ಅಪರಾಧಿಗಳಿಗೆ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕು : ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರೈತ ಮೋಚರ್ಾ ಪ್ರತಿಭಟನೆ

ಧಾರವಾಡ 03: ರೈತರು ಹಾಗೂ ಗೋ ರಕ್ಷಕರ ಕೊಲೆಗೆ ಯತ್ನಿಸಿದ ವ್ಯಕ್ತಿಗಳ ಮೇಲೆ ಹಾಗೂ ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ರೈತ ಮೋಚರ್ಾದವರು ಪ್ರತಿಭಟನೆ ನಡೆಸಿದರು.

ಕಳೆದ ದಿ.28 ರಾತ್ರಿ ಧಾರವಾಡ ನರೇಂದ್ರ ಬೈಪಾಸ್ ಟೋಲ್ಗೇಟ್ ಹತ್ತಿರ ಬೆಳಗಾವಿಯಿಂದ ಅನಧಿಕೃತವಾಗಿ ಸರಕಾರಕ್ಕೆ ಭರಿಸಬೇಕಾದ ಯಾವದೇ ತೆರಿಗೆ ತುಂಬದೆ ಕೋರ್ಟ ಆದೇಶವಿದೆ ಎಂದು ಸುಳ್ಳು ಹೇಳುತ್ತ ಬೃಹದಾಕಾರದ ನಾಲ್ಕು ಕಂಟೇನರ್ಗಳಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುವ ಸಂದರ್ಭದಲ್ಲಿ ಖಚಿತ ಮಾಹಿತಿಯ ಆಧಾರದ ಮೇಲೆ ಗೋ ರಕ್ಷಕರು ಮತ್ತು ಸುತ್ತಮುತ್ತಲಿನ ರೈತರು ತಡೆದಾಗ ಆ ಕಂಟೇನರ್ಗಳನ್ನು 6-8 ವಾಹನಗಳಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಹಿಂಬಾಲಿಸುತ್ತಿದ್ದ 25-30 ಜನ ಒಮ್ಮೆಲೆ ಮಾರಣಾಂತಿಕ ಹಲ್ಲೆ ಮಾಡಿ ರೈತರು ಹಾಗೂ ಹಿಂದೂ ಕಾರ್ಯಕರ್ತರ ಕೊಲೆಗೆ ಪ್ರಯತ್ನಿಸಿದ್ದಾರೆ. ಅದರ ಪರಿಣಾಮ ಇಬ್ಬರು ಕಾರ್ಯಕರ್ತರು ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೋಚರ್ಾ ಹೇಳಿದೆ.

 ಐದು-ಆರು ಕಾರುಗಳಲ್ಲಿ ಹಾಗೂ 25-30 ಜನರಲ್ಲಿ ಕೇವಲ ಒಂದು ಕಾರು, ಶಸ್ತ್ರಗಳು ಹಾಗೂ ಆರು ಜನರನ್ನು ಮಾತ್ರ ಬಂಧಿಸಿದ್ದು,  ಪೋಲಿಸ್ ಅಧಿಕಾರಿಗಳಿಗೆ ಎಲ್ಲ ಮಾಹಿತಿ ನೀಡಿದ್ದರೂ ಉಳಿದವರನ್ನು ಹಿಡಿಯಲು ಇನ್ನೂವರೆಗೆ ಯಾವದೇ ಪ್ರಯತ್ನಗಳು ಆಗದೇ ಇರುವುದು ಆ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದು ರೈತ ಮೋಚರ್ಾ ಆರೋಪಿಸಿದೆ.

ಈಗಾಗಲೇ ಬಂಧಿತರಾಗಿರುವ ಹಾಗೂ ತಪ್ಪಿಸಿಕೊಂಡಿರುವ ವ್ಯಕ್ತಿಗಳು ಉದರ್ು ಮಿಶ್ರಿತ ಹಿಂದಿ ಭಾಷಿಕರಾಗಿದ್ದಾರೆಂದು ತಿಳಿದಿದ್ದು ಅವರೆಲ್ಲರೂ ಬಾಂಗ್ಲಾ ಮೂಲದವರು ಅಥವಾ ರೋಹಿಂಗ್ಯಾ ನುಸುಳು ಖೋರಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಹಾಡು ಹಗಲೇ ಅಕ್ರಮ ಗೋಮಾಂಸ ಸಾಗಾಟ, ಆಕ್ರಮ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಸಿನಿಮೀಯ ರೀತಿಯಲ್ಲಿ ಧಾಳಿ ಮಾಡಿದ್ದನ್ನು ನೋಡಿದರೆ ಇದರ ಹಿಂದೆ ದೊಡ್ಡ ಮಾಫಿಯಾ ಇರುವದರಲ್ಲಿ ಸಂಶಯವೇ ಇಲ್ಲ. ಇದರ ಬಗ್ಗೆ ಉಚ್ಚ ಮಟ್ಟದಲ್ಲಿ ಸೂಕ್ತ ತನಿಖೆೆ ಮಾಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.

