ಬಸವ ಪರಿಸರ ಸಂರಕ್ಷಣಾ ಸಮಿತಿ: ಸುನೀತಾ ಹುಬ್ಳಿಕರ್, ಪದ್ಮಜಾ ಉಮರ್ಜಿ ಅವರಿಗೆ ಸನ್ಮಾನ
ಹುಬ್ಬಳ್ಳಿ 08: ಗೀಜಗನ ಗೂಡುಗಳು ಕೃತಿಯ ಲೇಖಕಿ ಸುನೀತಾ ಹುಬ್ಳಿಕರ್ ಹಾಗೂ ತಲ್ಲಣಿಸದಿರು ಕಂಡ್ಯ ತಾಳು ಮನವೇ ಕೃತಿಯ ಲೇಖಕಿ ಪದ್ಮಜಾ ಉಮರ್ಜಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ್ಣ ಮಾಡಿ, ಗ್ರಂಥ ನೀಡಿ ಗೌರವ ಪೂರ್ವಕವಾಗಿ ಹೆಮ್ಮೆ, ಅಭಿಮಾನದಿಂದ ಸನ್ಮಾನಿಸಿದರು. ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಶುಭಾಶಯ ಕೋರಿದರು. ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ಸಾಹಿತಿ ಶಾಲಿನಿ ರುದ್ರಮುನಿ, ಸುಧಾ ಶೀಲವಂತರ, ವೀಣಾ ಅಠವಲೆ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ವಿದ್ಯಾ ವಂಟಮುರಿ, ಸಿದ್ಧಮ್ಮ ಅಡವೆಣ್ಣವರ, ಪ್ರೊ ಶೋಭಾ ಹಿತ್ತಲಮನಿ, ಪ್ರೊ ರಾಜೇಶ್ವರಿ ಮಹೇಶ್ವರಯ್ಯ, ಪ್ರೊ ಕೆ.ಎಸ್.ಕೌಜಲಗಿ, ವೆಂಕಟೇಶ ಮರೇಗುದ್ದಿ, ರೂಪಾ ಜೋಶಿ, ಗಂಗಾಧರ ದೊಡ್ಡವಾಡ, ವಂದನಾ ರಮೇಶ, ಸಿ.ಜಿ.ಧಾರವಾಡಶೆಟ್ಟರ, ಮಲ್ಲಿಕಾರ್ಜುನ ಕಮ್ಮಾರ, ಸಂಧ್ಯಾ ದಿಕ್ಷೀತ, ಸರೋಜಾ ಮೇಟಿ, ಶಿವಯೋಗಿ, ಲೀನಾ, ಮುಂತಾದವರು ಭಾಗವಹಿಸಿದ್ದರು.