ಬೈಲಹೊಂಗಲ 07: ಶೋಷಿತ ಅಭಿವೃದ್ಧಿಗೆ ಡಾ.ಬಿ.ಆರ್. ಅಂಬೇಡ್ಕರ ಅವರಷ್ಟೆ ಪರಿಶ್ರಮದಿಂದ ದುಡಿದ ದಿಟ್ಟ ಹೋರಾಟಗಾರ ಬಾಬು ಜಗಜೀವನರಾಮ್ ಅವರ ಆದರ್ಶಗಳನ್ನು ಸರ್ವರೂ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಿ ಶೋಷಿತರು ಸಮಾಜದ ಮುಖ್ಯವಾಹಿನಿಗೆ ತರಬಹದಾಗಿದೆ ಎಂದು ಉಪವಿಭಾಗಾಧಿಕಾರಿ ಮಾರುತಿ ಎಂ.ಪಿ.ಹೇಳಿದರು.
ಅವರು ಶುಕ್ರವಾರ ಪಟ್ಟಣದ ಹರಳಯ್ಯ ಕಾಲೋನಿಯ ಸಭಾಭವನದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಾಬು ಜಗಜೀವನರಾಮ್ ರವರ 112 ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಾಬು ಜಗಜೀವನರಾಮ್ ಅವರು ದೇಶ ಕಂಡ ಪ್ರತಿಭಾವಂತ ರಾಜಕಾರಣಿಗಳಲ್ಲಿ ಒಬ್ಬರು. ಅವರ 40 ವರ್ಷಗಳ ಕಾಲದ ಸುದೀರ್ಘ ರಾಜಕೀಯದಲ್ಲಿ ಎಲ್ಲಾ ಖಾತೆಗಳ ನಿರ್ವಹಣೆ ಮಾಡಿ ಬದಲಾವಣೆಯ ಪರ್ವಕ್ಕೆ ನಾಂದಿಯಾಡಿದ್ದರು. ದಲಿತ ಹಾಗೂ ಹಿಂದುಳಿದ ವರ್ಗಗಳು ತಮ್ಮಲ್ಲಿನ ಕೀಳರಿಮೆಯನ್ನು ದೂರಮಾಡಿ ಶಿಕ್ಷಣ, ಸಂಘಟನೆ, ಹೋರಾಟಗಳನ್ನು ಮೈಗೂಡಿಸಿಕೊಂಡು ತಮ್ಮ ಅಭಿವೃದ್ಧಿಯನ್ನು ಕಾಣಬೇಕು ಎಂದರು.
ಬೆಳಗಾವಿ ಡಾ.ಬಾಬಾಸಾಹೇಬ ಅಂಭೇಡ್ಕರ ಅಧ್ಯಯನ ಪೀಠ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಚಂದ್ರಕಾಂತ ವಾಘಮಾರೆ ಉಪನ್ಯಾಸ ನೀಡಿದರು.
ತಹಸೀಲ್ದಾರ ಡಾ.ಡಿ.ಎಚ್.ಹೂಗಾರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಡಿವಾಯ್ಎಸ್ಪಿ ಜೆ.ಎಮ್.ಕರುಣಾಕರಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ತಾಪಂ.ಇಓ ಸಮೀರ ಮುಲ್ಲಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ, ಕೃಷಿ ಸಹಾಯಕ ನಿದರ್ೇಶಕ ಎಮ್.ಬಿ.ಹೊಸಮನಿ, ಬಿಇಓ ಪಾರ್ವತಿ ವಸ್ತ್ರದ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಎಸ್.ಜಿ.ಮರಿಗೌಡ್ರ ಮತ್ತಿತರರು ಇದ್ದರು.
ಬಾಬು ಜಗಜೀವನ ರಾಮ್ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಸವರಾಜ ಭರಮನ್ನವರ, ಎ.ಎಚ್.ರಾಯಬಾಗ, ತಿಪ್ಪನ್ನ ಸವದತ್ತಿ, ಮೋಹನ ಮುರಗೋಡ, ಚಂದ್ರಕಾಂತ ಕಟ್ಟಿಮನಿ, ಶಂಕರ ಕೋರಿಕೊಪ್ಪ, ಬಾಬು ಜಗಜೀವನರಾಮ್ ಯುವಕ ಮಂಡಳ ಅಧ್ಯಕ್ಷ ರಾಜೇಶ ತೊರಗಲ, ಉಪಾಧ್ಯಕ್ಷ ಬಸವರಾಜ ಕಿತ್ತೂರ, ಪರಶುರಾಮ ರಾಯಬಾಗ, ಮಂಜುನಾಥ ರಾಮದುರ್ಗ, ಈರಣ್ಣ ರಾಯಬಾಗ, ಸಿ.ಎಚ್.ಮಾದರ, ಜೆ.ಡಿ.ಅಣ್ಣಿಗೇರಿ, ವಿ.ಕೆ.ನ್ಯಾಮಗೌಡ್ರ, ಎಸ್.ವಿ.ರೊಳ್ಳಿ, ಪಿ.ಸಿ.ದೇಶನೂರ, ಎಲ್.ಆರ್.ಸದಲಗಿ, ಎಸ್.ಎಚ್.ಪಠಾಣ ಹಾಗೂ ವಿವಿಧ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾಥರ್ಿಗಳು ಇದ್ದರು.
ಎಮ್.ಎಮ್.ಮಕರವಳ್ಳಿ ನಿರೂಪಿಸಿ, ವಂದಿಸಿದರು.