ಬಾಲಾಜಿ ಹಾರ್ಡವೇರ್ ಮಳಿಗೆ ಉದ್ಘಾಟನೆ

ಲೋಕದರ್ಶನ ವರದಿ

ಬೆಳಗಾವಿ, 11: ಯಾವುದೇ ಉದ್ದಿಮೆಯಾಗಲಿ, ವ್ಯಾಪಾರ ವಹಿವಾಟು ಯಶಸ್ವಿಯಾಗಬೇಕಾದರೆ ಪ್ರಾಮಾಣಿಕತೆಯಿಂದ ಸೇವೆ ನೀಡುವುದು ಅಗತ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ 

ಹೇಳಿದರು.

ನಗರದ ಕಡೋಲ್ಕರ ಗಲ್ಲಿಯಲ್ಲಿ ಶನಿವಾರ ಬಾಲಾಜಿ ಹಾರ್ಡವೇರ್ ವ್ಯಾಪಾರ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಾಪಾರ, ವಹಿವಾಟಿನಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಉದ್ದಿಮೆ ಬೆಳೆಯುತ್ತದೆ ಎನ್ನುವುದಕ್ಕೆ ರುದ್ರಣ್ಣ ಚಂದರಗಿ ಅವರೇ ಸಾಕ್ಷಿಯಾಗಿದ್ದಾರೆ. ಪುಟ್ಟ ಹಳ್ಳಿಯೊಂದರಿಂದ ಇಲ್ಲಿಗೆ ಆಗಮಿಸಿ, ಹಾರ್ಡವೇರ್ ವ್ಯಾಪಾರ ವಹಿವಾಟು ನಡೆಸುವಂತಹ ಉದ್ದಿಮೆ ಸ್ಥಾಪನೆ ಮಾಡಿರುವುದು  ಹೆಮ್ಮೆಯ ವಿಚಾರವಾಗಿದೆ ಎಂದರು.

ಯಾವುದೇ ವ್ಯಾಪಾರ, ವಹಿವಾಟಿನಲ್ಲಿ ಗ್ರಾಹಕರೊಂದಿಗೆ ನಾವು ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಯಾವುದೇ ವ್ಯಾಪಾರ ವಹಿವಾಟು ಮಳಿಗೆ ಆರಂಭಿಸುವುದು ಸುಲಭ. ಆದರೆ, ಪ್ರಾಮಾಣಿಕವಾಗಿ ಗ್ರಾಹಕರೊಂದಿಗೆ ವ್ಯವಹಾರ ನಡೆಸುವುದು ಮುಖ್ಯವಾಗುತ್ತದೆ. ಗ್ರಾಹಕರ ವಿಶ್ವಾಸಗಳಿಸಿದರೆ ವ್ಯಾಪಾರ ವಹಿವಾಟವೂ ಉತ್ತಮವಾಗುತ್ತದೆ. ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ವ್ಯವಹಾರ ನಡೆಸಬೇಕು. ಉದ್ದಿಮೆಗಳನ್ನು ಆರಂಭಿಸುವ ಯುವಕರು ಮುಂದೆಬರಬೇಕಿದೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾದ ಕನಸು ನನಸು ಮಾಡಬೇಕು ಎಂದರು.

ಬಾಲಾಜಿ ಹಾರ್ಡವೇರ್ ವ್ಯಾಪಾರ ವಹಿವಾಟು ಆರಂಭಿಸಿರುವ ರುದ್ರಣ್ಣ ಚಂದರಗಿ ಅವರು ಪ್ರಾಮಾಣಿಕ ಸೇವೆ ನೀಡುವ ಮೂಲಕ ಉತ್ತಂಗಕ್ಕೇರಬೇಕು ಎಂದು 

ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಾಲಾಜಿ ಹಾರ್ಡವೇರ್ ಮಳಿಗೆ ಮಾಲೀಕ ರುದ್ರಣ್ಣ ಚಂದರಗಿ ನಾನು ಹಳ್ಳಿಯಿಂದ ಶೂನ್ಯ ಬಂಡವಾಳದೊಂದಿಗೆ ಬಂದಿದ್ದೆ. ಇಂದು ಇಂತಹ ಬೃಹತ್ ಹಾರ್ಡವೇರ್ ಮಳಿಗೆ ಸ್ಥಾಪಿಸಬೇಕೆಂಬ ಕನಸು ನನಸಾಗಿದೆ. ಇದಕ್ಕೆ ನನ್ನ ತಂದೆ, ತಾಯಿ ಆಶರ್ೀವಾದವೇ ಕಾರಣವಾಗಿದೆ ಎಂದು ಹೇಳಿದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಎಚ್ಪಿ ಮುಖಂಡ ಬಾಳಣ್ಣ ಕಗ್ಗಣಗಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಕಾಂತ ಶಾನವಾಡ ಕಾರ್ಯಕ್ರಮ ನಿರೂಪಿಸಿದರು.