ಅಪರಾಧ ಚಟುವಟಿಕೆಗಳಿಗೆ ಆಟೋ ಬಳಸುತ್ತಾರೆ ಎಚ್ಚರವಿರಲಿ: ಚಿಣ್ಣನ್ನವರ

ಧಾರವಾಡ 21: ದುಷ್ಪರಿಣಾಮಗಳು, ಸಮಾಜ ಘಾತುಕ ಶಕ್ತಿಗಳು ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆಯಂತಹ ಅಪರಾಧ ಕೃತ್ಯಗಳಿಗೆ ಸುಲಭವಾಗಿ ಸಿಗುವ ಆಟೋ ವ್ಯವಸ್ಥೆಯನ್ನು ಬಳಸುತ್ತಾರೆ. ಚಾಲಕರು ಎಚ್ಚರದಿಂದ ಇರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಹೇಳಿದರು.

     ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಮರ್ಿಕ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಆದರ್ಶ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ, ಅಂಬೇಡ್ಕರ್ ಕಾಮರ್ಿಕ ಸಹಾಯಹಸ್ತ ಯೋಜನೆಯಡಿ ಖಾಸಗಿ ವಾಣಿಜ್ಯ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ಗಳ ವಿತರಣೆ ಹಾಗೂ ತರಬೇತಿ ಕಾಯರ್ಾಗಾರ ಉದ್ಘಾಟಿಸಿ, ಮಾತನಾಡಿದರು. 

ಅಪರಾಧಗಳಿಗೆ ಆಸ್ಪದವಾಗದಂತೆ ಆಟೋ ಚಾಲಕರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಪ್ರಾಮಾಣಿಕತೆಯಿಂದ ಪ್ರಯಾಣಿಕರ ಸೇವೆ ಮಾಡಬೇಕು. ಆಟೋಗಳಿಗೆ ವಿಮೆ, ನವೀಕೃತಗೊಂಡ ವಾಹನ ಚಾಲನಾ ಪತ್ರ ಹಾಗೂ ಗುರುತಿನ ಪತ್ರ ಸಹ ಹೊಂದಿರಬೇಕು. ಸಮವಸ್ತ್ರ ಧರಿಸುವುದರಿಂದ ಶಿಸ್ತ, ಬದ್ಧತೆ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.

ತೊಂದರೆಯಲ್ಲಿ ಆಟೋ ಚಾಲಕರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ಸಲಹೆ ಮತ್ತು ನೆರವು ನೀಡಲಾಗುತ್ತದೆ. ಅಗತ್ಯವಿರುವವರು ಸಂಪಕರ್ಿಸಬೇಕು. ಆಟೋ ಚಾಲಕರು ಅಸಂಘಟಿತ ಕಾಮರ್ಿಕರಾಗಿರುವುದರಿಂದ ಕೇಂದ್ರ ಸಕರ್ಾರ ಅನುಷ್ಠಾನಗೊಳಿಸಿರುವ ಮಾಸಿಕ ಪಿಂಚಣಿ ಯೋಜನೆಗೆ ನೊಂದಾಯಿಸಿಕೊಳ್ಳಬೇಕೆಂದು ಅವರು ಹೇಳಿದರು.

ಜಿಲ್ಲಾ ಕಾಮರ್ಿಕ ಅಧಿಕಾರಿ ತರನ್ನುಂ ಬೆಂಗಾಲಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆರ್.ಎಂ. ದೊಡ್ಡಮನಿ ಅವರು ಮಾತನಾಡಿ ಆರೋಗ್ಯ ಮತ್ತು ಕಾಮರ್ಿಕ ಇಲಾಖೆಯಿಂದ ಸಿಗುವ ಸೌಲಭ್ಯ ಹಾಗೂ ಯೋಜನೆಗಳ ಕುರಿತು ವಿವರಿಸಿದರು. ಆದರ್ಶ ಆಟೋ ಚಾಲಕರ ಸಂಘದ ರಸೂಲ ಎಂ. ನದಾಫ ಮಾತನಾಡಿದರು.

ಭಾರತೀಯ ರೆಡ್ಕ್ರಾಸ್ ಸಂಸ್ಥೆ ಧಾರವಾಡ ಘಟಕದ ಚೇರಮನ್ ಡಾ.ವಿ.ಡಿ. ಕಪರ್ೂರಮಠ ಅಪಘಾತ ಸಂದರ್ಭದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಪ್ರಥಮ ಚಿಕಿತ್ಸಾ ಕಿಟ್ ಉಪಯೋಗಿಸುವ ಬಗ್ಗೆ ಆಟೋ ಚಾಲಕರಿಗೆ ತರಬೇತಿ ನೀಡಿದರು.

  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾತರ್ಾ ಸಹಾಯಕ ಅಧಿಕಾರಿ ಡಾ.ಎಸ್.ಎಂ. ಹಿರೇಮಠ, ಆದರ್ಶ ಆಟೋ ಸಂಘದ ಅಧ್ಯಕ್ಷ ಜಾವಿದ ದೊಡ್ಡಮನಿ, ಉಪಾಧ್ಯಕ್ಷ ಜೇಮ್ಸ್ ಮನೇಶ ದಾರಾ, ಹಿರಿಯ ಕಾಮರ್ಿಕ ನಿರೀಕ್ಷಕ ಬಿ.ಆರ್. ಜಾಧವ ವೇದಿಕೆಯಲ್ಲಿದ್ದರು.

ಕಾಮರ್ಿಕ ಇಲಾಖೆಯ ಪ್ರಥಮ ದಜರ್ೆ ಸಹಾಯಕಿ ದಾವಲ್ಬಿ ನದಾಫ್ ಪ್ರಾಥರ್ಿಸಿದರು. ಹಿರಿಯ ನ್ಯಾಯವಾದಿ ಸೋಮಶೇಖರ ಜಾಡರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಕಾಮರ್ಿಕ ನಿರೀಕ್ಷಕ ಭುವನೇಶ್ವರಿ ಕೋಟಿಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ಧಾರವಾಡ ನಗರದ ವಿವಿಧ ಆಟೋ ನಿಲ್ದಾಣಗಳ ಆಟೋ ಚಾಲಕರು ಭಾಗವಹಿಸಿದ್ದರು.