ಗುಲರ್ಾಪೂರ 18: ಕಳೆದ 18 ವರ್ಷಗಳಿಂದ ಸಂಘವು ಸದಸ್ಯರಿಗೆ ಉತ್ತಮ ಸೇವೆಯನ್ನು ಕೊಡುವುದರ ಮೂಲಕ ಮೂಡಲಗಿ ತಾಲೂಕಿನ ಸಹಕಾರ ರಂಗದಲ್ಲಿ ತನ್ನದೇಯಾದ ಹಿರಿಮೆಯನ್ನು ಹೊಂದಿದೆ ಎಂದು ಶಂಕರ ಶಿವಪ್ಪ ಮುಗಳಖೋಡ ಹೇಳಿದರು.
ದಿ. 18ರಂದು ಮುಂಜಾನೆ 11 ಗಂಟೆಗೆ ಸಂಘದ ಕಾರ್ಯಲಯದಲ್ಲಿ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ ಸಂಘದ ಸದಸ್ಯರು, ಸಲಹಾ ಸಮಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಜರುಗಿದ ಮೂಡಲಗಿ ಶ್ರೀಬಸವೇಶ್ವರ ಅರ್ಬನ್ ಕೋ-ಆಫ್.ಕ್ರೆಡಿಟ್ ಸೊಸಾಯಿಟಿ ಗುಲರ್ಾಪೂರ ಶಾಖೆಯ 18ನೇ ವಾಷರ್ಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರೈತರು, ಕೂಲಿಕಾಮರ್ಿಕರು ಮತ್ತು ಜನ-ಸಾಮಾನ್ಯರೇ ಹೆಚ್ಚಾಗಿ ಸದಸ್ಯರಿರುವ ಈ ಶಾಖೆಯಲ್ಲಿ ಅಂತಹ ಸದಸ್ಯರಿಗೆ ಆಥರ್ಿಕ ಅನುಕೂಲತೆಗಳನ್ನು ಮಾಡಿಕೊಡುವುದರ ಮೂಲಕ ಸಹಕಾರ ಕ್ಷೇತ್ರದ ಮೂಲತತ್ವ ಮತ್ತು ಸಿದ್ಧಾಂತದ ಪ್ರತೀಕವಾಗಿ ಈ ಸಹಕಾರ ಸಂಸ್ಥೆ ಹೊರಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಭಿವೃದ್ಧಿಯಲ್ಲಿ ಪ್ರಧಾನ ಕಛೇರಿಯ ಆಡಳಿತ ಮಂಡಳಿ, ಮೇಲಾಧಿಕಾರಿಗಳ ಮಾರ್ಗದರ್ಶನ ಮತ್ತು ಶಾಖೆಯ ಸಲಹಾ ಸಮಿತಿಯ ಎಲ್ಲ ಸದಸ್ಯರ ಪ್ರಾಮಾಣಿಕ ಸೇವೆಯಿಂದ ಇಂತಹ ಬೆಳವಣೆಗೆಯ ವಾತಾವರಣವನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಶಾಖೆಯ ಬೆಳವಣಿಗೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಸಂಘದ ಬೆಂಬಲಕ್ಕೆ ನಿಂತ ಎಲ್ಲ ಮಹನೀಯರಿಗೆ ನಾವು ಧನ್ಯವಾದಗಳನ್ನು ಅಪರ್ಿಸೋಣವೆಂದು ಹೇಳಿದರು.
