ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ಎನ್,ಎಸ್,ಎಸ್,ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 09: ಇಲ್ಲಿಯ ಪೀಪಲ್ ಟ್ರೀ ಬಿಸಿಎ.ಬಿಬಿಎ  ಮತ್ತು ಬಿಕಾಂ  ಮಹಾವಿದ್ಯಾಲಯಗಳ  ಎನ್.ಎಸ್.ಎಸ್.ಘಟಕದ ವತಿಯಿಂದ ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮವನ್ನು ದತ್ತು ಪಡೆದು ಏಳು ದಿನಗಳ ವಾಷರ್ಿಕ ವಿಶೇಷ ಸ್ವಚ್ಛತಾ  ಶೀಬಿರ ಕಾರ್ಯಕ್ರಮವನ್ನು ಜನೇವರಿ 8  ಮಂಗಳವಾರದಿಂದ ಪ್ರಾರಂಭಿಸಲಾಯಿತು.

ಮಂಗಳವಾರದಂದು ನಡೆದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ  ಪೀಪಲ್ಟ್ರಿ ಎಜ್ಯುಕೇಶನ  ಸೋಸೈಟಿಯ ಅಧ್ಯಕ್ಷ ಜಗದೀಶ ಸವದತ್ತಿ, ಬಿ.ಕೆ. ಕಂಗ್ರಾಳಿ ಗ್ರಾಮ ಪಂಚಾಯತ ಅಧ್ಯಕ್ಷ ದತ್ತಾ ಪಾಟೀಲ, ಉಪಾಧ್ಯಕ್ಷೆ ಶ್ರೀಮತಿ ಕೌಸರಜಹಾನ ಸಯ್ಯದ, ಪಿಡಿಓಶ್ರೀಮತಿ ಕಲ್ಯಾಣಿ ಚೌಗುಲೆ ,ಕಲ್ಲಪ್ಪ ಮಾಳನ್ನವರ, ಆರಜೂ ಮುಲ್ಲಾ ಎಸ್.ಎಸ್.ಎಸ್.ಘಟಕದ ಸಂಯೋಜಕ ಪ್ರೊ. ವಿಶ್ವನಾಥ ಪೂಜಾರಿ  ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ ಕನ್ನಡ ಶಾಲೆಯ ವಿದ್ಯಾಥರ್ಿಗಳಿಂದ ಪ್ರಾರ್ಥನೆ ನಡೆಯಿತು. ಮಹಾತ್ಮಾ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ.ಅನಿಲ ಕನಗಣಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೀಯಾ ಶಹಾಪುರಕರ ಮತ್ತು ರಾವೀನಾ ಗೋಸಾವಿ ಕಾರ್ಯಕ್ರಮ ನಿರೂಪಿಸಿದರು.