ಲೋಕದರ್ಶನ ವರದಿ
ಮಾಂಜರಿ 24: ಶರಣರು ಸಾಧು-ಸಂತರು ದಾರ್ಶನಿಕರು ಧರ್ಮದಿಂದಲೇ ನಡೆದುಕೊಂಡು ಬಂದಿದ್ದರಿಂದ ಅವರು ಇತಿಹಾಸದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ ಎಂದು ಪಂಡರಪುರದ ವಿಠ್ಠಲ ವಾಸ್ಕರ್ ಮಹಾರಾಜ್ ಹೇಳಿದರು.
ಇಂದು ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಶಂಕರ್ ಧನವಾಡೆ ಇವರ 89 ವರ್ಷದ ಅಭಿಷ್ಠ ಚಿಂತನ ಸಮಾರಂಭ ಹಾಗೂ ಶ್ರೀಕೃಷ್ಣ ಮಹಾರಾಜ್ ಭಕ್ತಿ ಭಾಷಣ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಈ ಸಮಾರಂಭಕ್ಕೆ ವಿಜಾಪುರ ಜ್ಞಾನಯೋಗಾಶ್ರಮದ ಪರಮ ಬಸವಲಿಂಗ ಮಹಾಸ್ವಾಮೀಜಿಗಳು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿಗಳು ಪರಮಾನಂದವಾಡಿ ಬ್ರಹ್ಮಾನಂದ ಸ್ವಾಮೀಜಿ ಮಂಗಸೂಳಿಯ ಮಲ್ಲಿಕಾಜರ್ುನ ಮಹಾಸ್ವಾಮಿಗಳು ಮಾಂಜರಿಯ ಬಾಬಾಸಾಹೇಬ್ ಬಿಸಿಲೆ ಮಹಾರಾಜರು ಮುಖ್ಯ ಅತಿಥಿಯಾಗಿ ಹಾಜರಿದ್ದರು.
ಈ ವೇಳೆ ವಿಜಾಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿಗಳು ಮಾತನಾಡುವಾಗ ಸಂಸ್ಕೃತಿ ಸಂಸ್ಕಾರಗಳು ಬಗ್ಗೆ ತುಂಬಾ ಅಪರ್ಿಸಿಕೊಂಡು ಮುನ್ನಡೆಯಬೇಕಾಗಿದೆ ಇಂದಿನ ವ್ಯವಸ್ಥೆಯಲ್ಲಿ ವಯಸ್ಸಾದ ಅಪ್ಪ-ಅಮ್ಮನನ್ನು ಹೊರಗೆ ಹಾಕುವುದು ಧರ್ಮವಲ್ಲ ಅವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಅವರುಗಳ ಸೇವೆಯನ್ನು ಮಾಡುವುದು ನಿಜವಾದ ಧರ್ಮ ಉಪಕಾರ ಮಾಡಿದವರಿಗೆ ಧನ್ಯವಾದಗಳನ್ನು ಹೇಳುವುದು ಸಂಸ್ಕೃತಿ ಧರ್ಮದಿಂದ ಯಾರು ಮುನ್ನಡೆಯುತ್ತಾರೆ ಅವರು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯವಾಗುತ್ತದೆ ಎಂದರು.
ಇಂಗಳಿ ಗ್ರಾಮದ ಶಂಕರ್ ಧನವಾಡೆ ಇವರಿಗೆ ಶ್ರೀಕೃಷ್ಣ ಮಹಾರಾಜ್ ಭಕ್ತಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ಸಮಾರಂಭಕ್ಕೆ ಚಿಕ್ಕೋಡಿ ಅಥಣಿ ರಾಯಬಾಗ ತಾಲೂಕಿನ ಹಲವಾರು ಗಣ್ಯರು ಹಾಜರಿದ್ದರು ಸುಭಾಷ್ ಸೇವಾಳೆ ಸ್ವಾಗತಿಸಿ ಸಂತೋಷ್ ಪವಾರ್ ನಿರೂಪಿಸಿ ವಂದಿಸಿದರು.