ಬೈಲಹೊಂಗಲ: ಮತದಾನ ಮಾಡುವದು ಪ್ರತಿಯೊಬ್ಬರ ಹಕ್ಕು: ಹೂಗಾರ

ಲೋಕದರ್ಶನ ವರದಿ

ಬೈಲಹೊಂಗಲ 22:  ಮತದಾನ ಮಾಡುವದು ಪ್ರತಿಯೊಬ್ಬರ ಹಕ್ಕು, ಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವದರ ಮೂಲಕ ತಮ್ಮ ಹಕ್ಕು ಚಲಾಯಿಸಿ ಎಂದು ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಹೇಳಿದರು. 

ಅವರು ಬುಧವಾರ ತಾಲೂಕಾ ಸ್ವೀಪ್ ಸಮಿತಿ ಆಶ್ರಯದಲ್ಲಿ ತಾಪಂ ಆವರಣದಲ್ಲಿ ಮತದಾನ ಜಾಗೃತಿ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದೆ. ದೇಶದ ಅಭಿವೃದ್ದಿ, ಆಥರ್ಿಕ ಪ್ರಗತಿಗೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ, ತಮಗೆ ನೀಡಿರುವ ಹಕ್ಕನ್ನು ಬಳಸಿ ದೇಶದ ಸದೃಡತೆಗೆ ಶ್ರಮಿಸಿ ಎಂದು ಕರೆ ನೀಡಿದರು. 

ತಾಪಂ ಇಓ ಸಮೀರ ಮುಲ್ಲಾ ಮಾತನಾಡಿ, ಮತದಾನ ಜಾಗೃತಿ ರಥವು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಮತದಾನ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದರು. 

ಅಕ್ಷರ ದಾಸೋಹ ಸಹಾಯಕ ನಿದರ್ೇಶಕಿ ಶ್ರೀದೇವಿ ನಾಗನೂರ, ಅಭಿಯಂತರ ಎಚ್.ಕೆ.ಒಂಟಗೋಡಿ, ಸ್ವೀಪ್ ಸಮಿತಿಯ ಪ್ರಕಾಶ ಪಾಟೀಲ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಡಿಪಿಓ ಇಲಾಖೆ ಅಧಿಕಾರಿಗಳು, ತಾಪಂ ಅಧಿಕಾರಿಗಳು ಹಾಗೂ ಸ್ವೀಪ ಸಮಿತಿಯ ಸದಸ್ಯರು ಇದ್ದರು.