ಮುಂಬೈ 28 :ಮೊನ್ನೆ ಮುಕ್ತಾಯವಾದ ಮಹಿಳಾ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ತಮಗೆ ಆಡಿಸದಿರುವ ಕುರಿತು ತಂಡದ ಅನುಭವಿ ಆಟಗಾತರ್ಿ ಮಿಥಾಲಿ ರಾಜ್ ಕೋಚ್ ರಮೇಶ್ ಪವರ್ ವಿರುದ್ಧ ಬಿಸಿಸಿಐಗೆ ಪತ್ರ ಬರೆದಿದ್ದರು. ಈ ಸುದ್ದಿ ತಣ್ಣಗಾಗುತ್ತಿರುವಾಗಲೇ ಮತ್ತೊಂದು ಸ್ಫೋಟಕ ಸುದ್ದಿ ಹೊರ ಬಿದ್ದಿದೆ.
ಈ ಕುರಿತು ಕ್ರಿಕೆಟ್ ವಲಯದಲ್ಲಿ ಮಿಥಾಲಿ ಪ್ರಕರಣ ಕುರಿತು ಭಾರೀ ಚಚರ್ೆಗಲು ನಡೆಯುತ್ತಿವೆ. ಇದರ ನಡುವೆ ಪುರುಷರ ತಂಡದ ಆಯ್ಕೆ ವಿಷಯದಲ್ಲಿ ಬಿಸಿಸಿಐ ಅಧಿಕಾರಿಗಳು ತಲೆ ಹಾಕುತ್ತಿದ್ದು ಆಯ್ಕೆ ಸಮಿತಿ ಮುಂದೆ ತಮ್ಮ ಬೇಡಿಕೆಗಳನ್ನ ಮುಂದಿಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ವರದಿ ಹೇಳಿರುವಂತೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬ ಏಷ್ಯಾಕಪ್ ಆಡುವ ವೇಳೆ ಆಯ್ಕೆ ವಿಷಯದಲ್ಲಿ ತಲೆ ಹಾಕಿದಲ್ಲದೇ ಅಂದು ಕಾರ್ಯ ಹಂಗಾಮಿ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ರೋಹಿತ್ ಶಮರ್ಾ ಬಳಿಯೂ ಮಾತನಾಡಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.