ರೈತರು ಸ್ವಾವಲಂಬಿಯಾಗಲು ಮೂಲಭೂತ ಸೌಕರ್ಯಗಳು ಅವಶ್ಯಕ: ಹುಕ್ಕೇರಿ

ಲೋಕದರ್ಶನ ವರದಿ

ಐನಾಪುರ 25: ರೈತರು ಸ್ವಾವಲಂಬಿಗಳಾಗಿ ಬದುಕಬೇಕಾದರೆ ಅವರ ಭೂಮಿಗೆ ನೀರು, ಗುಣಮಟ್ಟದ ವಿದ್ಯುತ್, ಸಾರಿಗೆ ಸಾಗಾಟಕ್ಕೆ ಗುಣಮಟ್ಟದ ರಸ್ತೆಗಳು ಪ್ರಮುಖವಾಗಿವೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ಅವರು ಮಂಗಳವಾರ ಐನಾಪುರ ಪಟ್ಟಣದಲ್ಲಿ ಹಿಪ್ಪರಗಿ ಯೋಜನೆಯ ಪುನರ್ ವಸತಿ ಮತ್ತು ನಿಮರ್ಾಣ ವಿಭಾಗದಿಂದ2018-19 ನೇ ಸಾಲಿಗೆ ಏತ ಸಮೂಹ ನೀರಾವರಿ ಯೋಜನೆಗಳಿಗೆ 4.32 ಕೋಟಿ ರೂ ವೆಚ್ಚದ ಮೂರು ಯೋಜನೆಗಳನ್ನು ಮಂಜೂರು ಗೊಳಿಸಿ ಆದೇಶ ಪತ್ರವನ್ನು ಫಲಾನುಬವಿಗಳಿಗೆ ವಿತರಿಸಿ ಮಾತನಾಡುತ್ತಿದ್ದರು.

ಐನಾಪುರ ಪಟ್ಟಣದ ಎರಡು ಏತ ನೀರಾವರಿ ಯೋಜನೆಗಳಿಗೆ 2.93 ಕೋಟಿ ರೂ ಹಾಗೂ ಜುಗೂಳ ಗ್ರಾಮದ ಒಂದು ಯೋಜನೆಗೆ 1.40 ಕೋಟಿ ರೂಗಳನ್ನು ಮಂಜೂರುಗೊಳಿಸಲಾಗಿದ್ದು ಶೀಘ್ರವೇ ಟೆಂಡರ ಕರೆದು ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದೆಂದರು.

ಐನಾಪುರ ಪಟ್ಟಣದ ಕ್ಷೇತ್ರ ದೊಡ್ಡದಾಗಿದ್ದು ಇನ್ನು ಮುರರಿಂದ ನಾಲ್ಕು ಯೋಜನೆಗಳು ಬೇಕೆಂದು ಪಟ್ಟಣ ಪಂಚಾಯತ್ ಉಪಾದ್ಯಕ್ಷ ರವೀಂದ್ರ ಗಾಣಿಗೇರ ಮನವಿ ಮಾಡಿಕೊಂಡಾಗ ಶೀಘ್ರವೇ ಅಧಿಕಾರಿಗಳಿಂದ ಎಸ್ಟಿಮೆಟ್ ಮಾಡಿಸಿ ತಂದು ಕೊಟ್ಟಲ್ಲಿ ಅವುಗಳನ್ನು ಮಂಜೂರು ಮಾಡಿಕೊಡುವುದಾಗಿ ಸಂಸದ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು.

ರಸ್ತೆಗಳು: ಶಿರಗುಪ್ಪಿ-ಜುಗೂಳ-ಮಂಗಾವತಿ, ಕೆಂಪವಾಡದಿಂದ ಮಹಾರಾಷ್ಟ್ರದ ಗಡಿ ಶಿಂಧೇವಾಡಿವರೆಗೆ ಹಾಗೂ ಹನಮಾಪೂರದಿಂದ ಮಧಬಾಂವಿ ರಸ್ತೆಗಳನ್ನು ಮಂಜುರು ಮಾಡಿಸಿದ್ದು ಶೀಘ್ರವೇ ಅವುಗಳನ್ನು ಡಾಂಬರೀಕರಣ ಮಾಡಿಸಲಾಗುವುದೆಂದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಂಸದ ಪ್ರಕಾಶ ಹುಕ್ಕೇರಿ ಐನಾಪುರ-ಉಗಾರ ರಸ್ತೆ ಹದಗೆಟ್ಟಿದ್ದು ಬರುವಾಗ ನೋಡಿಕೊಂಡೇ ಬಂದಿದ್ದೇನೆ. ಅದನ್ನು ಕೂಡ ಮರು ಡಾಂಬರಿಕರಣ ಮಾಡಿಸಲಾಗುವುದೆಂದು ಭರವಸೆ ನೀಡಿದರು.

ಈ ವೇಳೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮನಿಷಾ ಹರಳೆ, ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಶಿಧರ ಕಾಗವಾಡ, ನೀರಾವರಿ ಇಲಾಖೆಯ ಅಭಿಯಂತರ ಜಿ.ಎಸ್.ಬುಲರ್ಿ ಮುಖಂಡರಾದ ರಾಜೇಂದ್ರ ಪೋತದಾರ, ಕುಮಾರ ಅಪರಾಜ, ಆಧಿನಾಥ ದಾನೊಳ್ಳಿ,ಸುನೀಲ ಪಾಟೀಲ, ಬಾಳಾಸಾಹೇಬ ದಾನೊಳ್ಳಿ,ಪಾಯಪ್ಪ ಕುಡಚಕ್ಕಲಗಿ, ಅಪ್ಪಾಸಾಬ ಚೌಗುಲಾ, ಸಂಜಯ ಭೀರಡಿ, ಸುರೇಶ ಗಾಣಿಗೇರ,ರಾಮು ಸವದತ್ತಿ,  ದಾದಾ ಪಾಟೀಲ,  ರಾವಬಹಾದ್ದೂರ ಕುಡಚಿ, ನೀಲಮ್ಮ ಡೂಗನವರ, ಕುಮಾರ ಜಯಕರ, ದೊಂಡಿಬಾ ಹರಳೆ,ಬಾಳು ಹರಳೆ, ಅರುಣ ಗಾಣಿಗೇರ, ಸುರೇಶ ಅಡಿಸೇರಿ, ಸೇರಿದಂತೆ ಅನೇಕರು ಇದ್ದರು.