ಬೈಲಹೊಂಗಲ ಪತ್ರಿ ಬಸವ ನಗರ ಕರೆಮ್ಮಾದೇವಿ ಜಾತ್ರಾ : ಯಜ್ಞ, ತಪಸ್ಸು, ದಾನಾದಿಗಳಿಂದ ಜೀವನ ಸಾರ್ಥಕ: ಸರಸ್ವತಿ ಸ್ವಾಮೀಜಿ

ಬೈಲಹೊಂಗಲ 12: ಯಜ್ಞ, ತಪಸ್ಸು, ದಾನ ಮಾಡುವದರಿಂದ ಜೀವನ ಸಾರ್ಥಕ ಪಡೆಯುತ್ತದೆ ಎಂದು ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಹೇಳಿದರು.

     ಅವರು ಪಟ್ಟಣದ ಪತ್ರಿ ಬಸವ ನಗರ 3ನೇ ಅಡ್ಡ ರಸ್ತೆಯಲ್ಲಿ ಗುರುವಾರ ನಡೆದ ಕರೆಮ್ಮಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಮಾರಂಭದ ಸಾನಿಧ್ಯ  ವಹಿಸಿ ಮಾತನಾಡಿ, ಮಹಿಳೆಯರು ಮನೆಯಲ್ಲಿ ದೇವಿ ಪಾರಾಯಣ, ದೇವರ ಸ್ಮರಣೆ ಮಾಡಬೇಕು. ದೇವರ ಆಶೀವರ್ಾದ ಇದ್ದರೆ ಮಾತ್ರ ಸಾಧನೆ ತಲುಪಲು ಸಾಧ್ಯವಾಗುತ್ತದೆ ಎಂದರು.

      ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ದಾನಧರ್ಮ ಸಣ್ಣದು, ದೊಡ್ಡದು ಮುಖ್ಯವಲ್ಲ. ದಾನ ಮಾಡುವುದು ಮುಖ್ಯವಾಗಿದೆ ಎಂದರು. ಸದಾ ಕಾಲ ದೇವರ ಸ್ಮರಣೆ ಮಾಡಿದರೆ ಜೀವನದಲ್ಲಿ ನೆಮ್ಮದಿಯ ಜೀವನ ಸಾಗಿಸಬಹದುದೆಂದರು. ಬೆಳಗಾವಿ ಅವರ ಮನೆತನ ಉತ್ತರೋತ್ತರವಾಗಿ ಬೆಳೆಯಲೆಂದು ಶುಭ ಹಾರೈಸಿದರು.

  ಚಿತ್ರನಟ ಶಿವರಂಜನ ಬೋಳನ್ನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

   ಗುತ್ತಿಗೆದಾರ ಸಿ.ಜಿ.ನಾಗನಗೌಡ್ರ, ಜಾತ್ರಾ ಕಮೀಟಿ ಮುಖಂಡರಾದ ಬಿ.ಎಸ್.ಬೂದಿಹಾಳ, ಶಿವಾನಂದ ಮಡಿವಾಳರ, ಎಲ್.ಬಿ.ಬಂಡಿವಡ್ಡರ ಹಾಗೂ ಪತ್ರಿ ಬಸವ ನಗರ, ವಿನಾಯಕ ನಗರದ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು. 

     ಶ್ರೀದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಕಲಗುಡಿ ಭಾವಗೀತೆ ಹಾಡಿದರು. ಮಂಜುಳಾ ಪೂಜೇರಿ, ವಿದ್ಯಾ ನೀಲಪ್ಪನವರ ನಿರೂಪಿಸಿದರು. ಎಸ್.ಕೆ.ಸಂಪಗಾಂವ ವಂದಿಸಿದರು. 

    ಇದಕ್ಕೂ ಮುಂಚೆ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ (ಕಲಗುಡಿ) ಆವರಣದಿಂದ ಕರೆಮ್ಮಾದೇವಿಯ ಮೂತರ್ಿ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಗೆ ಸುಮಂಗಲೆಯರ ಕುಂಭಮೇಳ, ಡೊಳ್ಳು ಕುಣಿತ, ಯುವಕರ ನೃತ್ಯ ಕಳೆ ತಂದು ಕೊಟ್ಟವು. ಹಿರಿಯರು, ಯುವಕರು, ಮಹಿಳೆಯರು ಪರಸ್ಪರ ಭಂಡಾರ ಎರಚಿ ಸಂಭ್ರಮಪಟ್ಟರು.