ರಾಮದುರ್ಗ 16: ಅಧಿಕ ವಾಹನ ಸಂಚಾರವಿರುವ ಬೆಳಗಾವಿಯಿಂದ ಬಾಗಲಕೋಟ್ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ಧಾರಿಯ ರಾಮದುರ್ಗ ತಾಲೂಕಿನ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಅವಘಡಗಳನ್ನು ತಡೆಯಲು ರಸ್ತೆ ಸುಧಾರಣೆಗೆ ಕ್ರಮ ತೆಗದುಕೊಳ್ಳಲಾಗುತ್ತಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಕೆ.ಚಂದರಗಿ ಹಾಗೂ ಸಾಲಹಳ್ಳಿ ಹತ್ತಿರ ಬೆಳಗಾವಿ-ಬಾಗಲಕೋಟ್ ರಾಜ್ಯ ಹೆದ್ಧಾರಿಯ ತಾಲೂಕಿನ ವ್ಯಾಪ್ತಿಯ ವಿವಿಧೆಡೆ ರಸ್ತೆ ಅಫಘಾತ ಸಂಭವಿಸುವ ಸ್ಥಳಗಳಲ್ಲಿ ಸುಮಾರು 3.8 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆನಲೈನ್ ಮುಖಾಂತರ ಕಾಮಗಾರಿಗೆ ಟೆಂಡರ್ ಹಾಕುವ ಸಂದರ್ಭದಲ್ಲಿ ಗುತ್ತಿಗೆದಾರರು ಸರಕಾರ ನಿಗಧಿಪಡಿಸಿದ ದರಕ್ಕಿಂತ ಕಡಿಮೆ ಮೊತ್ತದಲ್ಲಿ ಕಾಮಗಾರಿ ಮುಗಿಸಿಕೊಡುವುದಾಗಿ ಟೆಂಡರ್ ಹಾಕಿ ನಂತರ ಕೆಲಸಗಳನ್ನು ಬೇಜವಾಬ್ಧಾರಿಯಿಂದ ಮಾಡಿದಲ್ಲಿ ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಿನೆ. ಗುತ್ತಿಗೆದಾರರು ಕುಂಟು ನೆಪ ಪ್ರದಶರ್ಿಸದೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಿದರು.
ಜಿ.ಪಂ ಸದಸ್ಯ ಮಾರುತಿ ತುಪ್ಪದ, ಎಪಿಎಂಸಿ ಸದಸ್ಯ ಮಾರುತಿ ಕೊಪ್ಪದ, ಗ್ರಾಮದ ಮುಖಂಡ ಮಲ್ಲಿಕಾಜರ್ುನ ಕೊಪ್ಪದ, ಗ್ರಾ.ಪಂ ಅಧ್ಯಕ್ಷ ಹಜರತಸಾಬ ಪೈಲವಾನ, ಉಪಾಧ್ಯಕ್ಷೆ ರಾಧಾ ಬಂಡಿವಡ್ಡರ, ಗ್ರಾ.ಪಂ ಸದಸ್ಯರಾದ ರಮೇಶ ಅಂತಾಪೂರ, ಶಂಕರಗೌಡ ಹೊಸಗೌಡ್ರ, ಶಿವನಗೌಡ ಧರನಗೌಡ್ರ, ಮುಖಂಡರಾದ ಶಿವು ಹೊಸಗೌಡ್ರ, ಹೂವಪ್ಪ ಬಂಡಿವಡ್ಡರ, ಚಂದ್ರು ಬೆಳವಡಿ, ಲೋಕೋಪಯೋಗಿ ಇಲಾಖೆಯ ಇಂಜೀನಿಯರ್ ರವಿಕುಮಾರ, ಕೆ.ಚಂದರಗಿ ಹಾಗೂ ಸಾಲಹಳ್ಳಿ ಗ್ರಾಮದ ಜನಪ್ರತಿನಿಧಿಗಳು ಹಾಗೂ ಇತರರಿದ್ದರು.