಾಡ 19:  ಮಹದಾಯಿ ವಿಷಯದ ಬಗ್ಗೆ ಈಗಾಗಲೇ ರಾಜ್ಯದ ಸಮ್ಮೀಶ್ರ ಸಕರ್ಾರ ಸುಪ್ರಿಂ ಕೋರ್ಟಗೆ ಹೋಗಲು ತಿಮರ್ಾನಿಸಿದೆ.  ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸಕರ್ಾರ ಸರಿಪಡಿಸಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ ಹೇಳಿದರು.

ಅವರು ಧಾರವಾಡದ ಶಾಂತಿನಿಕೇತನ ನಗರದಲ್ಲಿರುವ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ನಿವಾಸಕ್ಕೆ ರವಿವಾರ ಮಧ್ಯಾಹ್ನ  ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

ನಾವು ನಮ್ಮ ರಾಜ್ಯದ ಪರ ಎಲ್ಲ ಪ್ರಯತ್ನ ಮಾಡಲು ಸಿದ್ಧವಿದ್ದೇವೆ. ರಾಜ್ಯದ ಹಿತಕ್ಕೆ ಧಕ್ಕೆ ಆಗದಂತೆ ಸಮ್ಮಿಶ್ರ ಸಕರ್ಾರ ನಡೆದುಕೊಳ್ಳುತ್ತದೆ. ರಾಜ್ಯದ ಹಿತ ಬಿಟ್ಟು ಕೊಡುವ ಪ್ರಶ್ನೇಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕಬ್ಬು ಬೆಳಗಾರರ ಸಮಸ್ಯೆಯನ್ನು ಸ್ವತ್ವಃ ತಾವೇ ಪರಿಹಾರ ಕೊಡಲು ಸಿಎಂ ಬೆಂಗಳೂರಿಗೆ ಕರೆದಿದ್ದಾರೆ. ಈ ಸಮಸ್ಯೆ ಕೇವಲ ಒಂದು ಕಡೆ ಮಾತ್ರವಲ್ಲ ಬಹುತೇಕ ಕಡೆ    ಅದಕ್ಕೆ ಬೆಂಗಳೂರಿಗೆ ಕರೆದಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ತಮ್ಮ ಕಾರ್ಯ ಒತ್ತಡದ ಹಿನ್ನೆಲೆ ಸಿಎಂಗೆ ಬೆಳಗಾವಿಗೆ ಬರಲು ಆಗುತ್ತಿಲ್ಲ. ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಯಲಿದ್ದು, ಸಿಎಂ ಅಲ್ಲಿಯೇ ಎಲ್ಲರಿಗೂ ಲಭ್ಯರಾಗಲಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಸಕ್ಕರೆ ಕಾಖರ್ಾನೆಗಳ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.


ಬಿಜೆಪಿಯೇತರ ಮಹಾಘಟಬಂಧನದಿಂದ ಪ್ರಧಾನಿ ಅಭ್ಯಥರ್ಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವೇಗೌಡರು ನಾನು ಲೋಕಸಭೆ ಚುನಾವಣೆಗೆ ನಿಲ್ಲುವುದರ ಬಗ್ಗೆಯೇ ತಿಮರ್ಾನ ಮಾಡಿಲ್ಲ. ಇನ್ನು ಮಹಾಘಟಬಂಧನದ ಪ್ರಧಾನಿ ಅಭ್ಯಥರ್ಿ ಅನ್ನೋದು ಉಹಾಪೋಹಾ ಮಾತ್ರ. ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಈ ಬಗ್ಗೆ ತೀಮರ್ಾನ ಮಾಡಬೇಕಿದೆ. ನಾವು ಈಗ ಕಾಂಗ್ರೆಸ್ ಬೆಂಬಲದಲ್ಲಿದ್ದೇವೆ. ಆ ಪಕ್ಷ ತೆಗೆದುಕೊಳ್ಳುವ ತೀಮರ್ಾನಕ್ಕೆ ನಾವು ಈಗ ಬದ್ಧವಾಗಿದ್ದೇವೆ ಎಂದರು.

ಈ ತಿಂಗಳೊಳಗೆ ಎಲ ್ಲನಿಗಮ ಮಂಡಳಿಗಳಿಗೆ ನೇಮಕಗಳು ನಡೆಯುತ್ತವೆ. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ, ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದರು. 

ಲಿಂಗಾಯತ ಧರ್ಮ ವಿಚಾರದಲ್ಲಿ ನಾವು ಇರಲಿಲ್ಲ. ಮೊದಲಿನಿಂದಲೂ ನಾವು ಅದರ ಬಗ್ಗೆ ವಿಚಾರ ಮಾಡಿಲ್ಲ. ಹಾಗಾಗಿ ಈ ಬಗ್ಗೆ ಮಾತನಾಡೊಲ್ಲ ಎಂದರು.

ಉತ್ತರ ಕನರ್ಾಟಕ ಶೈಲಿ ಊಟ ಸವಿದ ದೇವೇಗೌಡರು :

ಇದಕ್ಕೂ ಮುನ್ನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ನಿವಾಸದಲ್ಲಿ ಬಿಸಿ ಬಿಸಿ ಬಿಳಿ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಎಣ್ಣೆಗಾಯಿ ಪಲ್ಯ ಹಾಗೂಕಾಳು ಪಲ್ಯ ಸವಿದರು. ರೊಟ್ಟಿ ಮೇಲೆ ವಿಶೇಷ ಪ್ರೀತಿ ಹೊಂದಿರುವ ದೇವೇಗೌಡರು ಇದೇ ವೇಳೆ ಮುದ್ದೆ ಸವಿಯಲು ನಿರಾಕರಿಸಿದ್ದು ವಿಶೇಷವಾಗಿತ್ತು.

ಒಂದು ತಿಂಗಳೊಳಗೆ ಕೋನರಡ್ಡಿಗೆ ದೊಡ್ಡ ಸ್ಥಾನ :

ಇದೇ ವೇಳೆ ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರು ಆಗಿರುವ ಎನ್.ಹೆಚ್. ಕೋನರಡ್ಡಿ ಅವರನ್ನು ಉತ್ತರ ಕನರ್ಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಬರುವ ಒಂದು ತಿಂಗಳೊಳಗೆ ದೊಡ್ಡ ಸ್ಥಾನ ನೀಡಲಾಗುವುದು. ಈಗಾಗಲೇ ಅವರಿಗೆ ಯಾವ ಹುದ್ದೆ ನೀಡಬೇಕು ಎಂಬುದು ತೀಮರ್ಾನವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ, ಕುಂದಗೋಳ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ಉದ್ಯಮಿ ಬಿ.ಟಿ. ರಡ್ಡಿ, ಮಹಾನಗರ ಪಾಲಿಕೆ ಸದಸ್ಯ ರಾಜು ಅಂಬೋರೆ, ಮಾಜಿ ಸದಸ್ಯೆ ವಿಜಯಲಕ್ಷ್ಮಿ ಲೂತಿಮಠ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.