ಬೈಲಹೊಂಗಲ : ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮನವಿ

ಲೋಕದರ್ಶನ ವರದಿ 

ಬೈಲಹೊಂಗಲ 26: ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ತಾಲೂಕಿನ ವಕ್ಕುಂದ ಗ್ರಾಮದ ಸಮಸ್ತ ರೈತ ಬಾಂಧವರು ಹು.ವಿ.ಸ.ಕಂ.ನಿ.ಕಾರ್ಯನಿವರ್ಾಹಕ ಅಭಿಯಂತರ ಮಾದೇಶ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. 

ರೈತ ಮುಖಂಡರಾದ ಸಿ.ಕೆ.ಮೆಕ್ಕೇದ, ರಾಮನಗೌಡ ಪಾಟೀಲ, ಕಾಶಪ್ಪ ಭದ್ರಶೆಟ್ಟಿ ಮಾತನಾಡಿ, ವಕ್ಕುಂದ ಗ್ರಾಮದಲ್ಲಿ 16 ಸಾವಿರ ಜನಸಂಖ್ಯೆ ಹೊಂದಿದ್ದು, 1ಸಾವಿರ ಜನಸಂಖ್ಯೆ ಹೊಂದಿರುವ ನೇಕಾರ ಕಾಲೋನಿಗೆ ನಿರಂತರ ವಿದ್ಯುತ್ ಪೂರೈಸಿ ನಿರಂತರ ನೀರು ಸರಬರಾಜು ಮಾಡುತ್ತಿದ್ದು, ಇನ್ನೂಳಿದ 15 ಸಾವಿರ ಜನಸಂಖ್ಯೆಗೆ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಪ್ರಸ್ತುತ ಬೇಸಿಗೆ ಇರುವುದರಿಂದ ಗ್ರಾಮದ ರೈತರಿಗೆ, ದನಕರುಗಳಿಗೆ ನೀರಿನ ತೊಂದರೆಯಾಗುತ್ತಿರುವುದರಿಂದ ಗ್ರಾಮದ ಎಲ್ಲ ಕುಡಿಯುವ ನೀರಿನ ಪಂಪಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ನೀರಾವರಿ ಪಂಪಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಸಲು ಅಧಿಕಾರಿಗಳು ಕ್ರಮ ಜರುಗಿಸಬೇಕೆಂದರು. ಕೆಲಕಾಲ ವಿದ್ಯುತ್ ಸರಬರಾಜು ಮಾಡುವ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳ ಹಾಗೂ ರೈತರ ನಡುವೆ ಚಚರ್ೆ ನಡೆಯಿತು. 

ಈ ಸಂದರ್ಭದಲ್ಲಿ ಅಶೋಕ ಭದ್ರಶೆಟ್ಟಿ, ಎ.ಎಸ್.ಹುರಳಿ, ಆರ್.ಎಸ್.ಹುಂಬಿ, ವಿನಾಯಕ ಸುತಗಟ್ಟಿ, ಮಂಜುನಾಥ ಹೂವಿನ, ಈರಣ್ಣಾ ಅಂಗಡಿ, ರಮೇಶ ಹಾದಿಮನಿ, ಮಲ್ಲಿಕಾಜರ್ುನ ಅಂಬರಗಟ್ಟಿ, ಗುರುನಾಥ ಕೋಲಕಾರ, ಚನ್ನಪ್ಪ ಬಡಿಗೇರ, ಎಂ.ಎಂ.ಕಡಗನ್ನವರ, ಪ್ರಕಾಶಗೌಡ ಹುಲೆಪ್ಪನವರ ಸೇರಿದಂತೆ ವಕ್ಕುಂದ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದರು.