ಲೋಕದರ್ಶನ ವರದಿ
ಯಮಕನಮರಡಿ 17: ಸಮೀಪದ ಹೆಬ್ಬಾಳ (ತಾ.ಹುಕ್ಕೇರಿ) ಗ್ರಾಮದಲ್ಲಿ ಫೆಬ್ರುವರಿ 21,22,23 ರಂದು ಹೆಬ್ಬಾಳದ ಡಿ,ಎಲ್,ಖೋತ ಫ್ರೌಢಶಾಲಾ ಮೃದಾನದಲ್ಲಿ "ಬಸವ ಉತ್ಸವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಉತ್ಸವದಲ್ಲಿ ಬೆಳಗಾವಿ ಜಿಲ್ಲೆಯ 900 ಹಳ್ಳಿಗಳಲ್ಲಿ 600 ಗ್ರಾಮಗಳಲ್ಲಿ ಈ ಉತ್ಸವದ ಪ್ರಚಾರ ಕಾರ್ಯಕ್ರಮ ಮುಗಿದಿದ್ದು ಉತ್ಸವದಲ್ಲಿ ನಿತ್ಯ ಸುಮಾರು 1 ಲಕ್ಷ ಜನ ಸೇರುವ ಸಾಧ್ಯತೆ ಇದೆ, ಜಿಲ್ಲೆಯನ್ನು ಹೊರತು ಪಡಿಸಿ ವಿಜಯಪೂರ,ಬಾಗಲಕೋಟ, ಮಹಾರಾಷ್ಟ್ರ, ಹಾಗೂ ಕನರ್ಾಟಕದ ಹಲವಾರು ಪ್ರಾಂತ್ಯಗಳಲ್ಲಿನ ಜನ ಈ ಉತ್ಸವಕ್ಕೆ ಬರಲಿದ್ದಾರೆ ಬಂದ ಜನರಿಗೆ ನಿತ್ಯ ದಾಸೊಹ, ವಸತಿ, ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಅನುಭಾವ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳವರೆಗೂ ನಡೆಯಲಿವೆ ಎಂದು ವೈದ್ಯ ಬಸವರಾಜ ಪಂಡಿತರು ಹೇಳಿದರು.
ಹೆಬ್ಬಾಳದಲ್ಲಿ ಸೋಮವಾರ ದಿ.17ರಂದು ಕರೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು, ಸುಮಾರು 450 ಬಸವ ಸಂಪ್ರದಾಯಸ್ತರು ಈ ಗ್ರಾಮದಲ್ಲಿದ್ದಾರೆ, ಬಸವಣ್ಣವರೊಂದಿಗಿದ್ದ ಎಲ್ಲ ಶರಣರ ಪ್ರತೀಕವಾಗಿ ಸಂಕೇಶ್ವರ ನಗರದಿಂದ ಕಲ್ಯಾಣ ಹೆಬ್ಬಾಳದ ವರೆಗೆ ಶರಣರ ಭಾವಚಿತ್ರಗಳ ಮೆರವಣಿಗೆ ಭವ್ಯವಾಗಿ ನಡೆಯಲಿದೆ, 109 ಅಡಿ ಎತ್ತರದ ವಿಶ್ವಗುರು ಬಸವಣ್ಣನವರ ಪುತ್ಥಳಿ ನಿಮರ್ಿಸುವ ಅಡಿಗಲ್ಲು ಸಮಾರಂಭ ಈ ಉತ್ಸವದಲ್ಲಿ ನಡೆಯಲಿದೆ ಎಂದರು.
ವೇದಿಕೆಯಲ್ಲಿದ್ದ ಬೆಳವಿಯ ಬಸವದೇವರು ಮಾತನಾಡಿ ಮೂರು ದಿನಗಳ ಉತ್ಸವಕ್ಕೆ ಸುಮಾರು 240 ಜನ ಅತಿಥಿಗಳು ವಿವಿಧ ಸ್ವಾಮಿಜಿಗಳು, ಹಾಗೂ ಮಂತ್ರಿಗಳು, ಶಾಸಕರು ಜಿಲ್ಲೆಯ ಜನಪ್ರತಿನಿಧಿಗಳು, ಉತ್ಸದಲ್ಲಿ ಪಾಲ್ಗೊಳ್ಳಲಿದ್ದಾರೆ, ಹೊಟ್ಟೆಗಿಂತ ನೆತ್ತಿಗೆ ಜ್ಞಾನ ನೀಡುವ ಹಲವಾರು ಗೋಷ್ಠಿಗಳು, ನಡೆಯಲಿವೆ, ದಿ,22 ರಂದು ಮುಖ್ಯ ಮಂತ್ರಿ ಬಿ,ಎಸ್,ಯಡಿಯೂರಪ್ಪ, ಹಾಗೂ ಸಂಸದರು, ಸಂಪುಟದಜರ್ೆಯ ಸಚಿವರುಗಳು ಶಾಸಕರು ಆಗಮಿಸಲಿದ್ದಾರೆ ಎಂದರು, ಈ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷರಾದ ಶಂಕರ ಗುಡಸಿ, ಸಾಹಿತಿ ಎಸ್,ವಾಯ್,ಹಂಜಿ, ಬಸವರಾಜ ಎಲ್, ಖೋತ, ಹಾಗೂ ಮಹಾತೇಶ ಚೌಗಲಾ, ಸಿದ್ದು ಪಾಟೀಲ, ಹಾಗೂ ಬಸವ ಬಳಗದವರು ಉಪಸ್ಥಿತರಿದ್ದರು.