ಕೂಡಲೇ ಬಿಎಸ್ಪಿಎಲ್ ಕಾರ್ಖಾನೆ ಪ್ರಾರಂಭಿಸಬೇಕು: ಬಸವರಾಜ್ ನಡಲುಮನಿ
ಕೊಪ್ಪಳ 07: ಸಮಗ್ರ ಅಭಿವೃದ್ಧಿಯಾಗಲು ಕಾರ್ಖಾನೆಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ ಕೂಡಲೇ ಬಿ ಎಸ್ ಪಿಎಲ್ ಕಾರ್ಖಾನೆ ಪ್ರಾರಂಭಿಸಬೇಕು ಎಂದು ದಲಿತ ಸಂಘಟನಾ ಸಮಿತಿ ಭೀಮಾ ಗರ್ಜನೆ ಸಂಘಟನೆಯ ಕಲ್ಬುರ್ಗಿ ವಿಭಾಗದ ಅಧ್ಯಕ್ಷ ಬಸವರಾಜ್ ನಡಲುಮನಿ ಹೇಳಿದರು. ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಕೊಪ್ಪಳವು ಕಲ್ಯಾಣ ಕರ್ನಾಟಕದ ಒಂದು ಅವಿಭಾಜ್ಯ ಅಂಗವಾಗಿದ್ದು, ಈಗ ತಾನೆ ಅಭಿವೃದ್ಧಿ ಪತ್ರದತ್ತ ಕಂಡುಕೊಳ್ಳುತ್ತಿದೆ, ಒಂದು ಪ್ರದೇಶವು ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ವಾಣಿಜ್ಯ ವ್ಯವಹಾರಗಳು ವೃದ್ಧಿಯಾಗಬೇಕು, ಈ ನಿಟ್ಟಿನಲ್ಲಿ ಕಾರ್ಖಾನೆಗಳು ಅತಿಮುಖ್ಯ ಪಾತ್ರ ವಹಿಸುತ್ತವೆ, ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಈಗಾಗಲೇ ಬಲ್ದೋಟಾ ಸಂಸ್ಥೆಯಾದ ಬಿ ಎಸ್ ಪಿ ಎಲ್ ಕಂಪನಿಯು ಅಗತ್ಯವಿರುವ ಉನ್ನತ ಮಟ್ಟದ ಮಾಲಿನ್ಯ ಯಂತ್ರೋಪಕರಣಗಳನ್ನು ಅಳವಡಿಸಿ ಪರಿಸರ ಮಾಲಿನ್ಯ ಕಡಿತಗೊಳಿಸುವಲ್ಲಿ ವಿಶೇಷವಾಗಿ ಕರ್ತವ್ಯ ನಿರ್ವಹಿಸುತ್ತದೆ, ಮಾನವ ಸಂಕುಲಕ್ಕೆ ಪ್ರಾಣಿ ಪಕ್ಷಿ ಸಂಕುಲಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಕಾರ್ಖಾನೆ ಹೊಸ ತಂತ್ರಜ್ಞಾನ ಬಳಸಿ ಪ್ರಾರಂಭಿಸುತ್ತಾರೆ ಎಂಬ ವಿಶ್ವಾಸವಿದೆ ಮತ್ತು ಗ್ರಾಮೀಣ ಭಾಗ ಅಭಿವೃದ್ಧಿಯಾಗಲು ಸಿಎಸ್ ಆರ್ ಅನುದಾನದ ಅಡಿಯಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಬಿಎಸ್ಪಿಎಲ್ ಕಂಪನಿಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸುವುದು ಶಾಲಾ-ಪೀಠೋಪಕರಣ ಸ್ಮಾರ್ಟ್ ಕ್ಲಾಸ್ ಗಳನ್ನು ಒದಗಿಸುವುದು, ಉಚಿತ ಹೊಲಿಗೆ ಯಂತ್ರ ತರಬೇತಿ ಕೊಡುವುದು, ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು, ಉತ್ತಮ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುತ್ತಾರೆ ಅಲ್ಲದೆ 15 ರಿಂದ 20 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವುದು, ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಉನ್ನತ ತಂತ್ರಜ್ಞಾನವನ್ನು ಬಳಸುವುದಾಗಿ ಹೇಳಿಕೊಂಡಿದ್ದು ಹೀಗಾಗಿ ಬಲ್ದೋಟಾ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಕಂಪನಿ ಸ್ಥಾಪಿಸುವುದರಿಂದ ಜನರ ಜೀವನಮಟ್ಟ ಸುಧಾರಿಸುವುದಲ್ಲದೆ ಒಳ್ಳೆಯ ಉದ್ಯೋಗ ಅವಕಾಶಗಳನ್ನು ಕೂಡ ಒದಗಿಸಿದಂತಾಗುತ್ತದೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹೊಂದುವ ಆಶಾಭಾವನೆ ವ್ಯಕ್ತವಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಫಕೀರ್ಪ ದೊಡ್ಡಮನಿ, ಯಮನಪ್ಪ ಮೇಣದಾಳ, ಶಿವಪ್ಪ ಭಂಡಾರಿ, ಶಿವಪ್ಪ ತಾಳ ಕನಕಪುರ, ಹನುಮಂತ ಗಿಣಿಗೇರಿ, ಹನುಮಂತಪ್ಪ ಕಡೆಮನಿ, ಪ್ರಕಾಶ್ ಹುಚ್ಚಮ್ಮನವರ್ ಉಪಸ್ಥಿತರಿದ್ದರು.