ಸಾಂಕ್ರಾಮಿಕ ರೋಗ ಗಳ ಕುರಿತು ಅರಿವು ಕಾರ್ಯಕ್ರಮ
ಯರಗಟ್ಟಿ 19 : ತಾಲೂಕಿನ ಕಿಟದಾಳದ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು.100 ದಿನಗಳ ಟಿಬಿ ಮುಕ್ತ ಭಾರತ ಅಭಿಯಾನವು ದಿನಾಂಕ-07-12-2024 ರಿಂದ 17-03-2024 ರವರೆಗೆ ಜರುಗಲಿದೆ. ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿಕ್ಷಯರೋಗ ಪತ್ತೆ ತೀವ್ರ ಗೊಳಿಸುವದುಕ್ಷಯರೋದಿಂದಾಗುವ ಮರಣದ ಪ್ರಮಾಣವನ್ನು ಕಡಿಮೆ ಮಾಡುವದು ಅಭಿಯಾನದ ಉದ್ದೇಶ ವಾಗಿದೆ.60 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಇದ್ದವರಿಗೆ, ಎ???ವಿ ಏಡ್ಸ್ ಇದ್ದವರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ,ಕ್ಷಯರೋಗಿಗಳ ಸಂಪರ್ಕದಲ್ಲಿದ್ದವರಿಗೆ ಈ ರೋಗವು ತೀವ್ರವಾಗಿ ಹರಡುವ ಸಾಧ್ಯತೆ ಇರುವುದು.ಆದ್ದರಿಂದ ಎರಡು ವಾರಕ್ಕಿಂತ ಹೆಚ್ಚಿಗೆ ಕೆಮ್ಮಿನೊಂದಿಗೆ ಕಫ, ಕಫದಲ್ಲಿ ರಕ್ತ ಬೀಳುವುದು ಎದೆ ನೋವು ಸಾಯಂಕಾಲ ಜ್ವರ ತೂಕ ಕಡಿಮೆಯಾಗುವುದು ಹಸಿವಾಗದೆ ಇರುವದು ಇಂತಹ ಲಕ್ಷಣಗಳನ್ನು ಹೊಂದಿದವರು ಕಫ, ಸಿಬಿ ನೆಟ್, ಮಾಂಟೋ, ಎಕ್ಸರೇ ಪರೀಕ್ಷೆಗಳ ಮೂಲಕ ಕ್ಷಯರೋಗವನ್ನು ಖಚಿತ ಪಡಿಸಿಕೊಳ್ಳುವದು ನಂತರಆರು ತಿಂಗಳ ಚಿಕಿತ್ಸೆ ಪಡೆದಲ್ಲಿ ಕ್ಷಯ ರೋಗ ಸಂಪೂರ್ಣ ಗುಣವಾಗುವುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಆಯ್ ಆರ್ ಗಂಜಿ ಹೇಳಿದರು.ಬಾಲಕಿಯರ ವೈಯಕ್ತಿಕ ಆರೋಗ್ಯ ಮುಟ್ಟಿನ ಶುಚಿತ್ವ ಸ್ಯಾನಿಟರಿ ಪ್ಯಾಡ ಬಲಕೆಯ ಬಗ್ಗೆ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಯಾದ ಸಮಿತ್ರಾ ಪೂಜೇರ ಮಾಹಿತಿ ನೀಡಿದರು.ಸಮುದಾಯ ಆರೋಗ್ಯಾಧಿಕಾರಿಯಾದ ಮಹಾಲಿಂಗ ತರಗೋಲ ಇವರು ಕುಷ್ಠರೋಗ ಸಾಂಕ್ರಾಮಿಕ ರೋಗ ವಾಗಿದ್ದು ತಿಳಿಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಣಾನವಿಲ್ಲದ ಕಲೆಗಳು ಕೈ ಕಾಲು ಜೋಮು ಹಿಡಿದಲ್ಲಿ ಅದು ಕುಷ್ಠರೋಗ ವಾಗಿರಬಹುದು ಆರೋಗ್ಯ ಸಿಬ್ಬಂದಿಯ ವರಲ್ಲಿ ತೋರಿಸಿ ಚಿಕಿತ್ಸೆ ಪಡೆಯಲು ತಿಳಿಸಿದರು.ಈ ವೇಳೆ ಮುಖ್ಯ ಗುರುಗಳಾದ ಆರ್. ಎಸ್. ತಳವಾರ, ಮೆಲ್ವಿಚಾರಕಿಯಾದ ಲಕ್ಷ್ಮಿ ಪಾಟೀಲ, ಶಾಲಾ ಶಿಕ್ಷಕರು ಅಂಗನವಾಡಿ-ಆಶಾಕಾರ್ಯಕರ್ತೆಯರು ವಿದ್ಯಾರ್ಥಿಗಳು ಹಾಜರಿದ್ದರು.