ಬೈಲಹೊಂಗಲ 27: ನಿತ್ಯವೂ ದೇವಿ ಆರಾಧನೆ ಮಾಡುವುದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿರುವ ಮನುಷ್ಯ ಏಳ್ಗೆ ಹೊಂದುತ್ತಾನೆ ಎಂದು ಹುಬ್ಬಳ್ಳಿ, ಹಾನಗಲ್ಲ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವನಗರದ ದುಗರ್ಾಪರಮೇಶ್ವರಿ ದೇವಸ್ಥಾನದ 11ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ನಡೆದ ಶ್ರೀಮಾತಾ ಸಂಭ್ರಮ 2019ರ ಧಾಮರ್ಿಕಸಭೆ, ಸಾಂಸ್ಕೃತಿಕ, ಹಾಸ್ಯೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ಭಾರತೀಯ ಧಾಮರ್ಿಕ ಪರಂಪರೆಯಲ್ಲಿ ಶಕ್ತಿಯ ಸ್ಥಾನಮಾನ ವಿಶಿಷ್ಟವಾದುದು. ಆ ಶಕ್ತಿ ದೇವತೆಯನ್ನು ಅನುದಿನವು ಪೂಜಿಸುತ್ತಾ ಸಾಮಾಜಿಕ, ಧಾಮರ್ಿಕ ಸೇವೆ ಸಲ್ಲಿಸುತ್ತಿರುವ ವೇದಮೂತರ್ಿ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಕಾರ್ಯ ಶ್ಲಾಘನೀಯವಾಗಿದೆ. ಮಠಾಧೀಶರು ಮಾಡದಂತ ಕಾರ್ಯವನ್ನು ಅವರು ಮುನ್ನಡೆಸಿಕೊಂಡು ಹೋಗುತ್ತಿರುವದು ಸಂತಸ ತಂದಿದೆ ಎಂದರು.
ಮುರಗೋಡ ನೀಲಕಂಠ ಸ್ವಾಮೀಜಿ ಅಧ್ಯಕ್ಷತೆವಹಿಸಿ ಮಾತನಾಡಿ, ಜನರಿಗೆ ಆಧ್ಯಾತ್ಮದ ಅರಿವು ಮೂಡಿಸುವದರ ಜೊತೆಗೆ ಸಾಂಸ್ಕೃತಿಕ, ಮನರಂಜನೆಯ ಸವಿ ಉಣಬಡಿಸುತ್ತಿರುವ ಶಾಸ್ತ್ರಿಗಳ ಕಾರ್ಯ ಅಮೋಘವಾಗಿದೆ ಎಂದರು.
ಧರ್ಮದಶರ್ಿ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ನೇತೃತ್ವವಹಿಸಿದ್ದರು.
ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಮಹಾಂತೇಶ ಕೌಜಲಗಿ ಸಮಾರಂಭ ಉದ್ಘಾಟಿಸಿದರು.
ಸೋಮೇಶ್ವರ ಸಕ್ಕರೆ ಕಾಖರ್ಾನೆ ಚೇರಮನ ಗುರುಪುತ್ರಪ್ಪಾ ಹೊಸಮನಿ, ಹಿರಿಯರಾದ ಮಲ್ಲಿಕಾಜರ್ುನ ಬೋಳನ್ನವರ, ಬಸವರಾಜ ಮೂಗಿ, ಪ್ರೊ.ಡಾ.ಸಿ.ಬಿ.ಗಣಾಚಾರಿ, ಪುರಸಭೆ ಸದಸ್ಯ ಸುಧೀರ ವಾಲಿ, ವೇದಿಕೆಯಲ್ಲಿ ಇದ್ದರು.
ಜಾತ್ರಾ ಕಮೀಟಿ ಅಧ್ಯಕ್ಷ ರಾಜು ಕುಡಸೋಮಣ್ಣವರ, ಉಪಾಧ್ಯಕ್ಷ ಸುಭಾಸ ತುರಮರಿ, ಮಲ್ಲಿಕಾಜರ್ುನ ಕಮತಗಿ, ರವಿ ಸವಟಗಿ, ಕುಮಾರ ರೇಶ್ಮಿ ಇದ್ದರು.
ಶೈಲಾ ಕೊಕ್ಕರಿ ನಿರೂಪಿಸಿದರು. ಸುಧೀರ ವಾಲಿ ಸ್ವಾಗತಿಸಿದರು. ಸುಭಾಸ ತುರಮರಿ ವಂದಿಸಿದರು.
ಕಲಾವಿದರಿಂದ ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು ನಡೆದವು. ಹಲವು ಸಾಧಕರನ್ನು ಸತ್ಕರಿಸಲಾಯಿತು.