ಅದ್ದೂರಿಯಾಗಿ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ

Ayyappa Swami Mahapuja was held in grandeur

ಅದ್ದೂರಿಯಾಗಿ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಯರಗಟ್ಟಿ 22: ಅಖಿಲ ಭಾರತ ಅಯ್ಯಪ್ಪ ಭಕ್ತವೃಂದ ಸಾಲಹಳ್ಳಿ ಇದರ 30ನೇ ವಾರ್ಷಿಕ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯುಗ್ರಾಮದ ಅಯ್ಯಪ್ಪಸ್ವಾಮಿ ಸನ್ನಿಧಾನದ ಆವರಣದಲ್ಲಿ ಕಾಂಚಿಪುರಂದ ತುಳಸಿ ಗುರುಸ್ವಾಮಿ ಅವರ ಪೌರೋಹಿತ್ಯದಲ್ಲಿ ಬಹು ವಿಜೃಂಭಣೆಯಿಂದ ಜರಗಿತು. 

ಸಂಜೆ 04.30 ಜ್ಯೋತಿ ಮೆರವಣಿಗೆ ನಂತರ ಸ್ವಾಮಿಯ ಅಷ್ಟೋತ್ತರ ವಿಧಿವಿಧಾನಗಳು ನಡೆದವು. ಬಳಿಕ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಗುರುಸ್ವಾಮಿ ಹಾಗೂ ಮಾಲಾ ದಾರಿಗಳಿಂದ ಮತ್ತು ನೆರೆದ ಭಕ್ತರಿಂದ ಭಜನೆ, ಶ್ಲೋಕ ಪಠಣ ನಡೆಯಿತು. ಪಡಿ ಪೂಜೆ ಮಾಡಿ, ಮಹಾ ಮಂಗಳಾರತಿ ಬೆಳಗಿದರು.ನಂತರ 18ನೇ ವರ್ಷ ಮಾಲೆದಾರಣೆ ಮಾಡಿದ ಗುರುಸ್ವಾಮಿಗಳನ್ನು ಸತ್ಕರಿಸಲಾಯಿತು. 

ಈ ವೇಳೆ ರುದ್ರಗೌಡ ಗುರುಸ್ವಾಮಿ, ಈರಣ್ಣಾ ಗುರುಸ್ವಾಮಿ, ಬಸವರಾಜ ಗುರುಸ್ವಾಮಿ, ಕಾಂತು ಗುರುಸ್ವಾಮಿ, ಅಶೋಕ ಗುರುಸ್ವಾಮಿ, ನಿಂಗನಗೌಡ ಗುರುಸ್ವಾಮಿ, ಮಹಾಂತೇಶ ಗುರುಸ್ವಾಮಿ, ಅಪ್ಪೇಶ ಗುರುಸ್ವಾಮಿ, ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಗುರುಸ್ವಾಮಿಗಳು, ಮಾಲಾ ದಾರಿಗಳು ಇದ್ದರು.