ನವದೆಹಲಿ, ನವೆಂಬರ್ 25- 'ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ' ಎಂಬ ಕಾಂಗ್ರೆಸ್ ಆರೋಪ, ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ.
ಕಾಂಗ್ರೆಸ್ ನಡವಳಿಕೆ ಖಂಡನೀಯ ಮತ್ತು ಶಿವಸೇನೆಯ ನೆರವಿನಿಂದ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಬೇರೆಯವರಿಗೆ ಉಪದೇಶ ಮಾಡುವ ನೈತಿಕತೆ ಇಲ್ಲ ಕಲಾಪದ ಬಳಿಕ ಕೇಂದ್ರ ಸಚಿವ ರವಿಶಂಕರ್ ಸುದ್ದಿಗಾರರಿಗೆ ತಿಳಿಸಿದರು.
ಮಾರ್ಶಲ್‌ಗಳೊಂದಿಗೆ ಅವರು ನಡೆದುಕೊಂಡ ವರ್ತನೆ, ಬಗ್ಗೆ ಯೂ ಅವರು ಅಸಮಾಧಾನ ಹೊರಹಾಕಿದರು.
ಲೋಕಸಭೆ ಚರ್ಚೆ, ಚರ್ಚೆ ಮತ್ತು ಪ್ರಶ್ನಿಸುವ ಸ್ಥಳವಾಗಿದೆಯೇ ಹೊರತು ಅಶಿಸ್ತಿನ ಕೇಂದ್ರವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅವರು ಗುಡುಗಿದರು.
ಕಾಂಗ್ರೆಸ್ ಸಂಸದರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಪೀಕರ್ ಅವರ ತೀರ್ಮಾನಕ್ಕೆ ಬಿಟ್ಟಿದ್ದು ಇದರಲ್ಲಿ ಸರಕಾರ ತಲೆ ಹಾಕುವುದಿಲ್ಲ ಎಂದು ಹೇಳಿದರು.
ಸಂಸತ್ತಿನಲ್ಲಿ ಲೋಕಸಭೆಯ ಪಾವಿತ್ರ್ಯತೆ, ಶ್ರೇಷ್ಠ ಸಂಪ್ರದಾಯ ಪುನಃಸ್ಥಾಪಿಸಲು ಎಲ್ಲಾ ರಾಜಕೀಯ ಪಕ್ಷಗಳು ಜಂಟಿಯಾಗಿ ಸಹಕಾರ ನೀಡಬೇಕು ಎಂದು ನಾವು ಬಯಸುತ್ತೇವೆ ಎಂದು ಪ್ರಸಾದ್ ಹೇಳಿದರು.
ನಾವು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ್ದೇವೆ ಎಂದು ಅವರು ದೂರುತ್ತಿದ್ದಾರೆ . ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಸರ್ಕಾರ ರಚಿಸುವ ಅಧಿಕಾರ ಬಿಜೆಪಿ-ಶಿವಸೇನೆಗೆ ಸಿಕ್ಕಿತ್ತು ಆದರೆ ಅದನ್ನು ಮಾಡದೆ . ಶಿವಸೇನೆ ಸಹಾಯದಿಂದ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕೊಲ್ಲುಲು ಹೊರಟಿದೆ ಎಂದು ಕಿಡಿ ಕಾರಿದರು. ''
ಅವಕಾಶವಾದಿಗಾಗಿ ಶಿವಸೇನೆ ಬಿಜೆಪಿಯೊಂದಿಗಿನ ತಮ್ಮ 30 ವರ್ಷಗಳ ಮೈತ್ರಿಯನ್ನು ದೂರ ಮಾಡಿಕೊಂಡಿದೆ ರಾಜ್ಯದಲ್ಲಿ ಬಿಜೆಪಿಯ ಗೆಲುವು ನೈತಿಕ ಮತ್ತು ರಾಜಕೀಯ ವಿಜಯವಾಗಿದೆ, ಇದನ್ನು ಕಾಂಗ್ರೆಸ್ ಅಪಹರಣ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
'' ನಿಮಗೆ ಧೈರ್ಯವಿದ್ದರೆ, ಚುನಾವಣೆಯಲ್ಲಿ ನಮ್ಮನ್ನು ಸೋಲಿಸಿ. ಜನಾದೇಶವನ್ನು ಮಾತ್ರ ಕದಿಯಬೇಡಿ, ಅಣಿಕಿಸಬೇಡಿ ಎಂದೂ ಪ್ರಸಾದ್ ತರಾಟೆಗೆ ತೆಗೆದುಕೊಂಡರು.
ಮಹಾರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಸದಸ್ಯರ ಕೋಲಾಹಲದ ನಡುವೆ ಲೋಕಸಭೆಯನ್ನು ಸೋಮವಾರ ಎರಡು ಬಾರಿ ಮುಂದೂಡಲಾಯಿತು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಬಗ್ಗೆ ಎಚ್ಚರಿಕೆ ನೀಡಿದರೂ , ಸದಸ್ಯರು ಬಾವಿಯಲ್ಲಿ ನಿಂತು '' ಪ್ರಜಾಪ್ರಭುತ್ವದ ಹತ್ಯೆಯನ್ನು ನಿಲ್ಲಿಸಿ '' ಎಂದು ಬೃಹತ್ ಫಲಕವನ್ನು ಹಿಡಿದು ಪ್ರತಿಭಟನೆ ಮಾಡಿದ್ದರಿಂದ ಕಲಾಪವನ್ನೂ ಮುಂದೂಡಲಾಯಿತು
ಸ್ಫೀಕರ್ ಬಿರ್ಲಾ ಅವರು ಬಿತ್ತಿಪತ್ರ ತೆಗೆದುಹಾಕುವಂತೆ ಹೇಳಿದರೂ ಅದನ್ನು ಮಾಡಲು ಅವರು ನಿರಾಕರಿಸಿದ್ದರಿಂದ, ಕಾಂಗ್ರೆಸ್ ಸದಸ್ಯರನ್ನು ಸದನದಿಂದ ತೆಗೆದುಹಾಕುವಂತೆ ಮಾರ್ಷಲ್ ಗಳಿಗೆ ಆದೇಶಿಸಿದರು.
ಇಬ್ಬರು ಕಾಂಗ್ರೆಸ್ ಸದಸ್ಯರು ಮಾರ್ಷಲ್‌ಗಳೊಂದಿಗೆ ಘರ್ಷಣೆ ನಡೆಸಿದರು ಕಾಂಗ್ರೆಸ್ ಸದಸ್ಯರ ಬೃಹತ್ ಪ್ರತಿಭಟನೆ ಮುಂದುವರೆದು ಸದನ ಗದ್ದಲದ ಗೂಡಾಯಿತು
ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರದ ಮೇಲೆ ದಾಳಿ ನಡೆಸಿ "ಪ್ರಜಾಪ್ರಭುತ್ವದ ಕೊಲೆ" ಎಂದು ಬಣ್ಣಿಸಿದರು.
ಲೋಕಸಭೆಯಲ್ಲಿ ಪ್ರಶ್ನೋತ್ತರ ಆರಂಭವಾದ ನಂತರ ಸ್ಪೀಕರ್ ಬಿರ್ಲಾ ಅವರು ಗಾಂಧಿಯವರನ್ನು ಪ್ರಶ್ನೆಗೆ ಕೇಳುವಂತೆ ಹೇಳಿದರು ' ನನಗೆ ಒಂದು ಪ್ರಶ್ನೆ ಇದೆ ಆದು ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಹತ್ಯೆ ನಡೆದಿರುವುದರಿಂದ ಇನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ' '
ಇದರ ನಂತರ ಕಾಂಗ್ರೆಸ್ ಸದಸ್ಯರು ಮತ್ಉ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಮಾತಿನ ನ ಚಕಮಕಿ ಜೊತೆಗೆ ಮಾರ್ಷಲ್ ಗಳ ಜೊತೆ ಕಾಂಗ್ರೆಸ್ ಸದಸ್ಯರ ಜಗಳದ ಕಾರಣ
ಕಾಂಗ್ರೆಸ್ ಸದಸ್ಯರನ್ನು ಹೊರಹಾಕಲಾಯಿತು ನಂತರ ಸದಸ್ಯರ ಭಾರೀ ಪ್ರತಿಭಟನೆಯಿಂದ ಸ್ಪೀಕರ್ ಕಲಾಪವನ್ನೂ ಮುಂದೂಡಿದರು.