ಇಂಡಸ್ಟ್ರಿಯಲ್ ಆಟೊಮೇಷನ್, ರೊಬೊಟಿಕ್ಸ್ ಕುರಿತು ಜಾಗೃತಿ
ಬೆಳಗಾವಿ 24: ಶ್ರೀನಿವಾಸ್ ಪ್ರಭು ಅವರು ತಮ್ಮ ಉಪನ್ಯಾಸದಲ್ಲಿ ಉತ್ಪಾದನೆ ಮತ್ತು ರೊಬೊಟಿಕ್ಸ್ ವಲಯದಲ್ಲಿನ ಪ್ರಸ್ತುತ ಮತ್ತು ಭವಿಷ್ಯದ ಪ್ರವೃತ್ತಿಗಳು, ತರಬೇತಿ ಅಂಶಗಳು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಭು ಅವರು ವಿವಿಧ ಕ್ಷೇತ್ರಗಳಲ್ಲಿ ರೋಬೋಟಿಕ್ ಅಪ್ಲಿಕೇಶನ್‌ಗಳ ಅಭಿವೃದ್ಧಿ ಕುರಿತು ಮಾತನಾಡಿದರು. ಅಧ್ಯಕ್ಷ ಡಾ. ಎಫ್. ವಿ. ಮಾನ್ವಿ, ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂಡಿ ಮತ್ತು ಗೌರವ ಅತಿಥಿ ಡಾ. ಡಿ. ಎಚ್. ರಾವ್ (ಮಾಜಿ ಡೀನ್, ವಿಟಿಯು ಬೆಳಗಾವಿ) ಮತ್ತು ಡಾ. ಕೆ. ರವಿ (ಮಾಜಿ ನಿರ್ದೇಶಕ, ಎಎಂಜಿಒಐ, ಕೊಲ್ಹಾಪುರ) ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ, ನಿಪ್ಪಾಣಿ ಮತ್ತು ಕೊಲ್ಲಾಪುರದ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಮುಖ್ಯಸ್ಥರು ಮತ್ತು ಅಧ್ಯಾಪಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.