ಮನಸ್ತಾಪ, ಗೊಂದಲ ಬಗೆಹರಿಸಲು ಬಿಜೆಪಿ ಸಭೆ

ಮನಸ್ತಾಪ, ಗೊಂದಲ ಬಗೆಹರಿಸಲು ಬಿಜೆಪಿ ಸಭೆ

ಮುಂಡಗೋಡ: ತಾಲೂಕಿನ ಬಿಜೆಪಿ ಪಕ್ಷದಲ್ಲಿ ಹೊಸಬರು ಹಾಗೂ ಹಳಬರು ಎಂಬ ಮನಸ್ತಾಪ ಕಾರ್ಯಕರ್ತರಲ್ಲಿ ಉಂಟಾಗಿದ್ದರಿಂದ, ಬಿಜೆಪಿ ಕಾರ್ಯಕರ್ತರಲ್ಲಿ ಉಂಟಾಗಿರುವ ಮನಸ್ತಾಪ, ಗೊಂದಲವನ್ನು ಬಗೆಹರಿಸಲು ಅಭ್ಯಥರ್ಿ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ ಜರುಗಿತು.

ಶಿವರಾಮ ಹೆಬ್ಬಾರ್ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಬಂದವರು ಹಾಗೂ ಬಿಜೆಪಿ ಪಕ್ಷದಲ್ಲಿ ಇದ್ದವರು ಸೇರಿದಂತೆ ಯಾವ ಕಾರ್ಯಕರ್ತರಿಗೂಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ. ನನ್ನನ್ನು ನಂಬಿದವರಿಗೆ ಎಂದೂ ಅನ್ಯಾಯ ಮಾಡುವುದಿಲ್ಲ. ಹಳಬರು ಹಾಗೂ ಹೊಸಬರು ಎನ್ನುವುದಿಲ್ಲ. ಒಟ್ಟಿನಲ್ಲಿ ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿ, ಪಕ್ಷವನ್ನು ಗೆಲ್ಲಿಸಿ. ಮುಂದಿನ ದಿನಗಳಲ್ಲಿ ಈ ತಾಲೂಕನ್ನುಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ ಎಂದರು. ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಬೂತ ಮಟ್ಟದಲ್ಲಿ ಕಾರ್ಯಕರ್ತರು ಹೆಚ್ಚು ದುಡಿಯಬೇಕು. ನಮ್ಮ ಶಕ್ತಿ ಏನೆಂಬುದು ಬೂತ ಮಟ್ಟದಲ್ಲಿ ಬಿದ್ದಂತ ಮತಗಳಿಂದ ತಿಳಿಯುತ್ತದೆ.ಮುಖಂಡರ ಹಿಂದೆ ಓಡಾಡುವುದನ್ನು ಕಡಿಮೆ ಮಾಡಿ ಬೂತ ಮಟ್ಟದಲ್ಲಿ ಕೆಲಸ ಮಾಡೋಣ ಎಂದರು. ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ, ಕಾರ್ಯಕರ್ತರು ಗೊಂದಲ ಸೃಷ್ಟಿಸಬಾರದು. ವಿರೋಧ ಪಕ್ಷದವರ ತಂತ್ರಕ್ಕೆ ಮೋಸ ಹೋಗಬಾರದು. ಪ್ರಚಾರಕ್ಕೆ ಗ್ರಾಮಕ್ಕೆ ಬಂದಾಗ ದೂರುಗಳನ್ನೂ ಹೇಳದೇ, ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ ಎನ್ನುವ ಮಾತನ್ನು ಮುಖಂಡರಿಗೆ ಹೇಳುವಂತಾಗಬೇಕು ಎಂದರು. ಮುಖಂಡ ಬಸವರಾಜ ಓಶೀಮಠ ಮಾತನಾಡಿ, ಪ್ರವಾಹದಂತೆ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ. ಸಣ್ಣಪುಟ್ಟ ತೊಂದರೆ ಆಗಿದೆ. ಎಲ್ಲವನ್ನೂ ಬಗೆಹರಿಸಿಕೊಂಡು ಹೋಗುವ ಸಾಮಥ್ರ್ಯ ಮುಖಂಡರಿಗಿದೆ. ಬಿಜೆಪಿ ಅಭ್ಯಥರ್ಿ ಶಿವರಾಮ ಹೆಬ್ಬಾರ್ ಅವರನ್ನು ಮುಂದಿನ ದಿನಗಳಲ್ಲಿ ಸಚಿವರನ್ನಾಗಿ ಮಾಡೋಣ ಎಂದರು. ಬನವಾಸಿ ಜಿ.ಪಂ.ಸದಸ್ಯೆ ಉಷಾ ಹೆಗಡೆ ಮಾತನಾಡಿದರು.