ಬಾಲಕಾಮರ್ಿಕ ಪದ್ಧತಿ ನಿಮರ್ೂಲನೆಗೆ ಜಾಗೃತಿ ಮುಖ್ಯ: ಎನ್.ಮುನಿರಾಜು

  ಧಾರವಾಡ 30: ಬಾಲ ಮತ್ತು ಕಿಶೋರ ಕಾಮರ್ಿಕ ಮುಕ್ತ ವಲಯ ಘೋಷಣೆಗಾಗಿ ವ್ಯಕ್ತಿ, ಕುಟುಂಬ ಸಮುದಾಯದಲ್ಲಿ ಅರಿವು ಜಾಗೃತಿ ಮೂಡಿಸಲು ಸಕರ್ಾರದ ಎಲ್ಲ ಇಲಾಖೆಗಳ ಆಧಾರ ಸ್ತಂಭವಾದ ಅಂಗನವಾಡಿ ಕಾರ್ಯಕತರ್ೆಯರ ಪಾತ್ರ ಬೇರು ಮಟ್ಟದಲ್ಲಿ ತುಂಬಾ ಮಹತ್ವದ್ದಾಗಿರುತ್ತದೆ. ಬಾಲ ಮತ್ತು ಕಿಶೋರ ಕಾಮರ್ಿಕತೆಗೆ ಮೂಲಕಾರಣಗಳು ಅನಕ್ಷರತೆ, ಬಡತನ ನಿಮರ್ೂಲನೆಗಾಗಿ ಸಕರ್ಾರವು ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಅವುಗಳ ಸದುಪಯೋಗವಾಗಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದರ್ೇಶಕ ಮುನಿರಾಜು ಹೇಳಿದರು.

ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ರಾಷ್ಟ್ರೀಯ ಬಾಲ ಕಾಮರ್ಿಕ ಯೋಜನಾ ಸಂಘವು ಅಂಗನವಾಡಿ ಕಾರ್ಯಕತರ್ೆಯರಿಗೆ ಬಾಲಕಾಮರ್ಿಕ ಹಾಗೂ ಕಿಶೋರಕಾಮರ್ಿಕ ಮುಕ್ತ ಜಿಲ್ಲೆಯ ಘೋಷಣೆಗಾಗಿ ಒಖಔಕ ಅಳವಡಿಕೆ ಕುರಿತು ಏರ್ಪಡಿಸಿರುವ ತರಬೇತಿ ಕಾಯರ್ಾಗಾರದ 2ನೇ ದಿನದ ಕಾರ್ಯಕ್ರಮಗಳನ್ನು (29-11-2018) ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.  

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚಂದ್ರಪ್ಪ ಮಾತನಾಡಿ, ನಿರುದ್ಯೋಗ ನಿವಾರಣೆಗೆ ಕೌಶಲ್ಯ ಅಭಿವೃದ್ಧಿ ಮಹತ್ವದ್ದಾಗಿದ್ದು, ಸಕರ್ಾರವು ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಜೊತೆಗೆ ಉದ್ಯೋಗ ಅವಕಾಶ ಕಲ್ಪಿಸುತ್ತಿದೆ ಎಂದರು. 

ಬಿ.ಡಿ.ಎಸ್.ಎಸ್. ಸಂಸ್ಥೆಯ ನಿದರ್ೇಶಕ ಜೇಕಬ್ ಆಂತೋನಿ ಮಾತನಾಡಿ, ಬಾಲ ಹಾಗೂ ಕಿಶೋರ ಕಾಮರ್ಿಕ ಮುಕ್ತ ವಲಯವನ್ನಾಗಿಸಲು ಮಕ್ಕಳ ಸಹಾಯವಾಣಿ ಮತ್ತು ರಾಷ್ಟ್ರೀಯ ಬಾಲಕಾಮರ್ಿಕ ಯೋಜನಾ ಸಂಘ ಜಂಟಿಯಾಗಿ ಕಾಯರ್ಾಚರಣೆ ಮಾಡಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ.   ಅಂಗನವಾಡಿ ಕಾರ್ಯಕತರ್ೆಯರ ಸಹಕಾರ ಈ ಕಾರ್ಯಕ್ಕೆ ಅವಶ್ಯವಿದೆ ಎಂದರು. 

ಬಿ.ಆರ್. ಜಾಧವ ಮಾತನಾಡಿ, ಕಾಮರ್ಿಕ ಇಲಾಖೆಯ ಸೌಲಭ್ಯಗಳು ಹಾಗೂ ಬಾಲಕಾಮರ್ಿಕ ಹಾಗೂ ಕಿಶೋರ ಕಾಮರ್ಿಕ ನಿಮರ್ೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿದರ್ೇಶಕ ಬಸವರಾಜ ವರವಟ್ಟಿ ಮಾತನಾಡಿ, ಅಂಗನವಾಡಿ ಕಾರ್ಯಕತರ್ೆಯರು ತಮ್ಮ ವ್ಯಾಪ್ತಿಯಲ್ಲಿ ಯಾರಾದರೂ ಮಕ್ಕಳು ಕೆಲಸ ಮಾಡುವುದು ಕಂಡು ಬಂದರೆ ಅವರಿಗೆ ತಿಳಿ ಹೇಳಿ ಮುಖ್ಯವಾಹಿನಿಗೆ ಸೇರಿಸುವ ವ್ಯವಸ್ಥೆ ಮಾಡಬೇಕೆಂದರು.. 

ಚಂದ್ರಶೇಖರ  ನಿರೂಪಿಸಿದರು. ರಾಷ್ಟ್ರೀಯ ಬಾಲಕಾಮರ್ಿಕ ಯೋಜನಾ ಸಂಘದ ಯೋಜನಾ ನಿದರ್ೇಶಕ ಬಾಳಗೌಡ ಪಾಟೀಲ ಸ್ವಾಗತಿಸಿದರು. ಪ್ರದೀಪ ಮೇಲಗಡೆ ಹಾಗೂ ಪ್ರಕಾಶ ಕೊಡ್ಲಿವಾಡ ಉಪನ್ಯಾಸ ನೀಡಿದರು. ಕಾಡೇಶ ಚಣ್ಣನವರ ವಂದಿಸಿದರು.