ಮಹಾಕವಿ ಪಂಪನ ನೆಲೆ ಬನವಾಸಿ: ಡಾ. ಪಾಪು

ಲೋಕದರ್ಶನ ವರದಿ

ಧಾರವಾಡ 15: ಆದಿಕವಿ ಪಂಪನ ತವರು ಅಣ್ಣಿಗೇರಿ. ಆದರೂ ಆತನ ಬದುಕು ಬರಹದ ಮೂಲಕ ಗುರುತಿಸಿಕೊಂಡಿದ್ದು ಬನವಾಸಿ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರತಿಪಾದಿಸಿದರು.

ಕರ್ನಾಟಕವಿದ್ಯಾವರ್ಧಕ ಸಂಘದ ಕಲಾ ಮಂಟಪವು ಕನರ್ಾಟಕ ಚುಟುಕು ಸಾಹಿತ್ಯ ಪರಿಷತ್ತು ಬನವಾಸಿಯ ಮಧುಕೇಶ್ವರ ದೇವಸ್ಥಾನ ಕಮೀಟಿ ಮತ್ತು ಕದಂಬ ಸೇನೆ ಸಹಕಾರದಲ್ಲಿ ಶನಿವಾರ ಬೆಳಿಗ್ಗೆ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಿದ್ದ 'ಮಹಾಕವಿ ಪಂಪನ ಸುತ್ತ ಮುತ್ತ' ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪಂಪ ಮಹಾಕವಿ ತನ್ನ ಕಾವ್ಯದ ಮೂಲಕ ಬನವಾಸಿ ದೇಶದ ಸೌಂದರ್ಯ ಪರಂಪರೆಯನ್ನು ಹೊಗಳಿದ್ದು ತನಗೆ ಮರುಜನ್ಮ ಇದ್ದರೆ ಮನುಷ್ಯನಾಗಿ ಹುಟ್ಟಲು ಸಾಧ್ಯವಾಗದಿದ್ದರೆ ಮರಿದುಂಬಿಯಾಗಿ ಇಲ್ಲವೆ ಕೋಗಿಲೆಯಾಗಿ ಜನಿಸುವ ಆಶಯ ವ್ಯಕ್ತಪಡಿಸಿದ್ದಾನೆ. ವಾಸ್ತವಾಂಶ ಹೀಗಿರುವಾಗ ಬನವಾಸಿಯಿಂದ ಪಂಪನನ್ನು ಅಗಲಿಸುವುದು ಸೂಕ್ತವಲ್ಲ ಎಂದ ಅವರು ಪಂಪನ ಉಸಿರಾಗಿದ್ದ ಬನವಾಸಿಯನ್ನು ಹಾಗೂ ಮಳಖೇಡವನ್ನು ತಾಲೂಕಾ ಕೇಂದ್ರ ಮತ್ತು ಶಿರಸಿಯನ್ನು ಜಿಲ್ಲಾ ಸ್ಥಾನವೆಂದು ರಾಜ್ಯ ಸರಕಾರ ಘೋಷಿಸಬೇಕೆಂದು ಡಾ. ಪಾಪು ಆಗ್ರಹಿಸಿದರು.

ಅವರು 'ಚುಟುಕು ಗಂಗಾವಳಿ, ಡಾ.ಜಿ..ಹೆಗಡೇರ ಹೈಕುಗಳು, ಸಿದ್ಧೇಶ್ವರ ಹಿರೇಮಠರ ಎರಡು ಪುಸ್ತಕ ಬಿಡುಗಡೆ ಮಾಡಿದರು.

ದೇವಸ್ಥಾನ ಕಮೀಟಿ ಅಧ್ಯಕ್ಷ ಒಡೆಯರ ಮುಖ್ಯ ಅತಿಥಿಯಾಗಿದ್ದರು. ಕಚುಸಾಪ ಸಂಚಾಲಕ ಕೃಷ್ಣಮೂತರ್ಿ ಕುಲಕಣರ್ಿ ಮಾತನಾಡಿ ಮಹಾಕವಿ ಪಂಪನ ತವರು ಅಣ್ಣಿಗೇರಿ, ಸಾಹಿತ್ಯ ಮೂಲಕ ಗುರುತಿಸಿಕೊಂಡಿದ್ದು ಬನವಾಸಿ ಹೀಗೆ ಅನೇಕ ಗೊಂದಲಗಳಿವೆ. ಬುದ್ಧಿಜೀವಿಗಳ ಚಿಂತನೆ ನಡೆದು ಸಮಸ್ಯೆಗಳು ಬಗೆಹರಿಯಲಿ, ಅದಕ್ಕಾಗಿ ಇಲ್ಲಿ ಮುಕ್ತ ವೇದಿಕೆ ಕಲ್ಪಿಸಿದೆ ಎಂದರು.

.ವಿ.. ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕೋಶಾಧ್ಯಕ್ಷ ಕೃಷ್ಣ ಜೋಶಿ ವೇದಿಕೆಯಲ್ಲಿದ್ದರು.

ದೇವಸ್ಥಾನ ಕಮೀಟಿಯಿಂದ ಒಡೆಯರ ಹಾಗೂ ಡಾ. ಜಿ..ಹೆಗಡೆ, ಕಚುಸಾಪ ಜಿಲ್ಲಾ ಘಟಕ, ಕದಂಬ ಸೇನೆಯಿಂದ ಜಿ.ಯು.ನಾಯಕ, ಉದಯ ಕಾನಳ್ಳಿ ನಾಡೋಜ ಡಾ. ಪಾಪುವರನ್ನು ಸನ್ಮಾನಿಸಿದರು. ಹೊಳೆಮಠದ ಶ್ರೀಗಳು ಗೌರವಿಸಿದರು. ಕುಮಟಾದ ಗಣೇಶ್ ಅಡಿಗಂಡಿ ಪಾಪು ಅವರ ಚಿತ್ರ ಬಿಡಿಸಿದ ಕಲಾಕೃತಿ ಸಮಪರ್ಿಸಿದರು.

ಶಾಲಾಮಕ್ಕಳಿಂದ ಪ್ರಾರ್ಥನೆ ಮತ್ತು ನಾಡಗೀತೆ ಜರುಗಿತು. ಕವಿವ ಸಂಘದ ಕಲಾ ಮಂಟಪದ ಸಂಚಾಲಕ ಶಂಕರ ಕುಂಬಿ ಸ್ವಾಗತಿಸಿದರು. ಕಚುಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಜಿ.ಯು.ನಾಯಕ ಸಂದೇಶ ವಾಚನ ಮಾಡಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವ ಉಪಾಧ್ಯಕ್ಷ ಡಾ. ಶಾಂತಿನಾಥ ದಿಬ್ಬದ, ಕಲಾ ಮಂಟಪದ ಸಲಹಾ ಸಮಿತಿ ಸದಸ್ಯರಾದ ಅರವಿಂದ ಕಪಲಿ ಹಾಗೂ ಜಿತದತ್ತ ಕುರಕುರಿ, ಕುಷ್ಣಮೂತರ್ಿ ಕುಲಕಣರ್ಿ, ಅನಂತ ಕುಲಕಣರ್ಿ, ಅನಿತಾ ಪರ್ವತೀಕರ, ಪ್ರೊ. ಕರಡೋಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು