ಲೋಕದರ್ಶನ ವರದಿ
ಬಾಗಲಕೋಟೆ 16: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳನ್ನು ಪ್ರತಿ ಕ್ವಿಂಟಲ್ಗೆ ರೂ.4650 ಯಂತೆ ಪ್ರತಿ ಎಕರೆಗೆ 3 ಕ್ವಿಂಟಲ್ನಂತೆ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುತ್ತಿದ್ದು, ನೊಂದಣಿಗೆ ಮೇ 28 ಕೊನೆದಿನವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಇತ್ತೀಚೆಗೆ ಜರುಗಿದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ಎ.ಪಿ.ಎಂ.ಸಿ ಪ್ರಾಂಗಣ, ಹುನಗುಂದ ಎಪಿಎಂಸಿ ಆವರಣ, ಸೂಳೇಬಾವಿ ಎಫ್.ಪಿ.ಓ ಆವರಣ, ಸಾವಳಗಿ ಪಿಕೆಪಿಎಸ್ ಆವರಣ ಹಾಗೂ ತೊದಲಬಾಗಿ ಎಫ್.ಎಚ್.ಸಿ.ಎಲ್ ಆವರಣದಲ್ಲಿ ಕಡಲೆಕಾಳು ಖರೀದಿಗೆ ರೈತರಿಂದ ನೊಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಡಳೆಕಾಳು ಖರೀದಿಗೆ ಮೇ 28 ಕೊನೆದಿನವಾಗಿದ್ದು, ರೈತರು ನೊಂದಣಿ ಸಮಯದಲ್ಲಿ ಕಂದಾಯ ಇಲಾಖೆಯಿಂದ ಪಹಣಿ ಪತ್ರ, ಆಧಾರ ಕಾರ್ಡ, ಬ್ಯಾಂಕ್ ಪಾಸ್ಬುಕ್ ಝರಾಕ್ಸ ಪ್ರತಿ, ಬೆಳೆ ಪ್ರಮಾಣ ಪತ್ರ ಹಾಗೂ ಮೊಬೈಲ್ ನಂಬರ ದಾಖಲೆಗಳನ್ನು ತಪ್ಪದೇ ತರಬೇಕು. ಕಡಳೆಕಾಲು ಖರೀದಿಯನ್ನು ಜೂನ್ 7 ವರೆಗೆ ಖರೀದಿ ಮಾಡಲಾಗುತ್ತಿದೆ. ಖರೀದಿಯನ್ನು ಕನರ್ಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಶಾಖೆ, ಬಾಗಲಕೋಟೆ ಅವರು ಖರೀದಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ರೈತ ಭಾಂದವರಲ್ಲಿ ಕೋರಿದ್ದಾರೆ.
ಖರೀದಿ ಪ್ರಕ್ರಿಯೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದ್ದು, ಕಡಲೆಕಾಳನ್ನು ಚೆನ್ನಾಗಿ ಒಣಗಿಸಿ ತರಬೇಕು. ಖಂಡಕಾಳು, ಕ್ರಿಮಿಕೀಟಗಳಿಂದ ಕೂಡಿರಬಾರದು. ಕಸಕಡ್ಡಿಗಳನ್ನು ಸಾಣಿಗೆಯಿಂದ ಸ್ವಚ್ಛಗೊಳಿಸಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ. ಖರೀದಿ ಕೇಂದ್ರದಲ್ಲಿ ಹುಟ್ಟುವಳಿಯ ಹಸ್ತಾಂತರವನ್ನು ಸಾಗಾಣಿಕೆ ಗುತ್ತಿಗೆದಾರರು ನಿರ್ವಹಿಸುವದು, ತೂಕದಲ್ಲಿ ಅನಧಿಕೃತವಾಗಿ ಹಮಾಲರ ಫೀ, ತೂಕದ ಫೀ, ಸೂಟು, ಕಾಳು ಕೂಡುವುದು ಮತ್ತು ಪಡೆಯುವದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಕಾಲು ಉತ್ಪನ್ನವನ್ನು ಪರೀಕ್ಷಿಸಲು ಅನುಭವಿ ಗ್ರೇಡರ್ಗಳನ್ನು ಕೃಷಿ ಇಲಾಖೆಯಿಂದ ನೇಮಿಸಿಕೊಳ್ಳಬೇಕು. ಖರೀದಿಸಿದ ಕಡಲೆಕಾಳನ್ನು ದಾಸ್ತಾನು ಮಾಡಲು ಅಗತ್ಯ ಗೋದಾಮುಗಳ ವ್ಯವಸ್ಥೆ ಇರುವುದಾಗಿ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು ತಿಳಿಸಿದರು. ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆಕಾಳನ್ನು ಖರೀದಿಸದಂತೆ ಹಾಗೂ ಖರೀದಿ ಕೇಂದ್ರಗಳಲ್ಲಿ ಯಾವುದೇ ರೀತಿಯ ದುರುಪಯೋಗವಾಗದಂತೆ ಕ್ರಮ ವಹಿಸಲು ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೇ ಖರೀದಿಸಿದ ಕಡಲೆಕಾಳು ಉತ್ಪನ್ನ ಕುರಿತು ಹಣ ಸಂದಾಯವನ್ನು ಸಂಬಂಧಿಸಿದ ರೈತರಿಗೆ 15 ದಿನಗಳೊಳಗಾಗಿ ಆರ್.ಟಿ.ಜಿ.ಎಸ್ ಮೂಲಕ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಒ ಗಂಗೂಬಾಯಿ ಮಾನಕರ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ಸಹಕಾರ ಇಲಾಖೆಯ ಉಪನಿಬಂಧಕ ಕಳಸನ್ನವರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.