ಬನಶಂಕರಿದೇವಿ ಜಾತ್ರಾ ಮಹೋತ್ಸವ ಇಂದು ಸಂಗೀತೋತ್ಸವ 2025 ರಸಮಂಜರಿ ಕಾರ್ಯಕ್ರಮ
ಚಿಮ್ಮಡ 11: ಗ್ರಾಮದ ಹಟಗಾರ ಸಮಾಜದ ಆರಾದ್ಯ ದೇವತೆ ಬನಶಂಕರಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಬುಧವಾರದಂದು ವಿಜ್ರಂಭನೆಯಿಂದ ಜರುಗಲಿದೆ.
ಬೆಳಿಗ್ಗೆ 6 ಘಂಟೆಯಿಂದ ನಡೆಯುವ ಹೋಮ ರುದ್ರಾಭಿಷೇಕ, ನವಗ್ರಹಪೂಜೆ, ಮುತ್ತೈದೆಯರ ಉಡಿ ತುಂಬುವುದರೊಂದಿಗೆ ಪ್ರಾರಂಭಗೊಳ್ಳಲಿರುವ ಜಾತ್ರಾ ಮಹೋತ್ಸವದಲ್ಲಿ ಮದ್ಯಾಹ್ನ ದೇವಿಯ ಉಡಿತುಂಬುವ ಕಾರ್ಯಕ್ರಮವೂ ನಡೆಯಲಿದೆ ನಂತರ ಮಹಾಪ್ರಸಾದ ವಿನಿಯೋಗ ನಡೆಯಲಿದ್ದು ಸಾಯಂಕಾಲ 5 ಘಂಟೆಗೆ ಜರುಗಲಿರುವ ರಥೋತ್ಸವ, ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಭಾಗದ ಜನಪದ ವಾದ್ಯವೃಂದಗಳಾದ ಕರಡಿ ಮಜಲು, ಡೊಳ್ಳು ಕುಣಿತ, ಬಾಜಾ ಬಜಂತ್ರಿ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಯಲಿದೆ.
ಸಂಗೀತೋತ್ಸವ 2025; ರಾತ್ರಿ 10 ಗಂಟೆಗೆ ಬನಶಂಕರಿದೇವಿ ಸಾಂಸ್ಕ್ರತಿಕ ವೇದಿಕೆ ಹಾಗೂ ಬನಶಂಕರಿದೇವಿ ದೇವಸ್ಥಾನ ಸಮೀತಿ ಚಿಮ್ಮಡ ಇವರ ಸಂಯುಕ್ತ ಆಶ್ರಯದಲ್ಲಿ ವ್ಹಿಎಂಜಿಎಸ್ ಮೆಲೋಡಿಸ್ ಮಹಾಲಿಂಗಪೂರರವರಿಂದ ಸಂಗೀತೋತ್ಸವ 2025 ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಬನಶಂಕರಿದೇವಿ ದೇವಸ್ಥಾನ ಸೇವಾ ಸಮೀತಿ ಪ್ರಕಟಣೆಯಲ್ಲಿ ತಿಳಿಸಿದೆ.