ಬಾಲಬ್ರಹ್ಮಚಾರಿ ಸಮ್ಮೇದ ಕ್ಷುಲ್ಲಕ ದೀಕ್ಷಾ ಸಮಾರಂಭ

ಶೇಡಬಾಳ 14: ಜೈನ ಧರ್ಮದ ಸತ್ಯ, ಅಹಿಂಸೆ, ಶಾಂತಿ ಹಾಗೂ ಜಿವೋ ಔರ್ ಜಿನೇ ದೋ ಎಂಬ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಶಾಂತಿಗೆ ಶ್ರಮಿಸೋಣ ಎಂದು ಸ್ವಾಭಿಮಾನಿ ರೈತ ಸಂಘಟನೆಯ ಅಧ್ಯಕ್ಷ ಹಾಗೂ ಹಾತಕಣಗಲಾದ ಸಂಸದ ರಾಜು ಶೆಟ್ಟಿ ಕರೆ ನೀಡಿದರು.

ಅವರು ಶುಕ್ರವಾರ ದಿ. 14 ರಂದು ಶೇಡಬಾಳ ಗ್ರಾಮದ ಶಾಂತಿಸಾಗರ ದಿಗಂಬರ ಜೈನ ಛಾತ್ರಾಶ್ರಮದಲ್ಲಿ ಜೀನಸೇನ ಭಟ್ಟಾರಕ ಸಂಸ್ಥಾನಮಠ ನಾಂದಣಿ ಇವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಪ್ರತೀಕ ಪ್ರಕಾಶ ಸಸಾಲಟ್ಟಿ ಉರ್ಫ ಬಾಲಬ್ರಹ್ಮಚಾರಿ ಸಮ್ಮೇದ ಇವರ ಕ್ಷುಲ್ಲಕ ದೀಕ್ಷಾ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. 

ತೇರದಾಳ, ಬೆಳಗಾವಿ, ಕೊಲ್ಹಾಪೂರ, ನಾಂದಣಿ ಸಂಸ್ಥಾನಮಠದ ಭಟ್ಟಾರಕರಾಗಿ ನೇಮಕಗೊಂಡಿರುವ ಬಾಲಬ್ರಹ್ಮಚಾರಿ ಸಮ್ಮೇದ ಇವರನ್ನು ಶ್ರವಣಬೆಳಗೊಳ ಚಾರುಕೀತರ್ಿ ಸ್ವಾಮಿಜಿ, ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರ ಹಾಗೂ ಇನ್ನಿತರ ಧರ್ಮ ಗುರುಗಳ ಅನುಮತಿಯ ಮೇರೆಗೆ ನಾಂದಣಿ ಭಟ್ಟಾರಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಅವರ ಮಾರ್ಗದರ್ಶನದಲ್ಲಿ ನಾಂದಣಿ ಮಠವು ಧಾಮರ್ಿಕ ಕಾರ್ಯಗಳ ಮೂಲಕ ವಿಶ್ವದಲ್ಲೇ ವಿಖ್ಯಾತಿ ಪಡೆಯಲಿ ಎಂದು ಶುಭಹಾರೈಸಿದರು.

ಸಾನಿಧ್ಯವನ್ನು ಆಚಾರ್ಯ ದೇವಸೇನ ಮುನಿಮಹಾರಾಜ, ಅಜೀತಮತಿ ಮಾತಾಜಿ, ಸುಮತಿಮತಿ ಮಾತಾಜಿ, ವಿಶಾಲಮತಿ ಮಾತಾಜಿ, ಸುವರ್ಣಮತಿ ಮಾತಾಜಿ, ನವೀನಮತಿ ಮಾತಾಜಿ, ನೀತಿಮತಿ ಮಾತಾಜಿಯವರು ವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಮೂಲನಾಯಕ ಭಗವಾನ ಆದಿನಾಥ ತೀರ್ಥಂಕರ ಪಂಚಾಮೃತ ಅಭಿಷೇಕ, ಗಣಧರವಲಯ ಪೂಜಾ ವಿಧಾನ, ಪ್ರವಚನ ಮತ್ತು ಆಶಿರ್ವಚನ, ಮಹಾಹೋಮ ಮೊದಲಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಕ್ಷುಲ್ಲಕ ದೀಕ್ಷೆ ಪಡೆದುಕೊಳ್ಳಲಿರುವ ಬಾಲಬ್ರಹ್ಮಚಾರಿ ಸಮ್ಮೇದ ಇವರ ಆನೆ ಮೇಲಿಂದ ಭವ್ಯ ಮೆರವಣಿಗೆ ಮಾಡಲಾಯಿತು. ಸಂಜೆ ಆರತಿ ಜಪ ಜರುಗಿದವು. 

