ಲೋಕದರ್ಶನವರದಿ
ಬ್ಯಾಡಗಿ19: ಎತ್ತಿನಹೊಳೆ ಯೋಜನೆಗೆ ಸಕರ್ಾರದ ಬಳಿ ತಾಂತ್ರಿಕತೆ ಇದೆ, ಆದರೆ ಪಕ್ಕದಲ್ಲಿಯೇ ಹರಿದು ಹೋಗುತ್ತಿರುವ ತುಂಗಭದ್ರಾ ನದಿ ನೀರನ್ನು ಬಳಕೆ ಮಾಡುವ ಭಾಗ್ಯವಿಲ್ಲ, ಬ್ಯಾಡಗಿ ತಾಲ್ಲೂಕು ಎತ್ತರ ಪ್ರದೇಶದಲ್ಲಿದೆ ಎಂದು ವರದಿ ನೀಡುವ ಮೂಲಕ ಕಳೆದ 20 ವರ್ಷಗಳಿಂದ ನೀರಾವರಿ ವಿಚಾರದಲ್ಲಿ ಅನ್ಯಾಯವೆಸಗಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಆರೋಪಿಸಿದರು.
ರೈತ ಸಂಘ ಕರೆ ನೀಡಿದ್ದ 'ಬ್ಯಾಡಗಿ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರುಯಾವುದೇ ನದಿಗಳೂ ಇಲ್ಲ, ನೀರಾವರಿ ಯೋಜನೆಗಳಿಲ್ಲ ಬ್ಯಾಡಗಿ ತಾಲೂಕಿಗೆ ಏನಿದೆ ಹೇಳಿ..? ನೀರಾವರಿ ಯೋಜನೆಗಳು ರೈತರ ಜೀವನಾಡಿ ಸಕರ್ಾರಗಳ ನಿರ್ಲಕ್ಷ್ಯದಿಂದ, ಇದ್ದಂತಹ ಕೃಷಿ ಸರಣಿ ವೈಫಲ್ಯ ಕಾಣುತ್ತಿದೆ ಕೂಡಲೇ ಸಮ್ಮಿಶ್ರ ಸಕರ್ಾರ ಬಜೆಟ್ನಲ್ಲಿಯೇ ಹಣ ಒದಗಿಸಬೇಕು ಎಂದರು