ಕ್ಲಸ್ಟರ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ಲೋಕ ಚುನಾವಣೆಗೆ ನಡೆದಿದೆ ಭಾರೀ ತಯಾರಿ

ಬೆಳಗಾವಿ,ಡಿ.20- ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಬಿಜೆಪಿ, ಪಕ್ಷ ಸಂಘಟನೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಕನರ್ಾಟಕದಲ್ಲಿ ದೋಸ್ತಿಗಳಿಗೆ ಸಡ್ಡು ಹೊಡೆದು ಹೆಚ್ಚು ಸ್ಥಾನ ಗೆಲ್ಲಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚಚರ್ಿಸಲು ಬಿಜೆಪಿ ನಾಯಕರು ಇಂದು ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ ನಡೆಸಿದರು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪ್ರಮುಖರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಉಭಯ ಸದನಗಳ ಶಾಸಕರು, ವಿಧಾನಪರಿಷತ್  ಸದಸ್ಯರು ಭಾಗವಹಿಸಿದ್ದರು.

ರಾಜ್ಯದ ಮೂಲ್ನಾಲ್ಕು ಲೋಕಸಭೆ ಗಳನ್ನು ಸೇರಿಸಿ ಒಂದು ಶಕ್ತಿ ಕೇಂದ್ರ (ಕ್ಲಸ್ಟರ್) ರಚನೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕ್ಲಸ್ಟರ್ವಾರು ಆರೇಳು ಸಭೆಗಳನ್ನು ಆಯೋಜಿಸುವ ಚಿಂತನೆ ನಡೆದಿದ್ದು, ಆ ಸಭೆಗಳಲ್ಲಿ ಮೋದಿ ಮತ್ತು ಅಮಿತ್ ಶಾ ಭಾಗವಹಿಸಲಿದ್ದಾರೆ. ಪ್ರತಿ ಸಮಾವೇಶಕ್ಕೂ ಸುಮಾರು ಐದರಿಂದ ಎಂಟು ಲಕ್ಷ ಜನರನ್ನು ಸಂಘಟಿಸಿ ಎನ್ಡಿಎ ಒಕ್ಕೂಟದ ಶಕ್ತಿ ಪ್ರದರ್ಶನ ಮಾಡಲು ತಯಾರಿ ನಡೆದಿದೆ.ಜನವರಿಯಲ್ಲಿ ನಡೆಯುವ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದರೆ, ಫೆಬ್ರವರಿಯಿಂದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷದ ಮಹಿಳಾ, ರೈತ, ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಮೋಚರ್ಾಗಳು ಪ್ರತ್ಯೇಕವಾಗಿ ಸಮಾವೇಶಗಳನ್ನು ನಡೆಸಲಿವೆ.

ಸಂಘಟನಾತ್ಮಕ ದೃಷ್ಠಿಯಿಂದ ಪ್ರಮುಖ ಹೆಜ್ಜೆಯಿಟ್ಟಿರುವ ಬಿಜೆಪಿ ಸಾಮಾಜಿಕ ಜಾಲ ತಾಣವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿದೆ.ಕ್ಷೇತ್ರದ ಪ್ರತಿಯೊಬ್ಬರನ್ನು ತಲುಪಬೇಕು ಎಂಬ ಉದ್ದೇಶದಿಂದ ಎರಡು ಮೂರು ಭೂತ್ಗಳನ್ನು ಒಗ್ಗೂಡಿಸಿ ಒಂದು ಘಟಕ ರಚಿಸಲಾಗುತ್ತಿದೆ.ವಾಟ್ಸ್ ಅಪ್, ಫೆಸ್ಬುಕ್ ಸೇರಿ ಇತರ ಸಾಮಾಜಿಕ ಜಾಲ ತಾಣಗಳ ಮೂಲಕ ಬಿಜೆಪಿ ತನ್ನ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲಿದೆ.ಅಷ್ಟೇ ಅಲ್ಲದೆ ಪ್ರತಿಸ್ಪಧರ್ಿಗಳ ಅವಗುಣಗಳನ್ನು ಈ ಮೂಲಕವೇ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿ ಮನವೋಲಿಸಲು ನಿರ್ಧ ರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ಯನ್ನಾಗಿ ಮಾಡಬೇಕಾದರೆ 2019ರ ಲೋಕಸಭೆ ಚುನಾವಣೆ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದು. ಇತ್ತೀಚೆಗೆ ನಡೆದ ಮೂರು ಲೋಕಸಭೆ, ಎರಡು ವಿಧಾನಸಭೆ ಉಪಚುನಾವಣೆ ಹಾಗೂ ಪಂಚರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಆದರೂ ಧೃತಿಗೆಡದೆ ಲೋಕಸಭೆ ಚುನಾವಣೆಗೆ ಭರ್ಜರಿ ಉತ್ಸಾಹದಿಂದಲೇ ಕಾರ್ಯಕರ್ತರನ್ನು  ಅಣಿಗೊಳಿಸುವಂತೆ ಸಭೆಯ ನೇತೃತ್ವ ವಹಿಸಿದ್ದ ಯಸಿಯೂರಪ್ಪ ತಮ್ಮ ಶಾಸಕರಿಗೆ ಸೂಚಿಸಿದ್ದಾರೆ.