ಸಂಸದ ರಾಜು ಶೆಟ್ಟಿ, ಮದನಾಯಿಕ ಸಾಹುಕಾರ, ರಾಜು ನಾಂದ್ರೆ, ಭರತೇಶ ನಾಂದ್ರೆ, ನೇಮಿನಾಥ ನರಸಗೌಡರ, ಅಜೀತ ನರಸಗೌಡರ, ಸುನೀಲ ಪಾಟೀಲ, ಮಾಮಾಸಾಬ ಪಾಟೀಲ, ರವೀಂದ್ರ ಪಾಟೀಲ, ಪ್ರಕಾಶ ಯಂದಗೌಡರ, ಶಾಂತಿನಾಥ ಪಾಟೀಲ, ಭರತೇಶ ನರಸಗೌಡರ, ಮಹಾವೀರ ನಾಂದ್ರೆ, ಬಾಬಾಸಾಬ ನಾಂದ್ರೆ, ನಿರಂಜನ ನರಸಗೌಡರ, ದಾದಾ ಹೊನಗೌಡರ, ಪ್ರಕಾಶ ಚೌಗಲಾ, ಬಾಹುಬಲಿ ಸಿದ್ನಾಳೆ, ಸಚೀನ ಲಗಾರೆ, ಉದಯ ಸವದತ್ತಿ, ಸಂಜು ಮುಕುಂದ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಇದ್ದರು. ಚೇತನ ನಾಂದ್ರೆ ಸ್ವಾಗತಿಸಿದರು. ಅಭಿನಂದನ ಗಣೆ ವಂದಿಸಿದರು.

ಶನಿವಾರ ದಿ. 15 ರಂದು ಕ್ಷುಲ್ಲಕ ದೀಕ್ಷಾ ಸಮಾರಂಭ:    

ಶನಿವಾರ ದಿ. 15ರಂದು ಮುಂಜಾನೆ 5.30 ಗಂಟೆಗೆ ಮಂಗಲ ನಿನಾದ. 7 ಗಂಟೆಗೆ ಮೂಲನಾಯಕ ಭಗವಾನ ಆದಿನಾಥ ತೀರ್ಥಂಕರ ಪಂಚಾಮೃತ ಅಭಿಷೇಕ, 8.45 ಗಂಟೆಗೆ ಬಾಲಬ್ರಹ್ಮಚಾರಿ ಸಮ್ಮೇದ ಇವರ ಕೇಶಲೋಚನ ಮತ್ತು ದೀಕ್ಷಾ ವಿಧಿಯ ಸವಾಲ, ಮುಂಜಾನೆ 9.30 ಗಂಟೆಗೆ ಮುನಿ ಮಹಾರಾಜರ ಆಹಾರಚರ್ಯ, 10.45 ಗಂಟೆಗೆ ಕ್ಷುಲ್ಲಕ ದೀಕ್ಷೆ ವಿಧಿ ಆರಂಭ, ಮಧ್ಯಾಹ್ನ 1 ಗಂಟೆಗೆ ಅತಿಥಿಗಳ ಹಾಗೂ ವಿದ್ವಜ್ಜನರಿಂದ ವ್ಯಾಖ್ಯಾನ, ಮಾರ್ಗದರ್ಶನ ಮತ್ತು ಆಚಾರ್ಯ ಶ್ರೀಗಳಿಂದ ಮಂಗಲ ಪ್ರವಚನ ಆರತಿ ವಿಸರ್ಜನ ಇತ್ಯಾದಿ.