ಮಾನವ ಹಕ್ಕುಗಳ ಮೊದಲ ಪ್ರತಿಪಾದಕ ಜ್ಯೋತಿಬಾ ಫುಲೆ: ದಿಲೀಪ ಕಾಮತ
ಲೋಕದರ್ಶನ ವರದಿ
ಬೆಳಗಾವಿ 28: ಮಾನವ ಹಕ್ಕುಗಳನ್ನು ಮೊದಲು ರಕ್ಷಿಸಿ ಶೋಷಿತ ವರ್ಗವು ಗೌರವದಿಂದ ಬದುಕುವಂತೆ ಮಾಡಿದ್ದು ಮಹಾತ್ಮಾ ಜ್ಯೋತಿಬಾ ಫುಲೆ ಅವರು. ಹತ್ತೊಂಬತ್ತನೆಯ ಶತಮಾನದ ಈ ಮಹಾಪುರುಷ ಇವತ್ತು ಪ್ರಪಂಚದಾದ್ಯಂತ ಚಾಲ್ತಿಯಲ್ಲಿರುವ ಮಾನವ ಹಕ್ಕುಗಳ ಮೌಲ್ಯವನ್ನು ಗುರುತಿಸಿ ಹೋರಾಟ ಮಾಡಿದವರಾಗಿದ್ದಾರೆ ಎಂದು ಜನಪರ ಹೋರಾಟಗಾರ ದಿಲೀಪ ಕಾಮತ ಹೇಳಿದರು. ಅವರು ಇಲ್ಲಿಯ ಭಾವುರಾವ ಕಾಕತಕರ ಕಾಲೇಜಿನ 'ಪಾಲಿಟಿಕಲ್ ಸೈನ್ಸ್ ಕ್ಲಬ್ ಹಾಗು 'ಐ ಕ್ಯು ಎ ಸಿ' ವಿಭಾಗ ಜಂಟಿಯಾಗಿ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ 'ಮಾನವ ಹಕ್ಕುಗಳ ತರಬೇತಿ ಕಾಯರ್ಾಗಾರ' ವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಉಪಾಧ್ಯಕ್ಷ ರಾಜಾಭಾವು ಪಾಟೀಲ ಅವರು ವಹಿಸಿದ್ದರು. ವೇದಿಕೆಯ ಮೇಲೆ ಪಾಚಾರ್ಯ ಡಾ.ಎಸ್.ಎನ್.ಪಾಟೀಲ, ದ.ಮ.ಶಿ. ಮಂಡಳದ ಕಾರ್ಯದಶರ್ಿ ಸುಭಾಷ ಓವೂಳಕರ, ಪ್ರೊ.ಭಕ್ತಿ ದೇಸಾಯಿ, ಪ್ರೊ.ಮಲ್ಲಿಕಾಜರ್ುಮ ಶೇಗುಣಸಿ ಅವರಿದ್ದರು.
ಸಮಕಾಲೀನದಲ್ಲಿ ಯುವಕರಿಗೆ ಈ ಹಕ್ಕುಗಳು ಮತ್ತು ಅದರ ಬಳಕೆಯ ಮಹತ್ವದ ಅರಿವಿರಬೇಕೆಂದು ಕಾಮತ ಹೇಳಿದರು. ಅತಿಥಿಗಳಾದ ಸುಭಾಷ ಓವುಳಕರ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಎನ್.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತಗಳನ್ನಾಡಿದರು. ಪ್ರೊ.ಭಕ್ತಿ ದೇಸಾಯಿ ಪರಿಚಯಿಸಿದರು. ಪ್ರೊ.ಮಲ್ಲಿಕಾಜರ್ುನ ಶೇಗುಣಸಿ ವಂದಿಸಿದರು. ಸಂಜೆ ವರೆಗೆ ನಡೆದ ಈ ಕಾಯರ್ಾಗಾರದಲ್ಲಿ ವಿದ್ಯಾಥರ್ಿಗಳು, ಪ್ರ್ರಾಧ್ಯಾಪಕರು ಭಾಗಿಯಾಗಿದ್ದರು. ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಇದನ್ನು ಪ್ರಾಯೋಜಿಸಿತ್ತು.