ಬದುಕಿಗೆ ಬೆಳಕು ನೀಡಿದ ಗುರುವಿಗೆ ಕೃತಜ್ಞರಾಗಿರಿ; ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
ತಾಳಿಕೋಟಿ, 23; ನಿಮ್ಮನ್ನು ತಿದ್ದಿ ಸಂಸ್ಕಾರವಂತರನ್ನಾಗಿ ಮಾಡಿ ಜ್ಞಾನದ ಬೆಳಕಿನಿಂದ ಬದುಕಿನ ಉದ್ದೇಶವನ್ನು ತಿಳಿಸಿಕೊಟ್ಟ ನಿಮ್ಮ ಗುರುಗಳನ್ನು ಎಂದೂ ಮರೆಯಬೇಡಿ ಅವರಿಗೆ ಕೃತಜ್ಞರಾಗಿರಿ ಎಂದು ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಎಸ್ ಕೆ ಪ್ರೌಢ ಶಾಲಾ ಆವರಣದಲ್ಲಿ 1993-94ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ರವಿವಾರ ಹಮ್ಮಿಕೊಂಡ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಜೀವನ ಕ್ಷಣಿಕವಾದದ್ದು ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ ಆದರೆ ಬದುಕಿರುವಷ್ಟು ದಿನ ಸಂತೋಷದಿಂದ ಇದ್ದು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿ, ನೀವು ಕಲಿತ ಸಂಸ್ಥೆಯಲ್ಲಿ ಕಳೆದ ವಿದ್ಯಾರ್ಥಿ ಜೀವನವನ್ನು ಸ್ಮರಿಸಲು 30 ವರ್ಷಗಳ ನಂತರ ಒಂದಾಗಿದ್ದೀರಿ ಈ ಕ್ಷಣವನ್ನು ಸುಂದರವಾಗಿಸಿಕೊಳ್ಳಿ ಶ್ರೀ ಖಾಸ್ಗತರ ಕೃಪಾಶೀರ್ವಾದ ನಿಮ್ಮ ಮೇಲಿರಲಿ ಎಂದರು.
ವಿವಿ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಸಾರ್ಥಕ ಕಾರ್ಯಕ್ರಮ ನಿಮಗೆ ವಿದ್ಯೆ ನೀಡಿದ ಗುರುವನ್ನು ಗೌರವಿಸುವ ಕಾರ್ಯವನ್ನು ಮಾಡಿದ್ದೀರಿ, ಇದೇ ರೀತಿ ನಿಮ್ಮ ಮುಂದಿನ ಬದುಕಿನಲ್ಲೂ ಎಲ್ಲರೂ ಒಂದಾಗಿ ಪ್ರೀತಿಯಿಂದ ಇರಲು ಪ್ರಯತ್ನಿಸಿ ಎಂದರು. ಶಿಕ್ಷಕರಾದ ಪಿ.ಬಿ.ಬಂಟನೂರ,ಡಾ. ಅನೀಲಕುಮಾರ್ ಇರಾಜ್, ಶ್ರೀಮತಿ ಬಿ.ಆರಿ್ಬರಾದಾರ ಮಾತನಾಡಿದರು. ಅದ್ಭುತ ಮತ್ತು 1993-94 ನೇ ಸಾಲಿನ ವಿದ್ಯಾರ್ಥಿಗಳಾದ ಶ್ರೀಮತಿ ಶಕುಂತಲಾ ಹಾದಿಮನಿ,ರಾಜು ವಿಜಾಪುರ, ಪ್ರಕಾಶ್ ಕಟ್ಟಿಮನಿ, ಸುಧಾ ಮಹೀಂದ್ರಕರ, ನಾಗರತ್ನ ದರ್ಜಿ ಹಾಗೂ ಕೇಶವ ಹಜೇರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗುರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕಲಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಮಿತ್ರರಿಗೆ ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ನ್ಯಾಯಾಧೀಶ ಎಸ್ ಎಮ್ ಜಾಲವಾದಿ, ನಿವೃತ್ತ ಶಿಕ್ಷಕರಾದ ಬಿ.ಬಿ. ಕೊಂಗಂಡಿ, ಆರ್ ಆರ್ ಬಡಿಗೇರ, ಡಿವಿ ಬಡಿಗೇರ, ಜೀವಿ ಕುಲಕರ್ಣಿ, ಎಂ.ಎಸ್. ಬಿರಾದಾರ, ಎಸ್ ಸಿ ಉಪ್ಪಾರ,ಎಸ್ ಬಿ ಹೇಳವಾರ, ಸಿ.ವಿ. ಮೆಣಸಿನಕಾಯಿ, ಆರ್ ಕೆ ಭುಸಾರೆ, ಎಂಎ ಬಾಗೇವಾಡಿ, ಆರ್ ಬಿ ದಾನಿ, ಎಸ್.ವಿ. ಬೆನಕಟ್ಟಿ, ವಾಯ್.ಎಸ್.ನಾದ, ಮುಖ್ಯ ಶಿಕ್ಷಕಿ ಬಿಟಿ ಸಜ್ಜನ, ದೈಹಿಕ ಶಿಕ್ಷಕಿ ಎಂ ಆರ್ ಕುಲಕರ್ಣಿ, ಶಿಕ್ಷಕ ಎ. ಎಚ್.ಹೂಗಾರ, ಹಾಗೂ ಬೋಧಕೇತರ ಸಿಬ್ಬಂದಿಗಳು, 1993-94 ನೇ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮಂಜುಳಾ ನಿಡಗುಂದಿ ಯಾವ ಸಂಗಡಿಗರು ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್ ಎಸ್ ವಾಲಿಕಾರ ನಿರೂಪಿಸಿ ವಂದಿಸಿದರು.