ಲೋಕದರ್ಶನ ವರದಿ
ಗದಗ 07: ಶೋಷಿತ ಸಮುದಾಯಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಲು ಸರ್ಕಾರಗಳಿಂದ ಸುಮಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಇದರ ಮಾಹಿತಿಯ ಕೊರತೆಯಿಂದ ಸಮುದಾಯಗಳು ಯೋಜನೆಗಳಿಂದ ವಂಚಿತರಾಗುತ್ತಿದ್ದು, ಶೋಷಿತ ಸಮುದಾಯಗಳು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದು ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ವಿ.ವಾಯ್.ಬಾಗೇವಾಡಿರವರು ಕರೆ ನೀಡಿದರು.
ಅವರು ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಆಶ್ರಯದಲ್ಲಿ ಅಂಬೇಡ್ಕರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿವಿಧ ವಸತಿ ಹಾಗೂ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ಶಿಬಿರದಲ್ಲಿ ಮಾತನಾಡುತ್ತ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್.ಸಿ, ಎಸ್.ಟಿ ಸಮುದಾಯದ ಮಕ್ಕಳ ವಿದ್ಯಾಭಾಸಕ್ಕಾಗಿ ಸಹಾಯಧನವನ್ನು ನೀಡಲಾಗುತ್ತಿದೆ. ಬಡ ಕುಟುಂಬದ ವಿದ್ಯಾರ್ಥಿ ಗಳಿಗೆ ವಸತಿ ವ್ಯವಸ್ಥೆಯ ಜೊತೆಗೆ ಅವರ ವಿದ್ಯಾಭ್ಯಾಸಕ್ಕಾಗಿ ಸಹಾಯವನ್ನು ಮಾಡುವ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಂತರ ಜಾತಿ ವಿವಾವಹಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನವನ್ನು ನೀಡಲಾಗುತ್ತಿದೆ. ದೇವದಾಸಿ ಮಕ್ಕಳ ಶಿಕ್ಷಣ ಹಾಗೂ ಮದುವೆ ಇತರೇ ಅಭಿವೃದ್ಧಿಗಾಗಿ ಇಲಾಖೆಯಿಂದ ಅನುದಾನವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನಾ ಅಧಿಕಾರಿಗಳಾದ ಸುನಂದಾ ಅವರು ಮಾತನಾಡಿ ಅಲ್ಪಸಂಖ್ಯಾತರ ಇಲಾಖೆಯಿಂದ ಬಡ ಮಕ್ಕಳ ಮದುವೆಯ ಖರ್ಚಿ ಗಾಗಿ ಸಕರ್ಾರದಿಂದ ಶಾಧಿ ಭಾಗ್ಯ ಯೋಜನೆಡಿಯಲ್ಲಿ 50ಸಾವಿರ ರೂಗಳನ್ನು ಸಹಾಯಧನವನ್ನು ನೀಡಲಾಗುತ್ತಿದೆ. ಇದನ್ನು ಪಡೆದುಕೊಳ್ಳಬೇಕಾದರೆ ಮದುವೆ ಮಾಡಿಕೊಳ್ಳುವ ವಧುವಿಗೆ ಕಡ್ಡಾಯವಾಗಿ 18 ವರ್ಷ ಆಗಿರಬೇಕು, ಹಾಗೂ ವರನಿಗೆ 21 ವರ್ಷಗಳು ಆಗಿರಬೇಕು, ಮದುವೆ ದಿ. ನಿಗದಿಯಾದ 10ದಿನದ ಒಳಗಾಗಿ ಇಲಾಖೆಯಿಂದ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಕಚೇರಿಗೆ ಹಾಜರ ಪಡಿಸಬೇಕು, ಅಲ್ಪಸಂಖ್ಯಾತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಕಡುಬಡ ಕುಟುಂಬದ ವಿದ್ಯಾಥರ್ಿಗಳ ಅನುಕೋಲಕ್ಕಾಗಿ ವಸತಿಯ ಜೊತೆಗೆ ಶಿಕ್ಷಣದ ಎಲ್ಲಾ ವ್ಯವಸ್ಥೆಯನ್ನು ಇಲಾಖೆಯಿಂದ ನೀಡಲಾಗುತ್ತಿದೆ, ನೋಂದಣೆಯಾಗಿರುವ ಸಂಘ-ಸಂಸ್ಥೆಗೆ ಶಾಧಿ ಮಹಲ್ ಅಥವಾ ಸಮುದಾಯ ಭವನ ನಿಮರ್ಿಸಲು ಅನುದಾನವನ್ನು ಇಲಾಖೆಯಿಂದ ನೀಡಲಾಗುತ್ತಿದ್ದು ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ವಸತಿ ಯೋಜನೆಡಿಯಲ್ಲಿ ಗದಗ-ಬೆಟಗೇರಿ ನಗರದಲ್ಲಿ ಸುಮಾರು ಸ್ಲಂ ಪ್ರದೇಶಗಳಲ್ಲಿ 2010 ಮನೆಗಳನ್ನು ಕನರ್ಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿಮರ್ಿಸಲು ಉದ್ದೇಶಿಸಲಾಗಿದೆ, ಕೊಳಗೇರಿ ನಿವಾಸಿಗಳು ವಸತಿ ಹಾಗೂ ವಿವಿಧ ಸ್ಲಂ ಪ್ರದೇಶಗಳ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆದು ತಮ್ಮ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಸ್ಲಂ ನಿವಾಸಿಗಳು ಸಂಘಟಿತರಾಗಬೇಕೆಂದು ಹೇಳಿದರು. ಸ್ಲಂ ಸಮಿತಿ ಪ್ರಧಾನ ಕಾರ್ಯದಶರ್ಿ ಅಶೋಕ.ಎಸ್.ಕುಸಬಿ ಕಾರ್ಯಕ್ರಮ ನಿರೊಪಿಸಿ ವಂದಿಸಿದರು, ಗದಗ ಜಿಲ್ಲಾ ಸ್ಲಂ ಸಮಿತಿ ಸಂಘಟನಾ ಕಾರ್ಯದಶರ್ಿ ಪರವೀನಬಾನು ಹವಾಲ್ದಾರ, ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ, ವೇದಿಕೆ ಮೇಲೆ ಉಪಸ್ಥಿತರಿದ್ದರು, ಯುವ ಸಮಿತಿ ಸಂಘಟನಾ ಸಂಚಾಲಕ ಮಹ್ಮದರಫೀಕ ಧಾರವಾಡ, ನಜಮುನಿಸಾ ಮುರಗೋಡ, ವಂದನಾ ಶ್ಯಾವಿ, ತಮನ್ನಾ ಧಾರವಾಡ, ಮೌಲಾಸಾಬ ಗಚ್ಚಿ, ಕವಿತಾ ಶ್ಯಾವಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶಗಳ ನೂರಾರು ಸ್ಲಂ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.