ಪರಿಸರ ಸ್ನೇಹಿ, ಮಾಲಿನ್ಯ ರಹಿತ ದೀಪಾವಳಿ ಹಬ್ಬ ಆಚರಿಸುವ ಕುರಿತು ಜಾಗೃತಿ ಕಾರ್ಯಕ್ರಮ

ಗದಗ: ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗದಗ ಕಛೇರಿ ವತಿಯಿಂದ ದಿ. 05ರಂದು ಮ. 2-00 ಘಂಟೆಗೆ ಹುಲಕೋಟಿ ಸಹಕಾರಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ, ಗದಗ ಕಾಲೇಜಿನ ವಿದ್ಯಾಥರ್ಿ ವಿದ್ಯಾಥರ್ಿ ಸಾರ್ವಜನಿಕರಿಗೆ, ಪಟಾಕಿ ಮಾರಾಟಗಾರರಿಗೆ ವ್ಹಿ.ಡಿ.ಎಸ್.ಟಿ.ಸಿ ಶಾಲೆಯ ಬಯಲು ಜಾಗದಲ್ಲಿ ನಿಮರ್ಿಸಿದ ಮಳಿಗೆಯಲ್ಲಿ ಪರಿಸರ ಸ್ನೇಹಿ ಹಾಗೂ ಮಾಲಿನ್ಯ ರಹಿತ ದೀಪಾವಳಿ ಹಬ್ಬ  ಆಚರಿಸುವ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, 

ಜಿಲ್ಲಾ ಪರಿಸರ ಅಧಿಕಾರಿಗಳಾದ ಬಿ. ರುದ್ರೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ  ಪಟಾಕಿಗಳನ್ನು ಸುಡುವುದರಿಂದ ಆಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಘನ ತ್ಯಾಜ್ಯ ವಸ್ತು ವಿಲೇವಾರಿ ಕುರಿತು ವಿವರವಾಗಿ ಪಟಾಕಿ ಮಾರಾಟಗಾರರಿಗೆ ಮತ್ತು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು,  ಪಟಾಕಿಗಳನ್ನು ಸುಡುವುದುರಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ಕಡಿಮೆ ಶಬ್ದ ಮಾಡುವ ಹಾಗೂ ಅಲ್ಪ ಪ್ರಮಾಣದ ಪಟಾಕಿಗಳನ್ನು ಮಾತ್ರ ಬಳಸಲು ತಿಳಿಸುತ್ತಾ  ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ 2000 ಕುರಿತು ವಿವರಿಸಿ ಪರಿಸರಕ್ಕೆ ಯಾವುದೇ ರೀತಿಯ ಮಾರಕಾಗದಂತೆ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವದು ಮುಖ್ಯ ಉದ್ದೇಶವೆಂದು ತಿಳಿಸಿದರು. ಸೂಕ್ತ ಪರಿಸರ ನಿಮರ್ಾಣಕ್ಕೆ ಪ್ರತಿಯೊಬ್ಬ ಪ್ರಜೆಯ ಪಾಲು ಅವಶ್ಯಕತೆ ಇದೆ ಎಂದು ತಿಳಿಸುತ್ತಾ ಹಣತೆ ಬೆಳಗಿಸಿ ದೀಪಾವಳಿ ಆಚರಿಸೋಣ ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹಾಗೂ ದೀಪಾವಳಿ ಸಮಯದಲ್ಲಿ 125 ಡೆಸಿಬಲ್ಸಗಿಂತ ಜಾಸ್ತಿ ಶಬ್ದ ಉಂಟುಮಾಡುವ ಪಟಾಕಿಗಳನ್ನು ಹಾಗೂ ಆಸ್ಪತ್ರೆ, ವೃದ್ದಾಶ್ರಮಗಳ ಹತ್ತಿರ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಟಾಕಿ ಮಾರಾಟಗಾರರು ಮತ್ತು ಸಾರ್ವಜನಿಕರಿಗೆ "ಹೆಚ್ಚು ಶಬ್ದ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಮತ್ತು ಬಳಸುವುದಿಲ್ಲ ಎನ್ನುವ  ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಡಗರ ಸಂಬ್ರಮ ಹಾಗೂ ಸಂತೋಷದಿಂದ ಬೆಳಕು ಹಚ್ಚುವ ಮೂಲಕ ಆಚರಿಸೋಣ ಎಂದು ತಿಳಿಸುತ್ತಾ ನಗರದ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರಿದರು. 

ಅಧ್ಯಕ್ಷತೆಯನ್ನು ವಹಿಸಿದ ಹುಲಕೋಟಿ ಸಹಕಾರಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿಧ್ಯಾಲಯ, ಗದಗ ಕಾಲೇಜಿನ ಉಪ ಪ್ರಾಚಾರ್ಯರಾದ ಬಿ.ಬಿ ಪಾಟೀಲ್ ಇವರು ಅಧ್ಯಕ್ಷತೆ ವಹಿಸಿ ಪಟಾಕಿಗಳನ್ನು ಮಿತವಾಗಿ ಬಳಸಿ ಪರಿಸರ ಹಾಳಾಗದಂತೆ ಎಚ್ಚರವಹಿಸೋಣ, ನಾವು ಪಟಾಕಿ ಸುಡುವುದನ್ನು ಬಿಟ್ಟರೆ ಪರಿಸರ ಶುದ್ದವಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿರೂಪಕರಾಗಿ ಭಾಗವಹಿಸಿದ ಹುಲಕೋಟಿ ಸಹಕಾರಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿಧ್ಯಾಲಯ, ಗದಗ ಕಾಲೇಜಿನ, ಉಪನ್ಯಾಸಕಿರಾದ ಹೇಮಾ ಹಳೇಮನಿ ಇವರು ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು. ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಹಾಗೂ ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.