ಬೇಡ್ತಿ - ವರದಾ ಜೋಡಣೆ: ಅರಣ್ಯ ಇಲಾಖೆಗೆ ಯಾವುದೇ ಸರ್ವೆಗೆ ಪ್ರಸ್ತಾವನೆ ಬಂದಿಲ್ಲ ಹಿ ಸಿಸಿಎಫ್ ಹೀರಾಲಾಲ್
Bedti-Varda linkage: Forest Department has not received any survey proposal: CCF Hiralal
ಕಾರವಾರ 17 : ಬೇಡ್ತಿ ಹಿ ಅಘನಾಶಿನಿ ನದಿ ತಿರುವು ಯೋಜನೆಯ ಡಿಪಿಆರ್ ಸಿದ್ಧವಾಗಿಲ್ಲ. ಡಿಪಿಆರ್ ವೆ ಮುನ್ನ ಅರಣ್ಯ ಪ್ರದೇಶದ ಸರ್ವೆ ಕಾರ್ಯ ನಡೆಯಬೇಕು. ಆದರೆ ಅಂತಹ ಸರ್ವೆಗೆ ಅರಣ್ಯ ಇಲಾಖೆಯನ್ನು ಯಾರೂ ಕೇಳಿಲ್ಲ. ಇಲಾಖೆಯ ಎದುರು ಅಂತಹ ಪ್ರಸ್ತಾವನೆಯೇ ಇಲ್ಲ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಹೇಳಿದರು .ಕಾರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರುನಮ್ಮ ಜಿಲ್ಲೆಯಲ್ಲಿ ಕ್ಯಾಸಲರಾಕ್ ಭಾಗದಲ್ಲಿ ರೈಲ್ವೆ ಹಳಿ ಡಬ್ಬಲಿಂಗ್ ಕಾರ್ಯಕ್ಕೆ 9.5 ಹೆಕ್ಟೇರ್ ಅರಣ್ಯ ಭೂಮಿ ಕೇಳಿದ್ದಾರೆ. ಬಿಟ್ಟರೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ 56 ಹೆಕ್ಟೇರ್ ಅರಣ್ಯ ಭೂಮಿ ಕೇಳಿದ್ದಾರೆ.
ಇವೆರಡು ಯೋಜನೆ ಮಾತ್ರ ಈಗ ನಿರ್ಣಯ ಆಗಬೇಕಿವೆ. ಶರಾವತಿ ಪಂಪ್ ಸ್ಟೋರೇಜ್ ಗೆ ಪರಿಸರ ತಜ್ಞರು, ವನ್ಯಜೀವಿ ಮಂಡಳಿ ತಜ್ಞರು ನಕಾರಾತ್ಮಕ ಭಾವನೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅದಿನ್ನು ಚರ್ಚೆಯ ಹಂತದಲ್ಲಿದೆ. ಉನ್ನತ ಮಟ್ಟದಲ್ಲಿ ನಿರ್ಣಯ ವಾಗಬೇಕಿದೆ ಎಂದರು. ತಾಳಗುಪ್ಪ ಶಿರಸಿ ಹಾವೇರಿ ರೈಲು ಮಾರ್ಗದ ಯೋಜನೆ ಸಹ ಅರಣ್ಯ ಇಲಾಖೆಯ ಮುಂದಿಲ್ಲ ಎಂದರು. ನಮ್ಮ ಇಲಾಖೆಯ ಎದುರು ಪ್ರಸ್ತಾಪವೇ ಇಲ್ಲ : ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಈತನಕ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಪ್ರಸ್ತಾವನೆ ಅಥವಾ ಸರ್ವೆಗೆ ಸೂಚನೆ ಈವರೆಗೆ ಬಂದಿಲ್ಲ.
ಅರಣ್ಯ ಇಲಾಖೆಯ ಅನುಮತಿ ಇಲ್ಲದೇ, ಸರ್ವೆ ಕಾರ್ಯ ನಡೆಸಲು ಸಾಧ್ಯವಿಲ್ಲ ಎಂದರು. ನಾವು ಯಾವುದೇ ಅನುಮತಿಯನ್ನು ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು . ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ಜೋಡಣೆ ಮಾಡುವ ಯೋಜನೆಗೆ ಸ್ಥಳೀಯರು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಯೋಜನೆಗೆ ವಿರೋಧಿ ಸಮಾವೇಶವನ್ನೂ ಈಚೆಗೆ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ನದಿ ಜೋಡಣೆ ಯೋಜನೆಯಿಂದ ಉಂಟಾಗುವ ಪರಿಸರ ಹಾನಿ, ಅರಣ್ಯ ನಾಶ ಮತ್ತು ಸ್ಥಳೀಯರ ಬದುಕಿನ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಲಾಗಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಡಿ.ಪಿ.ಆರ್ . ಸಿದ್ಧಪಡಿಸಲು ಕೇಂದ್ರ ಸರ್ಕಾರದ ಜೊತೆ ಸಹಿ ಹಾಕಿರುವುದಾಗಿ ಕಾರವಾರದಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿತ್ತು.ಆದರೆ ಈ ಕುರಿತು ಪ್ರತಿಕ್ರಿಯಿಸಿದ ಕೆನರಾ ಅರಣ್ಯ ವಲಯ ಸಿಸಿಎಫ್ ಹೀರಾಲಾಲ್, ರಾಜ್ಯ ಸರ್ಕಾರ ಡಿ.ಪಿ.ಆರ್ಗೆ ಸಹಿ ಹಾಕಿರಬಹುದು. ಆದರೆ ಅರಣ್ಯ ಇಲಾಖೆಗೆ ಸರ್ವೆ ಕಾರ್ಯ ನಡೆಸಲು ಯಾವುದೇ ಪ್ರಸ್ತಾವನೆ ಬಂದಿಲ್ಲ. ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಈ ರೀತಿಯ ಯೋಜನೆಗಳು ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಅವರ ಜೊತೆ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 