ಸರ್ಕಾರದ ಸೌಲಭ್ಯಗಳ ಕುರಿತು ವಿಕಲಚೇತನರಲ್ಲಿ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಸುನೀಲ್ ಕುಮಾರ

ಕೊಪ್ಪಳ 12: ವಿಕಲಚೇತನರ ವೈಯಕ್ತಿಕ ಅವಶ್ಯಕತೆಗಳನ್ನು ಗುರುತಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿಕಲಚೇತನರಿಗೆ ಜಾಗೃತಿ ಮತ್ತು ಅರಿವು ಮೂಡಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕರಿ ಪಿ. ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾ ನಗರಸಭೆ ಕಾರ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ), ಕೊಪ್ಪಳ ಆರ್.ಪಿ.ಡಿ ಟಾಸ್ಕ್ ಫೋಸರ್್,ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಹಾಗೂ ಸಕರ್ಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು ಇವರ ಸಹಯೋಗದಲ್ಲಿ ಸಾರ್ವಜನಿಕರ ಮೈದನದಲ್ಲಿ ಏರ್ಪಡಿಸಿದ್ದ ನಗರಸಭೆ ವ್ಯಾಪ್ತಿಯಲ್ಲಿ ವಿಕಲಚೇತನರ ಅಗತ್ಯತೆಗಳನ್ನು ಗುರುತಿಸುವ ಹಾಗೂ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. 

ಕೊಪ್ಪಳ ನಗರ ಸಭೆಯು ತಮ್ಮ ವ್ಯಾಪ್ತಿಯಲ್ಲಿ ಬರುವ ಒಟ್ಟು 31 ವಾಡರ್್ಗಳಲ್ಲಿ  ಅಂಗವಿಕಲರ ಸಮೀಕ್ಷೆಯನ್ನು ಮಾಡಿದ್ದು, ನಗರದಲ್ಲಿ 1024 ಜನ ವಿಕಲಚೇತನರಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು 21 ರೀತಿಯ ವಿಕಲಚೇತನರಿದ್ದು ಸಕರ್ಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಕುರಿತು ಶಿಬಿರದಲ್ಲಿ ಮಾಹಿತಿ ಪಡೆಯಬಹುದಾಗಿದೆ. ನಗರಸಭೆಯಿಂದ ವಿಕಲಚೇತರಿಗೆ ಅನೇಕ ರೀತಿಯ ಸೌಲಭ್ಯಗಳು ಇದ್ದು ಅವುಗಳನ್ನು ಹಂತ ಹಂತವಾಗಿ ನೀಡುತ್ತಿದ್ದಾರೆ. ವಿಕಲಚೇತನರು ಅನೇಕ ರೀತಿಯ ನ್ಯೂನ್ಯತೆಗಳಿಗೆ ಒಳಗಾಗಿರುತ್ತಾರೆ ಅಂತಹ ವಿಕಲಚೇತನರು ಈ ಶಿಬಿರದಲ್ಲಿ ಭಾಗವಹಿಸಿ ತಜ್ಞ ವೈದ್ಯರಿಂದ ಸಲಹೆಗಳನ್ನು ಪಡೆಯಬಹುದಾಗಿದೆ. ಹಾಗೂ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತಹ ವಿಷಯಗಳ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ. ಈ ರೀತಿಯ ಶಿಬಿರುವು ರಾಜ್ಯದಲ್ಲೆ ಪ್ರಥಮ ಶಿಬಿರವಾಗಿದೆ. ವಿಕಲಚೇತನರ ವೈಯಕ್ತಿಕ ಅವಶ್ಯಕತೆಗಳನ್ನು ಗುರತಿಸಿ ಅವರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಬೇಕು ಎಂದರು. 

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿಸ್ತಕ ಡಾ.ದಾನರಡ್ಡಿ, ಸರ್ಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಲಮ್ಮಾಣಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್ ಮೂಲಿಮನಿ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ವೀರಣ್ಣ ಹಾಗೂ ನಗರಸಭೆ ಸಿಬ್ಬಂದಿಗಳು ಸೇರಿದಂತೆ ಸಕರ್ಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು ವಿದ್ಯಾಥಿನಿಯರು ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.