ಲೋಕದರ್ಶನ ವರದಿ
ಗದಗ 05: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಬಡವರು, ಮಧ್ಯಮವರ್ಗದವರು ಆರೋಗ್ಯದಿಂದಿರಬೇಕೆಂಬ ಮಹದಾಸೆಯಿಂದ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆಯ 4ನೇ ವಾರ್ಡ ಸದಸ್ಯ ಮಂಜುನಾಥ ಎಚ್. ಮುಳಗುಂದ ಮನವಿ ಮಾಡಿದರು.
ಬೆಟಗೇರಿಯ 3 ಹಾಗೂ 4ನೇ ವಾರ್ಡಗಳಲ್ಲಿ ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ ವಿತರಿಸಿ ಅವರು ಮಾತನಾಡಿದರು.
ಹೃದಯ ಚಿಕಿತ್ಸೆ, ಕ್ಯಾನ್ಸರ್, ಗರ್ಭಕೋಶದ ತೊಂದರೆ, ಕಿಡ್ನಿ ತೊಂದರೆ, ನರರೋಗ, ಸುಟ್ಟಗಾಯ, ಬ್ಲಡ್ ಕ್ಯಾನ್ಸರ್, ಯಲುಬಿನ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಬೆನ್ನುಹುರಿ ತೊಂದರೆ, ಮಂಡಿನೋವು, ಇನ್ನಿತರ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ಸರ್ವಜನಾಂಗದವರಿಗೂ 5 ಲಕ್ಷ ರೂ.ಗಳವರೆಗೆ ತಮ್ಮ ಮನೆಯ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಪಡೆಯಲು ಈ ಕಾರ್ಡನಿಂದ ಅವಕಾಶವಿದೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಬಡವರಿಗಾಗಿ ಈಗಾಗಲೇ ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯಾ, ಜನಧನ್, ಉಜ್ವಲ, ಸ್ವಚ್ಛ ಭಾರತ, ಗುಡಿಸಲುಮುಕ್ತ ಭಾರತ, ಯೋಜನೆಗಳೂ ಸೇರಿದಂತೆ ಸ್ವ ಉದ್ಯೋಗ ಕೈಗೊಳ್ಳಲು ಯುವಕರು, ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಕಷ್ಟು ಹಣಕಾಸಿನ ನೆರವನ್ನು ಕಲ್ಪಿಸಿದ್ದಾರೆ. ದೇಶದ ಬಡ ಜನರ ಪರವಾಗಿರುವ ಪ್ರಧಾನಿಗಳು, ದೇಶದ ಅನ್ನದಾತರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದರು.
ನಗರಸಭೆ ಮಾಜಿ ಸದಸ್ಯ ಯಲ್ಲಪ್ಪ ಕಾಂಬಳೇಕರ ಮಾತನಾಡಿ, ಗದಗ- ಬೆಟಗೇರಿಯಲ್ಲಿಯೇ ಮೊದಲು 4ನೇ ವಾರ್ಡನಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡಗಳನ್ನು ಮನೆಮನೆಗೆ ಭೇಟಿ ನೀಡಿ ವಿತರಿಸುತ್ತಿರುವ ನಗರಸಭೆ ಸದಸ್ಯ ಮಂಜುನಾಥ ಮುಳಗುಂದ ಅವರ ಸೇವಾ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುದೀಪ ಇನಾಮತಿ, ಬಸವರಾಜ ಬೆಂತೂರ, ಬಸವರಾಜ ಲಕ್ಕುಂಡಿ, ಶ್ರೀನಿವಾಸ ಧೂಳಾ, ಮಾಬೂಸಾಬ ಗಂಧದ ಶರೀಫ ಗಡಾದ ಗೋಪಾಲ ಕಾಮಾತರ್ಿ, ರಮೇಶ ಗೌಡರ, ರತ್ನವ್ವ ಅಜ್ಜಣ್ಣವರ, ಮಂಜುನಾಥ ಪಲ್ಲೇದ, ರಮೇಶ ಪಾನಗಂಟಿ, ಶಿವಪ್ಪ ಮ್ಯಾಗೇರಿ, ರವಿ ಅರಮನಿ, ಶರಣಪ್ಪ ಅರಮನಿ, ರಾಜು ಬೋಡರ್ೆ, ವಿಠ್ಠಲ ಕುಣಗೇರಿ, ಮಲ್ಲೇಸ ಕಣಕಿ, ರತ್ನವ್ವ ಹಕ್ಕಿಗೋಣಿ, ಅಕ್ಕಮ್ಮ ಪಟ್ಟಣಶೆಟ್ಟಿ, ವಿಜಯಲಕ್ಷ್ಮಿ ಅರಮನಿ, ಸಂಗಮ್ಮ ಹಿರೇಮಠ, ಪಾರವ್ವ ಪಟ್ಟಣಶೆಟ್ಟಿ, ಶೈಲಾ ಪಟ್ಟಣಶೆಟ್ಟಿ, ಗೀತಾ ಮ್ಯಾಗೇರಿ, ಪುಟ್ಟು ಪಲ್ಲೇದ, ದರ್ಶನ ಪಾನಗಂಟಿ, ಪ್ರಭಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.