ಸಂಘದ ಶಾಖಾ-ವ್ಯವಸ್ಥಾಪಕ ಎಮ್.ಬಿ. ಢವಳೇಶ್ವರ. ಅವರು ಮಾತನಾಡುತ್ತಾ, ಮಾರ್ಚ-2018 ಬರುತ್ತಿದ್ದು, ಸಾಲ ವಿತರಣೆ ಮಾಡಿದ್ದನ್ನು ಶೇ. 100 ಕ್ಕೆ 100 ರಷ್ಟು ವಸೂಲಾತಿ ಮಾಡಿ ನಾವು ನಮ್ಮ ಗುರಿಯನ್ನು ತಲುಪಲು ಎಲ್ಲ ಸದಸ್ಯರು ಮತ್ತು ಸಿಬ್ಬಂದಿ ಬಹಳ ಜಾಗರೂಕತೆಯಿಂದ ಕೆಲಸ ಮಾಡಬೇಕಾಗಿದೆ. ಎಲ್ಲರೂ ಸೇರಿ ಸಹಕಾರದಿಂದ ನಾವು ನಮ್ಮ ಗುರಿಯನ್ನು ತಲುಪೋಣವೆಂದು ಹೇಳಿದರು.
ಸಹಕಾರ ಸಂಘದಲ್ಲಿ ಗ್ರಾಹಕರಿಗೆ ತ್ವರಿತವಾಗಿ ಸೇವೆಯನ್ನು ಸಲ್ಲಿಸುವ ದೃಷ್ಟಿಯಿಂದ ಮತ್ತು ದಿನ ನಿತ್ಯದ ವ್ಯವಹಾದಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಆನ್ ಲೈನ್ ಸೇವೆಯನ್ನು ಕೊಡುವುದಕ್ಕೆ ಉತ್ಸುಕರಾಗಿದ್ದೇವೆಂದು ಸಂಘದ ಉಪಾಧ್ಯಕ್ಷ ಕೆಂಪಣ್ಣಾ ಮಲ್ಲಪ್ಪ ಹಾಲಳ್ಳಿ ಹೇಳಿದರು.
ಸಂಘಧ ಸಲಹಾ ಸಮಿತಿ ಅಧ್ಯಕ್ಷ ಶಂಕರ ಶಿ.ಮುಗಳಖೋಡ, ಉಪಾಧ್ಯಕ್ಷ ಕೆಂಪಣ್ಣಾ ಮ ಹಾಲಳ್ಳಿ, ಸದಸ್ಯರಾದ ಶ್ರೀಶೈಲ ಮ ಮುಗಳಖೋಡ, ಸದಾನಂದ ಬ.ಮುಗಳಖೋಡ, ಅಚ್ಯುತ್ ಬಾ ಕುಲಕಣರ್ಿ, ಜಗದೀಶ ಸಾ ಮುಗಳಖೋಡ. ಶಿದ್ಲಿಂಗಪ್ಪ ಬ ನೇಮಗೌಡರ, ಸಿದ್ದಪ್ಪ ದು ಕೌಜಲಗಿಯವರು ಮತ್ತು ಪ್ರಧಾನ ಕಛೇರಿಯ ಮಾರಾಟಾಧಿಕಾರಿಗಳಾದ ಶಂಕರ ಲ ಕೋತಂಬರಿ, ಮಹೇಶ ಮುಗಳಖೋಡ, ಕಲ್ಮೇಶ ರಂಗಾಪೂರ, ಕೃಷ್ಣಾ ಕಂಭಾರ ಆಗಮಿಸಿದ್ದರು,
ಶಿವಯೋಗಿ ಮೋಜನಿದಾರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು, ಶಿವಾನಂದ ಅಡಗಿಮನಿ, ಶಿವಬಸು ತುಕ್ಕನ್ನವರ, ಮಲ್ಲಿಕಾಜರ್ುನ ಮೋಜನಿದಾರ, ಎಲ್ಲ ಸದಸ್ಯರಿಗೆ ಪುಷ್ಪ ಅರ್ಪಣೆ ಮಾಡಿ ಗೌರವಿಸಿದರು. ಶ್ರೀಶೈಲ ಪಂಚಯ್ಯ ಹಿರೇಮಠ, ಸ್ವಾಗತಿಸಿ ನಿರೂಪಿಸಿ-ವಂದಿಸಿದರು.