ದೆಹಲಿಯಲ್ಲಿ ಬಿಜೆಪಿ ಜಯಭೇರಿ: ಬ್ಯಾಡಗಿಯಲ್ಲಿ ಸಂಭ್ರಮಾಚರಣೆ
ಬ್ಯಾಡಗಿ 10: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗೆದ್ದುಗೆ ಏರಿದೆ. ಈ ಹಿನ್ನೆಲೆಯಲ್ಲಿ ರವಿವಾರ ನಗರದಲ್ಲಿ ಹಳೇ ಪುರಸಭೆ ಎದುರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅದ್ದೂರಿ ಸಂಭ್ರಮಾಚರಣೆ ನಡೆಸಿದರು.ದೆಹಲಿಯಲ್ಲಿ ಬಿಜೆಪಿಗೆ ಗೆಲುವು ಆಗಿದ್ದಕ್ಕೆ ಪಟ್ಟಣದ ಬಿಜೆಪಿ ಹಳೇ ಪುರಸಭೆ ಎದುರು ಜಮಾಯಿಸಿದ ಕಮಲ ಪಡೆಯ ಕಾರ್ಯಕರ್ತರು ಹಾಗೂ ಮುಖಂಡರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರುಗಳ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಿದರು. ಬಳಿಕ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವುದರ ಮೂಲಕ ದೆಹಲಿ ಗೆಲುವನ್ನು ಸಂಭ್ರಮಿಸಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, 27 ವರ್ಷಗಳ ನಂತರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು, ಇದಕ್ಕೆ ಕಾರಣರಾದ ಪಕ್ಷದ ಕಾರ್ಯಕರ್ತರಿಂದ . ಪ್ರಧಾನಿ ಮೋದಿ ಅವರ ಕೊಡುಗೆಯನ್ನು ದೆಹಲಿ ಜನತೆ ಕೈಹಿಡಿದಿದ್ದಾರೆ. ದೆಹಲಿಯ ಸಮಸ್ತ ನಾಗರಿಕರು ಸಾಕಷ್ಟು ಕಷ್ಟದಿಂದ ಇದ್ದರು. ಆಪ್ ಸರ್ಕಾರ ಹಲವು ರೀತಿಯ ಭ್ರಷ್ಟಾಚಾರ ನಡೆಸಿ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಆಪ್ನ ಭ್ರಷ್ಟ ಸರ್ಕಾರವನ್ನು ದೆಹಲಿ ಜನತೆ ಕಿತ್ತೆಸೆದಿದ್ದಾರೆ. ದೆಹಲಿ ಮಾದರಿಯಲ್ಲೇ ಮುಂದೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಆಪ್ ಸರ್ಕಾರವನ್ನು ದೆಹಲಿಯ ಜನ ತಿರಸ್ಕರಿಸಿದ್ದಾರೆ. ನೀರೀಕ್ಷೆಯಂತೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ದೆಹಲಿಯ ಜನರು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ದೆಹಲಿ ಚುನಾವಣೆಯ ತಂತ್ರಗಾರಿಕೆಯನ್ನೇ ಮುಂದೆ ಎಲ್ಲಾ ರಾಜ್ಯಗಳ ಚುನಾವಣೆಗೂ ಮಾಡಲಾಗುವುದು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರೂ ರಾಜೀನಾಮೆ ನೀಡದೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ದವಾಗಿ ನಡೆದುಕೊಂಡರು ಆದಕಾರಣ ಆಪ್ ಪಕ್ಷವನ್ನು ಕಿತ್ತುಗೆದು ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ ಎಂದರು..ಬಿಜೆಪಿ ಮುಖಂಡರು.ಸಂಚಾಲಕ ಜಿತೇಂದ್ರ ಸುಣಗಾರ ಮಾತನಾಡಿ ಆಪ್ ಸರ್ಕಾರದ ಹಲವು ಸಚಿವರು ಹಗರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದರು, ಆಪ್ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತ ದೆಹಲಿ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ ರಾಜ್ಯದ ಮುಂದೆ ಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯ ಮುನ್ನುಡಿ ಬರೆದಂತಾಗಿದೆ ಕಾಂಗ್ರೆಸ್ ಪಕ್ಷವು ತಳಮಟ್ಟದಲ್ಲಿ ಕುಸಿದಿದೆ ಎದ್ದು ಕಾಣುತ್ತಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿನಯ್ ಕುಮಾರ್ ಹಿರೇಮಠ .ಸುರೇಶ ಉದ್ಯೋಗಣ್ಣನವರ. ಪರಶುರಾಮ . ಚಂದ್ರಣ್ಣ ಶೆಟ್ಟರ. ಸುರೇಶ ಯತ್ನಳ್ಳಿ. ವಿದ್ಯಾ ಭಟ್ .ಫಕೀರಮ್ಮ ಚಲವಾದಿ .ಭರತ್ ಬಳ್ಳಾರಿ. ಹಾಗೂ ಅನೇಕ ಪಕ್ಷದ ಕಾರ್ಯಕರ್ತರು ಇತರರಿದ್ದರು.