ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞಾ ವಿಧಿ ಸ್ವೀಕಾರ

ಗದಗ 02: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಜಾಗೃತಿ ಅರಿವು ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಭೋಧಿಸಿದರು. ಗದಗ ಜಿಲ್ಲಾಧಿಕಾರಿಗಳ ಅಡಿಟೋರಿಯಂನಲ್ಲಿ ಜರುಗಿದ ಜಾಗೃತಿ ಅರಿವು ಸ್ಪತಾಹದ ಅಂಗವಾಗಿ ನಡೆದ ಕಾರ್ಯಕ್ರಮದ ಬ್ಗೆ ಜಿಲ್ಲಾದಿಕಾರಿ ಎಂ.ಜಿ.ಹಿರೇಮಠ ಭಾಗವಹಿಸಿ ಸಾವ್ಜನಿಕ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರ ತಡೆದು ಉತ್ತಮ ಆಡಳಿತ ನೀಡಲು ಎಲ್ಲ ಸಕರ್ಾರಿ ಇಲಾಖೆಗಳ ಬದ್ಧವಾಗಬೇಕೆಂದು ತಿಳಿಸಿದರು. ಗದಗ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.