ಹುಕ್ಕೇರಿ 06: ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದ್ದು ತನ್ನದೆ ಆದ ಐತಿಹಾಸಿಕ, ಧಾಮರ್ಿಕ ಹಾಗೂ ಅಧ್ಯಾತ್ಮಿಕವಾಗಿ ಪ್ರಸಿದ್ಧವಾಗಿದ್ದು ಜಗತ್ತಿನಾದ್ಯಂತ ಕೋಟ್ಯಾಂತರ ಭಕ್ತರನ್ನು ಹೊಂದಿದೆ. ಸುಪ್ರೀಂ ಕೋರ್ಟ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವ ಆದೇಶ ಹೊರಡಿಸಿದ್ದನ್ನು ಖಂಡಿಸಿ ಶನಿವಾರದಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ತಹಶೀಲದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀರಾಮ ಸೇನೆ ಪ್ರಮುಖ ಶಿವರಾಜ ಅಂಬಾರಿ ಮಾತನಾಡಿ ದೇವಸ್ಥಾನಕ್ಕೆ ತಲೆ ತಲಾಂತರದಿಂದ ಹಲವಾರು ಧಾಮರ್ಿಕ, ಅಧ್ಯಾತ್ಮಿಕ, ಶಾಸ್ತ್ರಬದ್ಧ, ವೈಜ್ಞಾನಿಕ ಕಟ್ಟಳಗಳಿವೆ. ಇದೊಂದು ಸೂಕ್ಷ್ಮ ವಿಷಯವಾಗಿದ್ದು ಕೆಲವೊಂದು ಪಟ್ಟಬಧ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ, ಪ್ರಚಾರ ಹಾಗೂ ಭಾವನೆಗೆ ಘಾಸಿ ಮಾಡಲು ಕೇರಳ ಸರಕಾರದ ಪ್ರಾಯೋಜಕತ್ವದಲ್ಲಿ ಕೋಟ್ಯಾಂತರ ಹಿಂದುಗಳ ನಂಬಿಕೆ, ಭಕ್ತಿಯ ಮೇಲೆ ಮಮರ್ಾಘಾತ ನೀಡುತ್ತಿರುವದು ಅತ್ಯಂತ ನೋವಿನ ಸಂಗತಿಯಾಗಿದ್ದು ತಾವು ತಕ್ಷಣವೇ ಮದ್ಯ ಪ್ರವೇಶಿಸಿ ಹಿಂದುಗಳ ಭಾವನೆ ಗೌರವಿಸಲು ಆಗ್ರಹಿಸಿದರು.
ಸುಪ್ರೀಂ ಕೋರ್ಟ ತೀಪರ್ಿಗೆ ಸುಗ್ರೀವಾಜ್ಞೆ ತರಬೇಕು, ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಪೋಲಿಸ ಬಲ ಪ್ರಯೋಗಿಸಿ ಅಮಾಯಕರ ಮೇಲೆ ದಾಳಿ, ಹಲ್ಲೆ, ಕೇಸು ಹಾಕುತ್ತಿರುವ ಕಾನೂನ ಸುವ್ಯವಸ್ಥೆ ಬಿದ್ದು ಹೋಗಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು, ಅಲ್ಲಿರುವ ಪರಂಪರಾಗತ ವ್ಯವಸ್ಥೆ ಯಥಾವತ್ತಾಗಿ ಪಾಲನೆಯಾಗಬೇಕು ಇವು ಮನವಿಯಲ್ಲಿಯ ಪ್ರಮುಖ ಬೇಡಿಕೆಗಳಾಗಿವೆ
ಶ್ರೀರಾಮ ಸೇನೆ ಪ್ರಮುಖರಾಧ ಕಿರಣ ಶೆಟ್ಟಿ, ಶಿವರಾಜ ನಾಯಿಕ, ವಿವೇಕ ಪುರಾಣಿಕ, ಶಿವರಾಜ ಅಂಬಾರಿ, ಬಸವರಾಜ ಅಲಗರಾವುತ, ಸಂತೋಷ ಸುಣಗಾರ, ಶಿವರಾಜ ಪಾಟೀಲ, ಬಸಪ್ಪ ಖುಬಾನ್ನಗೋಳ ಗುರುಸ್ವಾಮಿಗಳಾದ ಮಾರುತಿ ಕಲ್ಲವಡ್ಡರ, ಮಾರುತಿ ಭಜಂತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.