ಬೆಂಗಳೂರು 23: ಬಿಜೆಪಿಯಿಂದ ಸಂವಿಧಾನಕ್ಕೆ ಕಂಟಕ ಎದುರಾಗಿದೆ, ಅತೃಪ್ತರ ಶಾಸಕರನ್ನು ಮುಂಬೈ ಹೊಟೇಲ್ ನಲ್ಲಿ ಕೂಡಿ ಹಾಕಲಾಗಿದೆ, ಅವರು ನಮಗೆ ಬಹಳ ತೊಂದರೆ ಕೊಟ್ಟಿದ್ದಾರೆ ಅವರು ನಿಮಗೆ ಸಮಸ್ಯೆ ಮಾಡುವುದಿಲ್ಲ ಎಂಬ ಖಾತರಿ ಏನು ಎಂದು ಸಚಿವ ಯು.ಟಿ.ಖಾದರ್ ಪ್ರಶ್ನೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚಚರ್ೆಯಲ್ಲಿ ಮಾತನಾಡಿದ ಅವರು, ಅತೃಪ್ತ ಶಾಸಕರ ರಾಜೀನಾಮೆಗೆ ಬಿಜೆಪಿಯೇ ನೇರ ಕಾರಣ ಎಂದು ದೂರಿದರು. ಅಧಿಕಾರದ ದಾಹದಿಂದ ಇಂತಹ ಪರಿಸ್ಥಿತಿ ನಿರ್ಮಾ ಣವಾಗಿದೆ, ರಾಜೀನಾಮೆ ಕೊಟ್ಟವರು ಕ್ಷೇತ್ರದ ಜನರ ಮಧ್ಯೆ ಇರಬೇಕು, ಅದನ್ನು ಬಿಟ್ಟು ಬಾಂಬೆಯಲ್ಲಿ ಕುಳಿತಿರುವುದು ಯಾಕೆ ? ಎಂದು ಅವರು ಪ್ರಶ್ನಿಸಿದರು. ರಾಜೀನಾಮೆ ಕೊಟ್ಟವರ ಜೊತೆ ಬಿಜೆಪಿ ನಾಯಕರು ಸಭೆ ಮಾಡುತ್ತಾರೆ, ಆದರೂ ಅವರು ಸುಪ್ರೀಂಗೆ ಹೋಗಿದ್ದು ಏಕೆ ? ಜನ ಆರಿಸಿ ಕಳಿಸಿರುವುದು ತಮ್ಮ ಕೆಲಸ ಮಾಡಲಿ ಎಂದು, ಆದರೆ ಅಧಿಕಾರ, ಹಣದ ಆಸೆಗೆ ಅವರು ಹೀಗೆ ಮಾಡಿದ್ದು ಸರಿಯೇ ? ಎಂದು ಅತೃಪ್ತರ ಶಾಸಕರ ನಡೆಯನ್ನು ಅವರು ತರಾಟೆಗೆ ತೆಗೆದುಕೊಂಡರು.
ಬಿಎಸ್ವೈ ಆಡಿಯೋ ಟೇಪ್ ಪ್ರಸ್ತಾಪ ಮತ್ತೆ ಸದನದಲ್ಲಿ ಪ್ರಸ್ತಾಪಿಸಿದ ಸಚಿವ ಖಾದರ್, ಅತಿಥಿ ಗೃಹದಲ್ಲಿ ಕುಳಿತು ನಮ್ಮ ಪಕ್ಷದ ಶಾಸಕರಿಗೆ ಅಮಿಷ ಒಡ್ಡಿದ್ದು ಸುಳ್ಳೇ? ಆಗ ಯಾರು, ಯಾರ ಜೊತೆ ಮಾತನಾಡಿದರು ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಕುಟುಕಿದರು. ವಿಧಾನಸಭೆಯಲ್ಲಿ ನೋಟ್ ಬ್ಯಾನ್ ವಿಚಾರ ಪ್ರಸ್ತಾಪ ಮಾಡಿದ ಖಾದರ್, ನೋಟ್ ಬ್ಯಾನ್ ನಿಂದ ದೇಶದ ಆಥರ್ಿಕತೆಗೆ ಹೊಡೆತ ಬಿದ್ದಿದೆ. ದೇಶದ ಇಡೀ ಆರ್ಥಿ ಕ ವ್ಯವಸ್ಥೆಯೇ ಬುಡಮೇಲಾಗಿದೆ, ಉದ್ಯೋಗದ ಮೇಲೆ ಹೊಡೆತ ಬಿದ್ದಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.