ಬಾಲಮೇಳ ಕಾರ್ಯಕ್ರಮ ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿ: ಪಿ.ವೈ. ಶೆಟ್ಟೆಪ್ಪನವರ್
ಕೊಪ್ಪಳ 14: ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಪ್ರತಿ ಪೋಷಕರು ಮಕ್ಕಳನ್ನ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು ಎಂದು ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ್ ವೈ. ಶೆಟ್ಟೆಪ್ಪನವರ್ ಹೇಳಿದರು.ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಕಲಿಕೆ ಟಾಟಾ ಟ್ರಸ್ಟ್್ಸ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ ಗಂಗಾವತಿ ಯೋಜನೆಯ ಮುಕ್ಕುಂಪಿ ಗ್ರಾಮದ ಬೈಲುರಂಗ ಮಂದಿರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಅಂಗನವಾಡಿ ಮಕ್ಕಳ “ಬಾಲಮೇಳ ಕಾರ್ಯಕ್ರಮ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿಯ ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ನೀಡುವುದು ಅತ್ಯವಶ್ಯಕವಾಗಿದೆ. ಚಟುವಟಿಕೆ ಮೂಲಕ ಶಿಕ್ಷಣ ನೀಡುವದರಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ. ಪ್ರತಿಯೊಂದು ಅಂಗನವಾಡಿಗಳಿಗೆ ಸ್ಮಾರ್ಟ್ ಟಿವಿಗಳಿದ್ದು, ಇಲ್ಲಿನ ಸ್ವಚ್ಛತೆ ಮತ್ತು ಈ ಊರಿನ ಗುರುಹಿರಿಯರ ಕಾಳಜಿಯನ್ನು ನೋಡಿದರೆ ಖಾಸಗಿ ಶಾಲೆಗಿಂತ ನಮ್ಮ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲವೆಂದು ತಿಳಿಯುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕಿನ ಶಿಶು ಅಭಿವೃದ್ಧಿಯೋಜನಾಧಿಕಾರಿ ಜಯಶ್ರೀ ಆರ್., ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನ ಕುಮಾರ್, ಹನುಮಂತಪ್ಪ ತಳವಾರ್, ಮಂಜಪ್ಪ ಬಾಲಗೊಂಡರು, ವಿರುಪಾಕ್ಷಗೌಡ ಪಾಟೀಲ್, ರಂಗನಗೌಡ ಪೊಲೀಸ್ ಮದ್ದನಪ್ಪ ಬೋವಿ, ಗಂಗಪ್ಪ, ಹಾಗೂ ಅಂಗನವಾಡಿಯ ಹಿರಿಯ ಮೇಲ್ವಿಚಾರಕಿಯರು ಮತ್ತು ಮೇಲ್ವಿಚಾರಕಿಯರು, ಸ್ಥಳಿಯ ಮೂರು ಅಂಗನವಾಡಿಗಳ 3 ರಿಂದ 6 ವರ್ಷದ ಮಕ್ಕಳು ಹಾಗೂ ಮಕ್ಕಳ ತಂದೆ ತಾಯಿಗಳು, ಸಾರ್ವಜನಿಕರು, ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.