ಮಹಿಳೆಯರಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿ
ಧಾರವಾಡ04: ಜಿಲ್ಲಾ ಅಭಿಯಾನ ಪರಿಸರ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು,ಸಮಿತಿಯು ಹಾಗೂ ಹು- ಧಾ ನಾಗರಿಕ ಪರಿಸರ ಸಮಿತಿಯೊಂದಿಗೆ ಜಂಟಿಯಾಗಿ ಮಹಿಳೆಯರಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇದೇ ಸಂದರ್ಭದಲ್ಲಿ ಸಮಿತಿಯ ಉದ್ಘಾಟನಾ ಸಮಾರಂಭವು ಪರಿಸರ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ರಂಗಭೂಮಿ ನಿದೇ9ಶಕಿ ವಿಶ್ವೇಶ್ವರಿ ಹಿರೇಮಠರವರು ಮಹಿಳೆಯರೆಲ್ಲಾ ಒಗ್ಗಟ್ಟಾಗಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕೆಂದು ಕರೆಕೊಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹು- ಧಾ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾದ ಸಂತೋಷ ಆನಿಶೆಟ್ಟರವರು ಕಾಯ9ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ, ಹಣಕಾಸಿನ ವ್ಯವಸ್ಥೆ ಅತ್ಯಗತ್ಯ ಸಮಾಜದ ಒಳಿತಿಗಾಗಿ ಕೊಡುಗೈದಾನಿಗಳು ಮುಂದೆ ಬರಬೇಕಿದೆ ಸಮಿತಿಯು ಅಖಖ ಅನುದಾನಕ್ಕಾಗಿ ಹಕ್ಕೊತ್ತಾಯ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು. ಪರಿಸರದ ಉಳಿವಿಗಾಗಿ ಮಹಿಳೆಯರು ಸ್ವಯಂ ಸೇವಕರಾಗಿ ಭಾಗವಹಿಸಬೇಕು ಎಂದು ಕರೆ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಹು- ಧಾ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ, ಪರಿಸರವಾದಿ ಶಂಕರ ಕುಂಬಿಯವರು ಮಾತನಾಡಿ, ಪರಿಸರ ಉಳಿವಿಗಾಗಿ ಹೋರಾಡಿದ ತಮ್ಮ ದಿನಗಳನ್ನು ಮೆಲುಕು ಹಾಕುತ್ತಾ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅಭಿಯಾನಕ್ಕೆ ಕೈ ಜೋಡಿಸಬೇಕು ಅಲ್ಲದೇ ಮಹಿಳೆಯರು ತಮ್ಮ ಮಕ್ಕಳಲ್ಲಿ ಪರಿಸರ ರಕ್ಷಣೆ ಕುರಿತು ತಿಳುವಳಿಕೆ ನೀಡುವಂತ ಕೆಲಸ ಮಾಡಬೇಕು. ಮತ್ತು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸುವ ಬದಲು ಮಗುವಿನ ಹೆಸರಿನಲ್ಲಿ ಸಸಿ ನೆಟ್ಟು ಆಚರಿಸುವಂತಾಗಬೇಕು. ಪ್ಲಾಸ್ಟಿಕ್ ಬಳಕೆ ಮತ್ತು ಪಟಾಕಿಗಳನ್ನು ನಿಷೇಧಿಸುವ ಕುರಿತು ಜಾಗೃತಿ ಮೂಡಿಸುವಂತ ಕಾರ್ಯಕ್ರಮವಾಗಬೇಕು ಮತ್ತು ಮರಗಳ ಮೇಲೆ ಅಂಟಿಸಿದ ಜಾಹೀರಾತುಗಳನ್ನು ಅಂಟಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಅಧ್ಯಕ್ಷೆ ಜಯಶ್ರೀ ಗೌಳಿ, ,ಕಾರ್ಯದಶರ್ಿಗಳಾದ ನಂದಾ ಗುಳೇದಗುಡ್ಡ ಉಪಸ್ಥಿತರಿದ್ದರು. ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ, ಸತೀಶ್ ತುರಮರಿ, ಲಕ್ಷಣ ಬಕಾಯಿ ,ಸಮಿತಿಯ ಪದಾಧಿಕಾರಿಗಳಾದ ದೀಪಾ ಪಾಟೀಲ, ಸುಮ ಗಿರಡ್ಡಿ, ಲತಾ ಕುಂಬಾರ, ಕಲಾವತಿ ಹೂಗಾರ, ಗೀತಾ ಕುಂಬಿ, ಸುನೀತಾ ತಪಶೆಟ್ಟಿ ಹಾಜರಿದ್ದರು.
ಈ ಕಾರ್ಯಕ್ರಮದ ಮೊದಲು ಜರುಗಿದ ಕೈಚೀಲ ಹೊಲೆಯುವ ಸ್ಪಧರ್ೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಥಮ- ತಬಸುಮ್ ಔರಾದಿ, ದ್ವಿತೀಯ- ಸುನೀತಾ ಕಪಾಲಿ, ತೃತೀಯ ಸೈರಾಬಾನು ಹಂದ್ರಾಳ ,ಸಮಾಧಾನಕರ- ವಿಜಯಾ ಮುದಿಗೌಡರ, ಮುಕ್ತಾ ಕುಡ್ಲಣ್ಣವರ, ರತ್ನ ಪಾಟೀಲ ಬಹುಮಾನಗಳನ್ನು ಪಡೆದರು. ತೀಪು9 ಗಾರರಾಗಿ ಸುನಂದಾ ನಿಂಬನಗೌಡರ, ಜ್ಯೋತಿ ಬಿಜೂರ, ಚಿನ್ಮಯಿ ಪಾಟೀಲ ಭಾಗವಹಿಸಿದ್ದರು . ರಾಜೇಂದ್ರಕುಮಾರ ಮಠ ನಿರೂಪಿಸಿದರು ಕಾಯ9ದಶಿ9ಗಳಾದ ನಂದಾ ಗುಳೇದಗುಡ್ಡ ವಂದಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 