20 ಲೋಕಸಭಾ ಕ್ಷೇತ್ರಗಳ ಗುರಿ: 

ಬರಲಿರುವ ಲೋಕಸಭೆ ಚುನಾವಣೆ ನಮಗೆ ಮಾಡು ಇಲ್ಲವೆ ಮಡಿ ಎಂಬಂತಾಗಿದೆ.ರಾಜ್ಯದಲ್ಲಿ ದೋಸ್ತಿ ಸಕರ್ಾರವಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳದೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯಿಟ್ಟುಕೊಳ್ಳಬೇಕು. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.ಯಾರಿಗೇ ಟಿಕೆಟ್ ಕೊಟ್ಟರೂ ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕು.20 ಕ್ಷೇತ್ರಗಳನ್ನು ಗೆಲ್ಲುವ ಹೆಗ್ಗುರಿಯೊಂದಿಗೆ ಅಖಾಡಕ್ಕೆ ಸಜ್ಜಾಗಬೇಕೆಂದು ಸಭೆಯಲ್ಲಿ ಸೂಚಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ  ಯಡಿಯೂರಪ್ಪ, ಸಕರ್ಾರ ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ  ದೊಂಬರಾಟವಾಡುತ್ತಿದೆ. ಈವರೆಗೂ ಕೇವಲ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಸಾಲದ ಋಣಮುಕ್ತ ಪತ್ರ ನೀಡಲಾಗಿದೆ. ಹೆಚ್ಚೆಂದರೆ 800 ಕೋಟಿ ಸಾಲಮನ್ನಾ ಮಾಡಿರಬಹುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಸಂಪುಟದ ಸಚಿವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.ಸಕರ್ಾರ ಹೇಳುತ್ತಿರುವುದಕ್ಕೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸ ಕಾಣುತ್ತಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲಮನ್ನ ಮಾಡದೆ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

ಕುಮಾರಸ್ವಾಮಿ ತಮ್ಮ ಬಗ್ಗೆಮಾತನಾಡಿರುವ ಆಕ್ಷೇಪಾರ್ಹ ಪದಗಳ ಬಗ್ಗೆ ಕ್ಷಮೆ ಕೇಳಬೇಕು.ಇಲ್ಲದಿದ್ದರೆ ಮುಖ್ಯಮಂತ್ರಿಯ ಈ ವರ್ತನೆ ವಿರುದ್ಧ ಹೋರಾಟ ನಡೆಸುತ್ತೇವೆ. ಕುಂಭಕರ್ಣ ನಿದ್ದೆಯಲ್ಲಿರುವ ಸಕರ್ಾರವನ್ನು ಬಡಿದೆಬ್ಬಿಸುವ ಪ್ರಾಮಾಣಿಕ ಪ್ರಯತ್ನ ನನ್ನದು. ಸಕರ್ಾರ ಕೂಡಲೇ ರಾಷ್ಟ್ರೀಕೃತ ಬ್ಯಾಂಕ್ಗಳ  ರೈತರ  ಸಾಲಮನ್ನಾ ಮಾಡಬೇಕೆಂಬ ವಿಷಯದಲ್ಲಿ ಹೋರಾಟ ಮಾಡದೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.