ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಕುರಿತು ಜಾಗೃತಿ ಕಾರ್ಯಕ್ರಮ
Awareness program on International Human Rights Day
ಬೈಲಹೊಂಗಲ 22: ಎಫ್.ಪಿ.ಐ. ಬೆಳಗಾವಿ ಶಾಖೆ, ಸ್ನೇಹ ಜ್ಯೋತಿ ಎಂಎಸ್‌ಎಂ. ಟಿ.ಆಯ್ ಬೈಲಹೊಂಗಲ, ಸಾವಲಿ ಫೌಂಡೇಶನ್ ಬೆಳಗಾವಿ, ಅನೇಕ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ. 21ರಂದು ಸ್ನೇಹ ಜ್ಯೋತಿ ಎಂಎಸ್‌ಎಂ. ಟಿ.ಆಯ್ ಸಭಾಭವನದಲ್ಲಿ ಟ್ರಾನ್ಸಜೆಂಡರ ಸಮುದಾಯಕ್ಕೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೊಫೆಸರ್ ಅಶ್ವಿನಿ ಪಿ. ಪರಬ ಇವರು ಮಾತನಾಡುತ್ತಾ ಸಮಾಜದಲ್ಲಿ ಸ್ವಾತಂತ್ರ್ಯವನ್ನು ಮತ್ತು ಸಮಾನ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಈ ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಸ್ವತಂತ್ರವಾಗಿ ತಮಗೆ ಬೇಕಾದ ಹಾಗೆ ವಾಸಿಸುವ, ಓಡಾಡುವ, ಬೇಕಾದನ್ನು ತಿನ್ನುವ, ಮಾತನಾಡುವ ಹಕ್ಕಿದೆ. ಮೂಲಭೂತ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕು. ಬಹಳಷ್ಟು ಸಂದರ್ಭಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿಟ್ಟಿರುವುದು ಕಂಡು ಬರುತ್ತಿದೆ. ಈ ಹಕ್ಕುಗಳನ್ನು ಗೌರವಿಸಬೇಕು ಹಾಗೂ ಮನುಷ್ಯನಿಗೆ ಕನಿಷ್ಠ ಅಗತ್ಯಗಳು ಸಿಗಬೇಕೆಂದು ಅಭಿಪ್ರಾಯ ಪಡುತ್ತಾ ಯಾವುದೇ ಲಿಂಗದ ಜನರು ಸಮಾನರು, ಟ್ರಾನ್ಸ ಜೇಂಡರ ಸಮುದಾಯಕ್ಕೂ ಕೂಡ ತಮ್ಮ ಹಕ್ಕುಗಳನ್ನು ಪಡೆಯಲು ಯಾವುದೇ ಹಿಜರಿಕೆಯಿಲ್ಲದೆ ಮುಂದೆ ಬರಬೇಕು. ಸಮಾಜದಲ್ಲಿ ಟ್ರಾನ್ಸ ಜೇಂಡರ ಸಮುದಾಯಕ್ಕೆ ಆಗುತ್ತ್ರಿರುವ ದೌರ್ಜನ್ಯಗಳನ್ನು ಮೆಟ್ಟಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ದಿನೇಶ ಪಾಟೀಲ, ಅಧ್ಯಕ್ಷರು ಸಾವಲಿ ಫೌಂಡೇಶನ್ ಇವರು ಮಾತನಾಡುತ್ತಾ ಟ್ರಾನ್ಸ ಜೆಂಡರ ಸಮುದಾಯಕ್ಕೆ ಇರುವ ಸೇವಾ ಸೌಲಭ್ಯಗಳನ್ನು ವಿವರಿಸಿ ಇವುಗಳನ್ನು ಪಡೆದು ಕೊಳ್ಳಲು ಕರೆ ನೀಡಿದರು. ಈ ಕಾರ್ಯಕ್ರಮದ ಸಂಪನ್ನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಮ ಕುಮಾರ ಸುನಗಾರ ಇವರು ಮಾತನಾಡುತ್ತಾ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಬಗ್ಗೆ ವಿವರಿಸಿ ಈ ಹಕ್ಕುಗಳನ್ನು ಪಡೆದು ಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎಫ್.ಪಿ.ಐ. ಬೆಳಗಾವಿ ಶಾಖೇ ಸಿಬ್ಬಂದಿ, ಸ್ನೇಹ ಜ್ಯೋತಿ ಎಂಎಸ್‌ಎಂ. ಟಿ.ಆಯ್ ಸಿಬ್ಬಂದಿ , ಸಾವಲಿ ಫೌಂಡೇಶನ್ ಬೆಳಗಾವಿ ಸಿಬ್ಬಂದಿ ಮತ್ತು ಟ್ರಾನ್ಸ್ ಜೆಂಡರ ಸಮುದಾಯದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೇಮಕುಮಾರಿ ಹೆಚ್. ವ್ಹಿ. ಇವರ ವಂದಾರೆ್ಣಯೊಂದಿಗೆ ಮುಕ್ತಾಯ ಗೊಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 