ಧಾರವಾಡ ಗ್ರಾಮಾಂತರ ಪೋಲಿಸ್ ಠಾಣೆದವರು ಬಂಧಿಸಿರುವ ವ್ಯಕ್ತಿಗಳ ಮೇಲೆ ಶಸ್ತ್ರಸಜ್ಜಿತರಾಗಿ ದಾಳಿ ಮಾಡಿದಾಗಲೂ ಕೊಲೆ ಪ್ರಯತ್ನದ ಕಲಂಗಳನ್ನು ಸೇರಿಸಿರುವದಿಲ್ಲ.  ಅವುಗಳನ್ನು ತಕ್ಷಣ ಸದರೀ ಪ್ರಕರಣದಲ್ಲಿ ಸೇರಿಸಿ, ತಲೆ ಮರೆಸಿಕೊಂಡಿರುವ ವ್ಯಕ್ತಿಗಳನ್ನು ಬಂದಿಸಬೇಕು ಹಾಗೂ ಅವರ ಮೇಲೆ ಕೊಲೆ ಪ್ರಯತ್ನದ ಕೇಸು ದಾಖಲಿಸಬೇಕೆಂದು ಆಗ್ರಹಿಸಲಾಗಿದೆ.

ತಪ್ಪು ಮಾಡಿದವರನ್ನು ಬಿಟ್ಟು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅಕ್ರಮ ಗೋಮಾಂಸ ಸಾಗಾಟವನ್ನು ಪೋಲೀಸ್ ಇಲಾಖೆಯ ಗಮನಕ್ಕೆ ತಂದು, ತಡೆಯಲು ಪ್ರಯತ್ನಿಸಿದ ಕಾರ್ಯಕರ್ತರಿಗೆ ಹಾಗೂ ಆ ಭಾಗದ ರೈತರಿಗೆ ಯಾವದೇ ಪ್ರಭಾವ ಮತ್ತು ಒತ್ತಡಕ್ಕೆ ಒಳಗಾಗದೆ ಕಿರುಕುಳ ನೀಡಬಾರದೆಂದು ಮತ್ತು ಕಾರ್ಯಕರ್ತರು ಹಾಗೂ ರೈತರ ಮೇಲೆ ಈಗಾಗಲೇ ದಾಖಲಿಸಲಾಗಿರುವ ಸುಳ್ಳು ಪ್ರಕರಣಗಳನ್ನು ಕೈ ಬಿಡಬೇಕು ಹಾಗೂ ಇದರ ಹಿಂದೆ ರಾಜಕೀಯ ಮುಖಂಡರುಗಳ ಕೈವಾಡವಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಲಾಗಿದೆ.

  ಪ್ರತಿಭಟನೆ ನೇತೃತ್ವವನ್ನು ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ರೈತ ಮೋಚರ್ಾ ಅಧ್ಯಕ್ಷರಾದ ಅರವಿಂದ ಏಗನಗೌಡರ, ಸುನೀಲ ಮೋರೆ,ಪ್ರಕಾಶ ಶೃಂಗೇರಿ, ಈಶ್ವರಪ್ಪ ಮಾಳನ್ನವರ, ಮಹಾದೇವಪ್ಪ ಯಡವನ್ನವರ, ಈರಣ್ಣ ಹಪ್ಪಳಿ, ಈಶ್ವರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಡಿ.ಎಫ್.ಅಜಗೊಂಡನವರ, ಮಹಾತೇಶ ಲಿಂಬನ್ನದೇವರಮಠ, ಸುರೇಶ ಬೇಂದ್ರೆ, ಮಂಜು ನಡಟ್ಟಿ, ರವಿ ಹೊರಗಿನಮಠ, ಶ್ರೀನಿವಾಸ ಕೋಟ್ಯಾನ. ಮಾರುತಿ ಒಡ್ಡರ, ನಾಗರಾಜ ದೇವರಾಜ, ಸತೀಶ ತೊರಗಲ್, ಪ್ರಮೋದ ಕಾರಕೊನ, ಬಸವರಾಜ ಬಾಳಗಿ, ಹನಮಂತಪ್ಪ ಕಾಳೆ ಮುಂತಾದವರು ವಹಿಸಿದ್ದರು.