ಆರೋಗ್ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು: ಮಹಾಂತೇಶ್ ದರ್ಗದ
ಕೊಪ್ಪಳ 07: ಜಿಲ್ಲೆಯ ದತ್ತು ಗ್ರಾಮ ಕಿನ್ನಾಳ ಗ್ರಾಮದ ಬಸವೇಶ್ವರ ಸರ್ಕಲ್ ಹತ್ತಿರ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳ, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕೊಪ್ಪಳ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳ ಗ್ರಾಮ ಪಂಚಾಯಿತಿ ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ ಹಾಗೂ ಆಯುಷ್ ಇಲಾಖೆ ಕಿನ್ನಾಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ 7.ರಂದು ಜರುಗಿತು.
ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಹಿರಿಯ ಶ್ರೇಣಿ ನ್ಯಾಯಧೀಶರಾದ ಮಹಾಂತೇಶ್ ಎಸ್ ದರಗದ ಅವರು ಉದ್ಘಾಟಿಸಿ ಮಾತನಾಡಿ ಜನರು ಆರೋಗ್ಯವಂತರಾಗಿರಬೇಕು ಶಿಕ್ಷಣ ಪಡೆದಿರಬೇಕು ಆರೋಗ್ಯದಲ್ಲಿ ಏನಾದರೂ ಏರುಪೇರು ಆದರೆ ಮನುಷ್ಯನಿಗೆ ಜೀವನ ಕಷ್ಟ ಅದಕ್ಕೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ನ್ಯಾಯಾಧೀಶರಾದ ಮಹಾಂತೇಶ್ ದರ್ಗದ ರವರು ಅಭಿಪ್ರಾಯ ಪಟ್ಟರು, ಗ್ರಾಮ ಪಂಚಾಯತ ಅಧ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳ್, ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾಽಽ ಮಾಂತೇಶ್ ಎಮ್ ಸಾಲಿಮಠ ಪ್ರಾಚಾರ್ಯರು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕೊಪ್ಪಳ ಡಾಽಽಗವಿಸಿದ್ದನಗೌಡ ಜಿ ಪಾಟೀಲ್, ಪ್ರಾಧ್ಯಾಪಕರು ಆಸ್ಪತ್ರೆ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕೊಪ್ಪಳ, ಡಾಽಽ ಇರ್ಫಾನ ಅಂಜುಮ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ, ಡಾಽಽಶರಣಪ್ಪ ಕೆ.ಹೈದ್ರಿ ಆಯುಷ್ಯ ವೈದ್ಯಾಧಿಕಾರಿಗಳು ಕಿನ್ನಾಳ, ಪರಮೇಶ್ವರಯ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಕುಲಕರ್ಣಿ, ಹನುಮಂತಪ್ಪ ಕೊವಿ ಮಂಜುನಾಥ್ ಉದ್ದಾರ, ಮೇಘಾ ಹಿರೆಮಠ, ಗ್ರಾಮ ಪಂಚಾಯತಿ ಸದಸ್ಯರು ಮೇಘ ಹಿರೇಮಠ್, ಪೂರ್ಣಿಮಾ ಮಾಲ್ವಿ ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಗ್ರಾಮ ಪಂಚಾಯಿತಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತರು ಗ್ರಾಮದ 250 ಹೆಚ್ಚು ಜನರು ಆರೋಗ್ಯ ತಪಾಸಣೆ ಪ್ರಯೋಜನ ಪಡೆದುಕೊಂಡರು.