ಲೋಕದರ್ಶನ ವರದಿ
ಕೊಪ್ಪಳ 14: ಬೆಂಗಳೂರಿನಲ್ಲಿ ನಡೆದ ಕನರ್ಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆ ದಿ. 11ರಂದು ಜರುಗಿತು.
ಈ ಚುನಾವಣೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಸಂಘದ ಸದಸ್ಯರು ಭಾಗವಹಿಸಿ ಮತದಾನ ಮಾಡುವ ಮೂಲಕ ಹೆಚ್ಚು ತುರಿಸಿನಿಂದ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಹೈದ್ರಾಬಾದ ಕನರ್ಾಟಕ ಭಾಗದ ಬಳ್ಳಾರಿಯ ಬಿ. ಮೌಲಾಲಿ ಹಾಗೂ ಅವರ ತಂಡಕ್ಕೆ ಮತವನ್ನು ನೀಡಿ ಆಯ್ಕೆ ಮಾಡಿದ್ದಾರೆ.
ಪ್ರಸ್ತುತ ಚುನಾವಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಸಮಾಜದ ಎಲ್ಲಾ ಮತದಾರರಿಗೂ, ಯುವಕರಿಗೂ, ಹಿರಿಯರಿಗೂ ಹಾಗೂ ಜಿಲ್ಲೆಯ ಎಲ್ಲಾ ಸಮಾಜದ ಬಂಧುಗಳಿಗೆ ಧನ್ಯವಾದಗಳನ್ನು ಕೊಪ್ಪಳ ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷರಾದ ಬಾಳಪ್ಪ ಬಾರಕೇರ ತಿಳಿಸುವುದರೊಂದಿಗೆ ನೂತನ ರಾಜ್ಯಾಧ್ಯಕ್ಷರಿಗೆ ಜಿಲ್ಲೆಯ ಸಮಸ್ತ ಸಮಾಜದ ಬಂಧುಗಳಿಂದ ಅಭಿನಂದನೆಗಳನ್ನು ಪತ್ರಿಕೆಯ ಮೂಲಕ ತಿಳಿಸಿದ್ದಾರೆ.