ಪೆ.18ರಂದು ಅರಿವಿನ ಅಂಗಳ ಕಾರ್ಯಕ್ರಮ
ಕೊಪ್ಪಳ 16 : ಬೆಳಕು ಚಾರಿಟ್ರೇಬಲ್ ಟ್ರಸ್ಟ್ ಬೆಂಗಳೂರು,ಶ್ರೀಅರುಣೋದಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಚಿಲವಾಡಗಿ ಹಾಗೂ ಮನು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಚಿಲವಾಡಗಿ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಅರಿವಿನ ಅಂಗಳ ಎಂಬ ಕಾರ್ಯಕ್ರಮವನ್ನು ತಾಲೂಕಿನ ಬಹದ್ದೂರಬಂಡಿಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆ.18 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸಿ.ಇ.ಎನ್.ಪೋಲಿಸ್ ರಾಣೆಯ ಉಪ ಅಧಿಕ್ಷಕರಾದ ಯಶವಂತಕುಮಾರ.ಎಸ್.ಬಿ.ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೇಲು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ,ನಾಟಕ ಅಕಾಡಮಿ ಸದಸ್ಯರಾದ ಚಾಂದಪಾಷಾ ಕಿಲ್ಲೇದಾರ,ಗ್ರಾ.ಪಂ.ಸದಸ್ಯರಾದ ದಾದಾಪೀರ ಮಂಡಲಗೇರಿ, ಮಹೆಬೂಬಿ ಹಿರೇಮಸೂತಿ,ಹುಸೇನಬೀ ಸಣ್ಣಮಸೂತಿ, ಪಾರ್ವತಮ್ಮ ಕುರಿ,ಮಂಜುನಾಥ ನಡಲಮನಿ,ಮಹಮ್ಮದ ರಫಿ,ಕೆಂಚಮ್ಮ ನಡಲಮನಿ,ಸಿ.ಆರ್.ಪಿ.ಹನುಮಂತಪ್ಪ ಕುರಿ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ ಚಿಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.