ಬಿ ಡಿ ಪಾಟೀಲ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

BD Patil Birthday: Distribution of fruits to patients

ಬಿ ಡಿ ಪಾಟೀಲ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂಡಿ 10: ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ 53ನೇಯ ಜನ್ಮದಿನಾಚರಣೆ ಅಂಗವಾಗಿ ನೂರಾರು ಜೆಡಿಎಸ್ ಕಾರ್ಯಕರ್ತರು ಇಂದು ಸರ್ಕಾರಿ ಆಸ್ಪತ್ರೆಗೆ ಹೋಗಿ ಬಡರೋಗಿಗಳಿಗೆ ಹಣ್ಣು ಹಂಪಲು ಹಂಚಿ ಬಿ ಡಿ ಪಾಟೀಲರಿಗೆ ಆರೋಗ್ಯ ,ಆಯ್ಯಷ ಹಾಗೂ ಕಂಡ ಕನಸು ನನಸಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು. 

ಜೆಡಿಎಸ್ ಮುಖಂಡರಾದ ಅಯೂಬ್ ನಾಟೀಕರ,ಡಾ ರಮೇಶ ರಾಠೋಡ ಮಾತನಾಡುತ್ತಾ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾಳಜಿ ವಹಿಸುವ ಜನನಾಯಕ ಹಾಗೂ ವಿಶೇಷವಾಗಿ ಹುಟ್ಟು ಹೋರಾಟಗಾರನಾದ ಬಿ ಡಿ ಪಾಟೀಲರಿಗೆ ಭವಿಷ್ಯದ ದಿನಮಾನದಲ್ಲಿ ಒಳ್ಳೆಯ ದಿನಗಳು ಬರಲಿ, ದೀನ ದಲಿತರ, ದಮನೀತರ ಸೇವೆಮಾಡುವ ಅವಕಾಶ ಆ ಭಗವಂತ ನೀಡಲೆಂದು ಶುಭಹಾರೈಸಿದರು.  

ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ, ಗ್ರಾಂ ಪಂಚಾಯಿತಿ ಉಪಾಧ್ಯಕ್ಷೆ ಬಾಬು ಮೇತ್ರಿ, ದುಂಡು ಬಿರಾದಾರ, ವಿಠಲ ಹಳ್ಳಿ, ಸುದರ್ಶನ ಉಪಾಧ್ಯ,ನಿಯಾಝ್ ಅಗರಖೇಡ, ಕುಮಾರ್ ಸುರ್ಗಿಹಳ್ಳಿ, ನಾರಾಯಣ, ವಾಲಿಕಾರ, ಭೀರು, ಪೂಜಾರಿ, ಬಸು, ಪೂಜಾರಿ, ಅನೀಲ ಕುಲಕರ್ಣಿ, ಮಳಗು ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.