ಬೆಂಗಳೂರು: ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ಕಾಲದಿಂದ ನಗರದಲ್ಲಿ ವಾಸಿಸುತ್ತಿದ್ದ 107 ಅಪ್ರಿಕನ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು
ಮಾದಕ ವಸ್ತು ಮಾರಾಟ
ಮತ್ತಿತರ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅವರೆಲ್ಲರನ್ನೂ ಗಡಿ ಪಾರು ಮಾಡಲು
ಪೊಲೀಸರು ಶಿಫಾರಸ್ಸು ಮಾಡಿದ್ದಾರೆ.
ಬೆಂಗಳೂರನ್ನು ಉಡ್ತಾ
ಪಂಜಾಬ್ ಆಗಲು ಬಿಡುವುದಿಲ್ಲ, ಬೇರೆ ಕಡೆಯಿಂದ ಬಂದಂತಹವರು ಮಾದಕ ವಸ್ತುಗಳ ಮಾರಾಟದಲ್ಲಿ ನಿರತರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇತ್ತೀಚಿಗೆ ಹೇಳಿಕೆ ನೀಡಿದ
ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಮಾಹಿತಿ ಪಡೆದು ಆರು ವಿಶೇಷ ತಂಡಗಳನ್ನು ರಚಿಸಿ ವೈಲ್ಡ್ ಫೀಲ್ಡ್
ನ ಪೂರ್ವ, ಪಶ್ಚಿಮ,
ನೈರುತ್ಯ, ವಿಭಾಗದ ಮನೆಗಳ
ಮೇಲೆ ಕಾರ್ಯಾಚರಣೆ ನಡೆಸಲಾಯಿತು.ಈ ವೇಳೆಯಲ್ಲಿ ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ಕಾಲದಿಂದ ಅಪ್ರಿಕನ್ ವಿದ್ಯಾರ್ಥಿಗಳು ನಗರದಲ್ಲಿ ನೆಲೆಸಿರುವುದು ಕಂಡುಬಂದಿತ್ತು ಎಂದು ವೈಲ್ಡ್
ಪೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಅವರೆಲ್ಲರನ್ನೂ ವಶಕ್ಕೆ
ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬೆಳಿಗ್ಗೆ 6 ರಿಂದಲೂ 120ಕ್ಕೂ ಹೆಚ್ಚು
ಪೊಲೀಸ್ ಸಿಬ್ಬಂದಿಗಳು ಶೋಧ ಕಾರ್ಯಾಚಾರಣೆ ಆರಂಭಿಸುತ್ತಿದ್ದು, ಸಂಜೆಯವರೆಗೂ ನಡೆಯುತ್ತಿದೆ. ತಲಮರೆಸಿಕೊಂಡಿರುವವರ ಹುಡುಕಾಟವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ದಾಳಿ ವೇಳೆಯಲ್ಲಿ ಟಿ. ಸಿ. ಪಾಳ್ಯದಲ್ಲಿ ಪಾಸಿಸುತ್ತಿದ್ದ ಸ್ಟ್ಯಾನ್ಲಿ ಕಿಮಾ ಮನೆಯಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಆತನನ್ನು ಸಿಸಿಬಿ ಪೊಲೀಸರ
ವಶಕ್ಕೆ ಒಪ್ಪಿಸಲಾಗಿದೆ. ಮನೆ ಶೋಧಿಸಲು ಪೊಲೀಸರು ತೆರಳಿದಾಗ ಅವರ ಮೇಲೂ ಹಲ್ಲೆ ನಡೆಸಲಾಗಿದೆ.
ಅಪ್ರಿಕನ್ ಪ್ರಜೆಗಳಿಗೆ ಮನೆ ನೀಡುತ್ತಿದ್ದ ಮಾಲೀಕರು ಪೊಲೀಸರು ನೀಡುತ್ತಿದ್ದ ಮಾರ್ಗಸೂತ್ರಗಳನ್ನು ಅನಸರಿಸದೆ ಇರುವುದು ಕಂಡುಬಂದಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.