ಬೈಲಹೊಂಗಲ:ಗ್ರಾಮೀಣ ಕ್ರೀಡೆಗಳನ್ನು ಉಳಿಸಿ:ಮಹಾಂತೇಶ ಶಾಸ್ತ್ರೀ ಆರಾದ್ರಿಮಠ

ಬೈಲಹೊಂಗಲ 26: ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದು ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಹೇಳಿದರು. 

ಅವರು ಸೋಮವಾರ  ಪಟ್ಟಣದ ಮುರಗೋಡ ರಸ್ತೆಯ ಬಸವನಗರದಲ್ಲಿರುವ ದುಗರ್ಾದೇವಿ ದೇವಸ್ಥಾನದ 11 ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀಮಾತಾ ಸಂಭ್ರಮ 2019 ರ ಅಂಗವಾಗಿ ರಾಷ್ಟ್ರಮಟ್ಟದ ಭಾರಿ ಜಿದ್ದಾಜಿದ್ದಿ ಟಗರಿನ ಕಾಳಗಕ್ಕೆ ಚಾಲನೆ ನೀಡಿ ಮಾತನಾಡಿ, ಮನರಂಜನೆಗಾಗಿ ಗ್ರಾಮೀಣ ಪ್ರದೇಶದ ಜನರು ಹಲವಾರು ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪುರಾತನ ಕ್ರೀಡೆಗಳನ್ನು ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಇಂದಿನ ಆಧುನಿಕ ಕಾಲದ ಯುವ ಜನತೆ ಪಾಶ್ಚಿಮಾತ್ಯದ ಕ್ರೀಡೆಗಳಿಗೆ ಮಾರುಹೋಗಿ ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದಾರೆ ಎಂದರು. 

ಗ್ರಾಮೀಣ ಕ್ರೀಡೆಗಳು ಕೇವಲ ಮನರಂಜನೆಗಾಗಿ ಅಲ್ಲದೆ ದೇಹಕ್ಕೆ ಉತ್ತಮ ಆರೋಗ್ಯ ಒದಗಿಸುವಲ್ಲಿ ಸಹಕಾರಿಯಾಗುತ್ತಿದ್ದವು. ಆದರೆ ಇಂದಿನ ಆಧುನಿಕ ಯುಗವು ಕೇವಲ ಪಾಶ್ಚಿಮಾತ್ಯದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವಲ್ಲಿ ಮರೆಯುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು. 

ರಾಜು ಕುಡಸೋಮನ್ನವರ, ಸುಭಾಸ ತುರಮರಿ, ಸಂತೋಷ ರಾಯರ, ಮಹಾಂತೇಶ ಇಂಚಲ ಹಾಗೂ ಕ್ರೀಡಾಭಿಮಾನಿಗಳು ಇದ್ದರು.